Friday 29 January 2016

ಪುಟ್ಟಿ ಈ ಬಾರಿ SSLC ಪರೀಕ್ಷೆ ಬರಿತಾ ಇದ್ದಾಳೆ. ಕೂಸು ಹುಟ್ಟೋ ಮೊದಲು ಕುಲಾವಿ ಅನ್ನೋ ಹಾಗೆ ಇನ್ನು ಪರೀಕ್ಷೇನೆ ಆಗಿಲ್ಲ ಆಗ್ಲೆ ಅವಳಿಗೆ ಯಾವ ಕಾಲೇಜ್ ಸೇರಬೇಕು ಅನ್ನೋ ಯೋಚ್ನೆ ! ಮೈಸೂರಲ್ಲಿ ಕಾಲೇಜ್ಗೆ ಬರವೇ ? ಅವಳಿಗೆ coed ಕಾಲೇಜ್ ಇಷ್ಟ ಅಂದ್ಲು . ಮನೆಗೆ ಹತ್ತಿರ ಇರೋ ಕಾರ್ತಿ ಓದಿದ ಕಾಲೇಜ್ಗೆ ಸೇರಿಸಿದರೆ ಆಯ್ತು . ಅದಕ್ಕ್ಯಾಕೆ ಅಷ್ಟು ಟೆನ್ಶನ್ . ಓದೊ ಹುಡುಗಿ ಎಲ್ಲಿದ್ದರೂ ಓದ್ತಾಳೆ ಅನ್ನೋದು ನನ್ನ ವಿಚಾರ. ಈಗೊಂದಷ್ಟು ದಿನಗಳಿಂದ ಇದ್ದಕ್ಕಿದ್ದ ಹಾಗೆ ನಾನು ಆಳ್ವಾಸ್ಗೆ ಸೇರ್ಕೊಳ್ತಿನಿ ಅಂತ ಹೊಸ 'ರಗಳೆ' ಶುರು ಮಾಡಿದ್ಲು !! ಮಂಜು ನಾನು ಇಬ್ರೂ 'ಅದೆಲ್ಲ ಬೇಡ ಮಗ ಅಷ್ಟ್ ದೂರ ಯಾಕೆ .... ಮೊದ್ಲು ಪರೀಕ್ಷೆ ಮುಗಿಸು etc etc ಅಂತೆಲ್ಲ ಹೇಳ್ತಾನೆ ಇದ್ವಿ . ನೆನ್ನೆ ಸಂಜೆ ಕೂಡ ಶಾಲೆಯಿಂದ ಬಂದ್ ಮೇಲೆ ರಗಳೆ ಶುರು ಮಾಡಿದ್ಲು. ಆಗಷ್ಟೆ ಕಾರ್ತಿ ಕೂಡ ಬಂದ . 'ನೋಡ್ ಮಗ ಇವಳ ಹಠ ' ಅಂದೆ .
'ಲೇ ಪುಟ್ಟಿ, ನೀ ಮೆಡಿಸಿನ್ ಮಾಡ್ತೀಯ (ಅವಳಿಗೆ MBBS ಇಷ್ಟ ಇಲ್ಲ )? ಇಲ್ಲ ತಾನೇ ? AIISH ಸೇರ್ತೀಯ? ಇಲ್ಲ ತಾನೇ ? ಇಂಜಿನಿಯರಿಂಗ್ ಮಾಡ್ತೀಯ ? ಇಲ್ಲ ತಾನೇ ? ಮತ್ಯಾಕೆ ಅಷ್ಟ್ ಹಿಂಸೆ ಪಟ್ಕೊಂಡು ಎಲ್ಲರನ್ನ ಬಿಟ್ಟು ಅಷ್ಟ್ ದೂರ ಹೋಗಿ ಇರೋಕೂ ಆಗದೆ ಬಿಡೋಕೂ ಆಗದೆ ಪರದಾಡ್ತೀಯ ? ಇಲ್ಲೇ ಓದಿದ್ರು ನೀ ಸೇರೋ ಕೋರ್ಸ್ಗೆ ಜಾಸ್ತಿ ಆಗಿ ಮಿಕ್ಕೋ ಅಷ್ಟು ಮಾರ್ಕ್ಸ್ ನಿನಗೆ ಬರುತ್ತೆ!! ಈಗಿನ ಸ್ಟ್ಯಾಂಡರ್ಡ್ ಆಯಸ್ಸು ೬೦ ವರ್ಷ ಈಗ್ಲೆ ೧೫ ವರ್ಷ ಆಗ್ಹೊಯ್ತು ! ಆರಾಮಾಗಿ ಎಲ್ಲರ ಜೊತೆ ಇದ್ದು , ಇಲ್ಲೇ ಓದಿ , ಅಮ್ಮ ಮಾಡ್ಹಾಕಿದ್ದು(!!) ತಿಂದು, ಅಪ್ಪನ್ನ ರೇಗಿಸ್ತಾ ,ಒಂದಷ್ಟು ಹುಡುಗರ ಗೋಳಾಡಿಸಿ,ಇಷ್ಟದ ಕೋರ್ಸ್ ಮಾಡ್ಕೊಂಡು , ಒಂದಷ್ಟು ದಿನ ನಿನಗೆ ಬರೋ ಸಂಬಳ ಎಂಜಾಯ್ ಮಾಡಿ ಆರಾಮಾಗಿರು ..ನಾವೆಲ್ಲಾ ಇಲ್ಲೇ ಗೂಟ ಹೊಡ್ಕೊಂಡಿರಲ್ಲ ಕಣ್ ಪುಟ್ಟಿ !!! ಮೆಡಿಸಿನ್ ಅಥವ ಆಯುಶ್ ಸೇರೋ ಹಾಗಿದ್ರೆ ನಾನೇ ಅಪ್ಪ ಅಮ್ಮನ್ನ convince ಮಾಡ್ತೀನಿ ಆಳ್ವಾಸ್ ಸೇರಿಸೋಕೆ!! "
ನಾವ್ ಹತ್ ಸಾರಿ ಹೇಳಿದ್ರು ಅರ್ಥ ಮಾಡಿಕೊಳ್ಳದ ಮಹರಾಯ್ತಿ 'ಲೋ ಕಾರ್ತಿ , ಈ ಅಪ್ಪ ಅಮ್ಮ ಹಿಂಗೆಲ್ಲ ಹೇಳ್ಲೇ ಇಲ್ಲ ಕಣೋ!! ಹೌದಲ್ವ ನೀ ಹೇಳೋದು !!" ಅಂದ್ಲು
ಮಂಜು ಮಗ ಹೇಳಿದ ರೀತಿಗೆ ಪೂರ ಫಿದಾ 'ನನ್ ಮಗ ಮಂಡ್ಯ ಸೇರಿದ ಮೇಲೆ ಎಷ್ಟು ಜಾಣ ಆದ ಅಲ್ವ... ಎಷ್ಟೇ ಆಗಲಿ ನನ್ ಮಗ ಅಲ್ವ !!'
ಇದಕ್ಕೇನು ಕಮ್ಮಿ ಇಲ್ಲ ಅಪ್ಪ ಮಕ್ಕಳು ... ಎಷ್ಟೇಆಗಲಿ ಹೆತ್ತೋರಿಗೆ ಹೆಗ್ಗಣ ಕೂಡ ಮುದ್ದೆ ಅಲ್ವೇ 

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...