ನಸುಕು ಎದ್ದಾಗ ಇರುಳಿನ ಕೋಪ ಆರಿರಲಿಲ್ಲ...
ಪ್ರೀತಿಯ ಮಾತಿರಲಿ ಬರಿ ನೋಟವು ಇರಲಿಲ್ಲ...
ನಿನಗೆ ಇಷ್ಟಾದರೆ ನನಗಿನ್ನೆಷ್ಟು ಎಂಬ ಅವನ ಭಾವ....
ಹೋದರೆ ಹೋಗು ಎಲ್ಲಿ ಹೋಗುವೆ ಎಂಬ ನನ್ನ ಹಠ.....
ಕೊನೆಗೂ ಹೊರಟೆ ಹೋದ ನನ್ನನ್ನು ನೋಡದೆ...ನನಗೆ ಹೇಳದೆ...
ಅಷ್ಟೆಲ್ಲ ಪೊಗರು ಮಾಡಿದ್ದ ನನ್ನ ಮನ ಈಗ ಶೂನ್ಯ....ಕಣ್ಣ ತುಂಬಾ ನೀರು........
ಕಣ್ಣ ತುಂಬಿದ ಹನಿ ಕೆಳ ಜಾರುವ ಮೊದಲೇ ಕೇಳಬಂದಿತು...
ದೂರವಾಣಿಯ ರಿಂಗಣ .........
" ಕಣ್ಣು ಒರೆಸಿಕೊ ಹುಡುಗಿ ಸಂಜೆ ಬೇಗ ಬರುವೆ"
ಎಂದ ಇನಿಯನ ಸಾಂತ್ವನ.
ಈಗ ತುಂಬಿದ ಕಣ್ಣ ಹನಿ ನೀನು ನನ್ನವನೆಂಬ ಹಮ್ಮಿಗೆ ಗೆಳೆಯ...
ಹನಿಯನ್ನು ಜಾರಗೋಡದ ನಿನ್ನ ಪ್ರೀತಿಗೆ..
No comments:
Post a Comment