ಮೊನ್ನೆ ಸಮುದ್ರ ರಾಜ ಅವನರಮನೆಗೆ ಕರೆಸಿಕೊಂಡಿದ್ದ ....
ಬಾಗಿಲಲ್ಲೇ ಅಲೆಗಳಿಂದ ಪಾದ ತೊಳೆಸಿದ್ದ...
ಕಪ್ಪೆ ಚಿಪ್ಪುಗಳ ಉಡುಗೊರೆ ನೀಡಿದ್ದ...
ಮರಳ ಉಡಿಗೆ ಸುರಿದು ಮಡಿಲು ತುಂಬಿದ್ದ..
.
ಸಂಜೆಗತ್ತಲ ನಡುವೆ...
ಅಲೆಗಳ ರಾಶಿಯೊಡನೆ.
ನನ್ನ ಅವನ ಸರಸ...
ಅವನೊಳಗೆ ಸೇರಿ ಬಿಡುವ ನನ್ನ ಮನದ ತನನ...
ಹೊರಟು ಬಿಡು ಬೇಗಾ ಎಂದು ಅವನ ಮನನ.....
ಪ್ರೀತಿಯಿಂದ ಬಳಿಗೆ ಬಂದ ಹೆಣ್ಣನ್ನು ..
ಒಮ್ಮೆಲೇ ಅಪ್ಪಿ ಒಳ ಕರೆದೊಯ್ಯಬಾರದೆ...
ನಿನ್ನೊಳಗೊಂದಾಗಿಸಿಕೊಳ್ಳಬಾರದೇ ...
ಮನದ ಬಯಕೆ ಅರಿತ ಸಾಗರ ನಸು ನಕ್ಕ..
ಪ್ರೀತಿ ಎಂದರೆ ಒಂದಾಗಿಸಿಕೊಳ್ಲೋದಲ್ಲ..
ಒಲುಮೆ ಎಂದರೆ ಮಿಲನವಲ್ಲ...
ನೀನಿರುವಲ್ಲೇ ನನಗಾಗಿ ನೀನು...
ಒಲವಿನ ಹಣತೆ ಹೊತ್ತಿಸಿ....
ಆ ಜ್ಯೋತಿಯಿಂದ ಇರುವ ಇರವನ್ನು ಬೆಳಗು....
ಎಂಬಂತೆ ನಕ್ಕ.......ಅಕ್ಕರೆಯಿಂದ ಬೀಳ್ಕ್ಕೊಟ್ಟ..
ಆ ಪ್ರೀತಿ ಸ್ನೇಹದ ಧಾರೆಯಲ್ಲಿ ಮಿಂದೆದ್ದ ನಾನು ಚಿರಪ್ರೇಮಿ...ಚಿರವಿರಹಿ..:)))
No comments:
Post a Comment