Thursday 19 May 2011

ಪ್ರಶ್ನೆ















ಮಳೆಯಾಗುತ್ತಿದೆ.....
ನಾ ಬೆಳೆಸಿದ ಗಿಡಗಳು ನಗುತ್ತಿವೆ
ಹನಿಹನಿಯನ್ನು ಆಸ್ವಾದಿಸುತ್ತಿವೆ
ಹೊಸ ಮದುಮಗಳಂತೆ ಸಂಭ್ರಮಿಸುತ್ತಿವೆ ... 

ಕೇಳಿಬಿಡಲೇ ನನ್ನ ಪ್ರಿಯ ಗಿಡಗಳೇ
ಮನದೊಳಗೆ ಮೂಡಿದ ಪ್ರಶ್ನೆಯನ್ನು
ಹೇಳುವಿರೆ ನಿಮ್ಮ ಉತ್ತರವನ್ನು.. 

ನಾ ನಿಮ್ಮ ಬೆಳೆಸಿದೆ
ನೀರುಣಿಸಿದೆ
ಕಾಪಾಡಿದೆ 
ಈ ಮಳೆರಾಯನ ಆಗಮನವಾದೋಡೆ
ಏನು ಉತ್ಸಾಹ
ಏಕಿ ಉಲ್ಲಾಸ
ನನಗಿಂತ ಅವನೇ ಪ್ರಿಯನೇ.... 

ಸಸಿಗಳು ನಕ್ಕವು...ನಗುತ್ತಲೇ ಇದ್ದವು... 

ಎಲ್ಲರ ನಡುವೆಯೂ ಅವನ ನೆನಪಲ್ಲೇ ಮಿಂದೇಳುವ 
ನೂರು ದನಿಗಳಿದ್ದರು ಅವನ ಪಿಸುನುಡಿಗೆ ಕಾತರಿಸುವ
ಗಳಿಗೊಮ್ಮೆ ಮನದಲ್ಲಿ ಅವನ ಹೆಸರೇಳಿ ನಗುವ 
ತಂಗಾಳಿಗೆ ಹಾರಿದ ಸೆರಗಿನಲ್ಲೂ ಅವನ ಅರಸುವ 

ನಿನ್ನ ನೀನು ಕೇಳಿಕೋ ಎಂಬಂತೆ ನಕ್ಕವು ನಗುತ್ತಲೇ ಇದ್ದವು..

Saturday 14 May 2011

ಹೆಜ್ಜೆ.............








ನೀನಿಟ್ಟ ಮೊದಲ ಹೆಜ್ಜೆ ಗುರುತು
ಮನದಾಳದಲ್ಲಿ ಮಾಸದೆ ಉಳಿದಿದೆ ಒಲವೆ...

ಇಳೆಯ ಸೋಕಿದ ಮೊದಲ ಹನಿಯಾ ತೆರದಿ...
ಹೂವ ಚುಂಬಿಸಿದ ಮುಂಜಾನೆಯ ಇಬ್ಬನಿಯಂದದಿ
ಪುಟ್ಟ ಮಲ್ಲಿಗೆ ಹೂ ಬಿರಿದ ಅಂದದಿ...
ಸದ್ದೇ ಇಲ್ಲದ ಸುಳಿವೇ ನೀಡದ ಹೆಜ್ಜೆಯ ಗೆಜ್ಜೆನಾದ...
ನೂರಾರು ಹೆಜ್ಜೆಗಳ ನಡುವೆಯೂ ಉಲಿಯುತ್ತಲೇ ಇದೆ ....

 ನಿನ್ನ  ಹೆಜ್ಜೆಯ ಗೆಜ್ಜೆದನಿ
ಮೊಗದಲ್ಲೊಂದು ನಗುವ ಮೂಡಿಸಿ...
ಮನದಲ್ಲೊಂದು ಮಿಂಚ  ಹರಿಸಿ...
ತನುವಲ್ಲೊಂದು ಕಂಪನ ತರಿಸಿ..
ಉಲಿಯುತ್ತಲೇ ಇದೆ...

ಉಲಿವ ನಿನ್ನ ಗೆಜ್ಜೆಯೊಡನೆ  ನನ್ನ ಮನದ ಮೌನವೀಣೆ
ಪ್ರೇಮ ಸುಧೆಯ  ಹರಿಸಿದೆ ಎಲ್ಲವನ್ನು ಮರೆಸಿದೆ.
ಹೆಜ್ಜೆಯನ್ನು  ಉಳಿಸಿದೆ ....

Thursday 12 May 2011

ಆಕೆ ಈತ ಸೇರಿ ಅವರು..




















ಆಕೆ....
ಹೊಸ ಪುಸ್ತಕವಾಗುವ ಬಯಕೆ ಆಕೆಗೆ
ಮತ್ತೊಮ್ಮೆ ಶುರು ಮಾಡಲೇ ಮೊದಲಿನಿಂದ ಎಂದ ಮೊಗದಲ್ಲಿ ಹೊಸ ಚಿಗುರಿನ ಕಳೆ
ಹಳೆಯದನ್ನು ಮರೆತು ಬಿಡುವೆ ಎಂದವಳ ದನಿಯಲ್ಲಿ ಹೊಸ ರಾಗ
ಅವನಿಗಾಗಿ ನಾನು...ನನಗಾಗಿ ಅವನು ಎಂದವಳ ನಗುವಿನಲ್ಲಿ ನವೋಲ್ಲಾಸ...

ಈತ...
ಹೊಸ ಹೊತ್ತಗೆಯಾಗುವ ಮನ ಹೊತ್ತವ
ಮತ್ತೊಮ್ಮೆ ಹೊಸ ಬದುಕ ಕಟ್ಟುವೆ ಎಂದವನ ಮೊಗದ ತುಂಬಾ ಕಾಮನ ಬಿಲ್ಲು
ಕಳೆದದ್ದೆಲ್ಲ ನಮ್ಮದಲ್ಲ...ಬರುವುದೆಲ್ಲ ನಮಗಾಗಿ ಎಂದವನಲ್ಲಿ ಜೀವನೋತ್ಸಾಹ
ನಾವು ಕೊಟ್ಟು ಪಡೆದ ನೋವೆಲ್ಲ ಕಳೆದುಬಿಡು ಎಂದವನ ಕಣ್ಣಲ್ಲಿ ನಿನಗಾಗಿ ನಾನು ಎಂಬ ಛಲ

ನಾನು.....
ಮುಚ್ಚಿಬಿಡಿ ಬದುಕಿನ ನೋವಿನ ಪುಟಗಳನ್ನು.
ತೆಗೆದುಬಿಡಿ ಗೊಂದಲಗೊಳಿಸುವ ಬಂಧಗಳನ್ನು.
ಕಳಚಿಬಿಡಿ ನಾನು ನೀನು ಎಂಬ ಅಹಮನ್ನು
ಈ ಚಿಗುರು ಹೊಸ ಬಾಳಿನ ಹೂವಾಗಲಿ
ಈ ಕಾಮನ ಬಿಲ್ಲು ಮುಂಬರುವ ಪ್ರೀತಿ ಮಳೆಗೆ ಬಣ್ಣ ತುಂಬಲಿ...
ಒಲವಿನ ಹಣತೆ ಬೆಳಗಿಸಿ.

ಈಗ ಆಕೆ ಆಕೆಯಲ್ಲ...ಈತ ಈತನಲ್ಲ...
ಆಕೆ ಈತ ಸೇರಿ ಅವರು...
ಮನದ ತುಂಬಾ ಹಾರೈಕೆ ನನ್ನದು..

Saturday 7 May 2011

ಮುತ್ತು


 


















ಆ ರುದ್ರ ರಮಣೀಯ ಶರಧಿಯಲ್ಲಿ
ನಾನೊಂದು ಪುಟ್ಟ ಕಪ್ಪೆಚಿಪ್ಪಾಗ್ಗಿದ್ದೆ .
ಕಾಲ ಹಾಗು ಅಲೆಗಳ ಹೊಡೆತಕ್ಕೆ ತತ್ತರಿಸಿದ್ದೆ...
ಸಮುದ್ರ ರಾಜನ ಒಡಲಲ್ಲಿ ನನ್ನಂತಹ ಅಸಂಖ್ಯ ಚಿಪ್ಪುಗಳು...
ಅಲ್ಲೇ ಹುಟ್ಟಿ ..ಅಲ್ಲೇ ಇದ್ದು,.ಅಲ್ಲೇ ಅಂತ್ಯ ಕಾಣುವ
ನೂರಾರು ಜೀವಿಗಳು..

ಎಲ್ಲಿಂದಲೋ ಬಂದ ಪ್ರೀತಿಯ ಪುಟ್ಟ ಹನಿಯೊಂದು
ನನ್ನೊಡಲ ಸೇರಿ ಬಿಟ್ಟಿತು..
ಏನೋ ರೋಮಾಂಚನ ...
ಏನೋ ಹಿತವಾದ ಭಾವ...
ನನ್ನ ಧೂಳು ಹಿಡಿದ ಮೇಲ್ಮೈಯನ್ನು ಕೊಡವಿತು..
ನನ್ನ ಮನದ ತುಕ್ಕನ್ನು ಒರೆಸಿಬಿಟ್ಟಿತು...

ಈಗ ನಾನು ಅಸಂಖ್ಯ ಚಿಪ್ಪುಗಳಲ್ಲಿ ಒಬ್ಬಳಲ್ಲ....
ರಾಗ ರಂಗು ತುಂಬಿರುವ ಸ್ವಾತಿಹನಿಯ ಚಿಪ್ಪು...
ಸಾಗರ ಗರ್ಭದಲ್ಲಿದ್ದರೂ ಸಾರ್ಥಕ್ಯ ಪಡೆದ ಮುತ್ತಿನ ಚಿಪ್ಪು...

ಎಂದಾದರೂ...ಎಲ್ಲಾದರೂ...ಹೇಗಾದರೂ...
ಚಿಪ್ಪಿನೊಳಗಣ ಮುತ್ತು
ಆ ಪ್ರೀತಿ ಹನಿ ಹಾಕಿದ ಒಡೆಯನಿಗೆ
ಸಮರ್ಪಿಸಿ ಋಣಮುಕ್ತಳಗುವ ಬಯಕೆ...

















ಹೇಳಿ ಹೋಗು ಕಾರಣವ ........













ನೀ ಹೊರಟ ಮೇಲೆ ....
ಹೃದಯದ  ಮೂಲೆಯಲ್ಲೆಲ್ಲೋ ಒಂದು ಸಣ್ಣ ಕಂಪನ...
ಮನ ಮಂಜುಗಟ್ಟಿದಂತೆ  
ನೆನಪು, ನೋವು, ಪ್ರೀತಿ ಎಲ್ಲ ಒಟ್ಟಿಗೆ ಉಮ್ಮಳಿಸಿ ಬಂದಂತೆ... 

ಮೌನಿಯಾಗಿ ಹೋಗಲೇ...
ನೂರೊಂದು ನೆನಪುಗಳ ಒಡಲೊಳಗೆ ಬಚ್ಚಿಟ್ಟು..
ಬೆಟ್ಟದಷ್ಟು ನೋವನ್ನು ಹೃದಯದಲಿ ಅಡಗಿಸಿಟ್ಟು ... 
ಸಾಗರದಷ್ಟು ಪ್ರೀತಿಯನು ಮನದಲ್ಲೇ ಕೂಡಿಟ್ಟು..

ನನ್ನ ಮೌನ ನಿನಗೆ ನೋವ ತರದಿದ್ದರೆ...
ನನ್ನ ಪ್ರೇಮ ನಿನಗೆ ಹೊರೆ ಎನಿಸಿದ್ದರೆ..
ನನ್ನಿರವು ನಿನಗೆ ಬೇಡವಾಗಿದ್ದರೆ...
ನಾನು ಚಿರ ಮೌನಿಯಾಗಿ ಬಿಡುವೆ .....

ಆದರೆ....
ಹೇಳಿ ಹೋಗು ಕಾರಣವ ಗೆಳೆಯ....

ಕಾಲಾಯ ತಸ್ಮೆ ನಮಃ........!!!!!!!!!!

ಅಹಲ್ಯೆ ಎಂದರೆ ರೂಪವತಿಯಂತೆ
ರೂಪ ಎಂದರೆ ಅಪೂರ್ವ ರೂಪ ರಾಶಿಯಂತೆ
ಹೆಸರಿಗೆ ತಕ್ಕಂತಿದ್ದಳು ಆಕೆ
ರೂಪ ಕಂಡು ಮೊಹಿಸಿದ  ಎಲ್ಲರಿಗೂ ಆಕೆ ದಕ್ಕಲಿಲ್ಲ
ಆಕೆ ಪ್ರೀತಿಸಿದರವರಾರು ಆಕೆಯನ್ನು ದಕ್ಕಿಸಿಕೊಳಲಿಲ್ಲ
ಪತಿ ಗೌತಮನಂತೆ ...ಬುದ್ಧನಂತೆ...
ಅನ್ವರ್ಥವಾಗಿದ್ದ
ತಿಳಿಗೊಳದಂತೆ ಸಾಗಿದ್ದ ಬದುಕಿಗೆ
ಇಂದ್ರನ ಆಗಮನ....
ಆಕಸ್ಮಿಕವೋ...ಅನುರಾಗವೋ ...ಅವಗಡವೋ..
ಅಹಲ್ಯೆ ಅರಿಯದಾದಳೋ
ಅಥವ..
ಅರಿಯದಂತೆ ಇದ್ದಳೋ !!!!!!
ಗೌತಮ ಅಂದಿನ ಋಷಿಯಲ್ಲ ಅಹಲ್ಯೆಯನ್ನು ಕಲ್ಲಾಗು ಎನ್ನಲು...
ಇಂದ್ರನನ್ನು ಸಹಸ್ರಾಕ್ಷನಾಗು ಎನ್ನಲು ...
ಅವನೇ ಕಲ್ಲಾಗಿಬಿಟ್ಟ  ...ಕುರುಡನಾಗಿಬಿಟ್ಟ....
ಈಗ ಅವನೇ  ಕಾಯುತಿದ್ದಾನೆ ರಾಮನ ಪಾದಸ್ಪ್ರಷಕ್ಕಾಗಿ ...ಮುಕ್ತಿಗಾಗಿ..
ಆದರೆ ಅಹಲ್ಯೆ ಅದೇ ಮೋಹದ ಬಲೆಯಲ್ಲಿ....
ಎಲ್ಲ ಮರೆತು ಕಣ್ಣಿದ್ದು ಕುರುಡಿಯಾಗಿ
ಇಂದ್ರನೊಡನೆ...ಚಂದ್ರನೊಡನೆ...

ಕಾಲಾಯ ತಸ್ಮೆ ನಮಃ........!!!!!!!!!!

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...