Friday, 8 April 2011















ಕಿರು ಹಣತೆ..........

ನಿನ್ನ ಮುನಿಸೂ ಕೆಲವೊಮ್ಮೆ ಖುಷಿ ತರುತ್ತದೆ ಗೆಳೆಯ....
ನಾನು ಇಡಿಯಾಗಿ ನಿನ್ನವಳೆಂದು
ನನ್ನ ಆನಂದದ ಹಕ್ಕು ನಿನ್ನದೆಂದು...
ನನ್ನ ಕಂಬನಿ ಒರೆಸುವ ಕರ ನಿನ್ನದು ಮಾತ್ರವಾಗಿರಬೇಕೆಂದು ...
ನನ್ನ ಹೆಜ್ಜೆಯಾ ಗೆಜ್ಜೆಯ ದನಿ ನಿನಗೆ  ಮಾತ್ರ ಕೇಳಬೇಕೆಂದು......
ನನ್ನ ನಗು ನಿನ್ನ ನಗುವಿನೊಂದಿಗೆ  ಬೆರೆಯಬೇಕೆಂದು.....
ನನ್ನ ಪುಟ್ಟ ಹೃದಯದ ತುಂಬೆಲ್ಲ ನಿನ್ನದೇ ಚಿತ್ರವಿರಬೇಕೆಂದು....
ನೀನೆಣಿಸುವ ಪರಿ ಮುದ ನೀಡುತ್ತದೆ .....
ನನಗೂ ಇದೆಲ್ಲ ಪ್ರಿಯವೇ ಗೆಳೆಯ.....
ನನಗೂ ನೀನೆಂದರೆ  ಪ್ರೀತಿಯಿದೆ....ಭಾವವಿದೆ...ರಾಗವಿದೆ...
ಆದರೂ ನಾನು ನಿನಗೆ ಹೇಳಲಾರೆ.....
ತಾವರೆ ಎಲೆಯ ಮೇಲಿನ ಪುಟ್ಟ ಹನಿಯಂತೆ....
ದೇವರ ಮುಂದಿನ ಕಿರು ಹಣತೆಯಂತೆ......
ಉಳಿದು  ಹೋಗುವೆ ಗೆಳೆಯ ........
ಏಕೆಂದರೆ
ಎಂದಾದರು ...ನೀನು ನನ್ನಿಂದ  ದೂರಾದರು
ನಿನ್ನ ಮನದಲ್ಲಿ ನಿನ್ನ ಬಗೆ ಬೇಸರ ಮೂಡದಿರಲಿ...
ಅವಳ ತೊರೆದೆನಲ್ಲ ಎಂಬ ಸಂಕಟ ಕಾಡದಿರಲಿ...
ನಾನು ಹೀಗೆ ಉಳಿಯುವೆ ಗೆಳೆಯ ....
ಹೇಳದೆಯೇ ......ನಿನ್ನ ಆರಾಧಿಸುತ್ತ .....ಪ್ರೀತಿಸುತ್ತ.....

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...