ಹೀಗೊಬ್ಬಳು ಗೆಳತಿ...ನಾನಲ್ಲದ ನಾನು!!!!!
ಮುದ್ದು ಮುಖದ ಅರಳಿದ ನಗುವಿನ ಸೊಬಗಿ ನನ್ನ ಗೆಳತಿ..
ನಗುವಿನ ಚಿಲುಮೆ......ಒಲುಮೆಯ ಜಲಪಾತ.
ಅಬ್ಬಬ್ಬ ...ಎಂದು ಮತ್ಸರ ಪಡುವಷ್ಟು ಪ್ರೀತಿಯ ಹರಿಸುವ ಮಹಾನದಿ...
ಆದರೆ .....
ಆ ಸುಂದರ ಕಣ್ಣುಗಳ ಹಿಂದೆ ನೋವು ಅಡಗಿದೆ...
ಆ ನಗುವಿನ ಹಿಂದೆ ಏಕಾಂಗಿ ಹೃದಯದ ಹಾಡಿದೆ..
ಆ ಪ್ರೀತಿಯ ಒರತೆಯ ಹಿಂದೆ ಭರಿಸಲಾರದಷ್ಟು ಪ್ರೀತಿಯ ಕೊರತೆ ಇದೆ....
ಅಂದಿನ ಮಾಸದ ಘಾಯದ ಗುರುತಿದೆ...
ಎಲ್ಲರ ನಡುವೆ ಇದ್ದಾಗ ..
ಅಳಿಸಲಾರದ ನಗೆಯ ಚೆಲುವೆ ,
ಯಾರು ಇಲ್ಲದಿರುವಾಗ.....
ಕಣ್ಣಿರ ಕಡಲಾಗುತ್ತಾಳೆ......
ಮೌನದ ಮಡುವಾಗುತ್ತಾಳೆ....
ಆದರೂ....
ಆ ನೋವಿಗೆ ಕಾರಣ ಯಾರೇ ಆದರೂ..ಏನೇ ಆದರು....
ಕ್ಷಮಿಸೆಂದು ಕೇಳದಿದ್ದರೂ ಕ್ಷಮಿಸುತ್ತ...
ಮತ್ತೆ ನಗುತ್ತಲೇ ಮುನ್ನಡೆಯುತ್ತಿದ್ದಾಳೆ...
ಹೆಜ್ಜೆ ಹೆಜ್ಜೆಗೂ ನಗೆಯ ಮುತ್ತು ಸುರಿಸುತ್ತ...
ಬೆಳಕಿನ ಕಿರಣದ ಜಾಡು ಹಿಡಿದು...
ಇಂದಲ್ಲ ನಾಳೆ....ನಾಳೆಯಲ್ಲದಿದ್ದರೆ ಮತ್ತೊಂದು ದಿನ...
ಎಂಬ ಆಸೆಯ ಮೂಟೆಯ ಹೊತ್ತು...
ತನ್ನ ನಂಬಿದವರಿಗಾಗೀ..ಧೃಡವಾಗಿ....ನಗೆಯ ಚಿಲುಮೆಯಾಗಿ...
ಅರ್ಪಣೆ: ಅಂತಹ ಗೆಳತಿಯರಿಗಾಗೀ
No comments:
Post a Comment