ವರುಷಗಳ ಸಾಂಗತ್ಯದಲ್ಲಿ ಗೆಳೆಯ .....
ಒಮ್ಮೊಮ್ಮೆ ಬಿರುಮಳೆಯೊಂದು ಇಳೆಯ ತಣಿಸಿದಂತೆ
ಒಮ್ಮೆ ತುಂತುರುಹನಿಯಾಗಿ ಭುವಿಗಿಳಿದಂತೆ ..
ಕೆಲವೊಮ್ಮೆ ತಿಳಿಮೋಡ ಸಾಗಿಹೋದಂತೆ ...
ಇನ್ನೊಮ್ಮೆ ಅಲುಗದೆ ನಿಂತ ಸಲಿಲದಂತೆ...
ಮತ್ತೊಮ್ಮೆ ಹರಿವ ನದಿಯಂತೆ ....
ಎಂದೋ ಒಮ್ಮೆ ಭೋರ್ಗರೆವ ಜಲಪಾತದಂತೆ ...
ಬರಿದಾಗದ ಝಾರಿಯಂತೆ ......
ಕಂಡೂಕಾಣದಂತೆ .....
ಕಾಣದೆಯೂ ಕಂಡಂತೆ .....
ಸುಪ್ತ ಮಂದಾಕಿನಿಯಂತೆ ........
ಅದೆಷ್ಟು ವರುಷಗಳು ಸಾಗಿಹೋದವು ಗೆಳೆಯ
ಮೌನ ಸಾಂಗತ್ಯದಲ್ಲಿ .....
ಸಫಲ ಸಾಂಗತ್ಯಕೆ ಹಲವು ಮುಖ, ಮಜಲು ಮತ್ತು ನವೋತ್ಸಾಹಗಳಲ್ಲವೇ?
ReplyDeleteBadri:))
Deleteಮೌನದ ಅಗಾಧ ತೀವ್ರತೆ ಆಳಕ್ಕೆ ಯಾವುದೂ ಹೋಲಿಕೆಯಲ್ಲ..
ReplyDeletenimma maatu nija:))
Delete