Thursday, 20 August 2015

'ಎಲ್ಲಾ ಸರಿ ಆದ್ರೆ ನಾಗರಪಂಚಮಿ ದಿನ ಅಣ್ಣತಮ್ಮ೦ದಿರಿಗೆ , ತೌರಿಗೆ ಒಳಿತಾಗಲಿ ಅಂತ್ಲೇ ಪೂಜೆ ಮಾಡೋದು ಯಾಕೆ' ಅಂದೆ..
ಅತ್ತೆ ಒಂದ್ ಕಥೆ ಹೇಳಿದ್ರು :
ಹಿಂದೆ ಒಬ್ಬ ರೈತ ಅವನ ಹೆಂಡತಿ ಮೂರು ಮಕ್ಕಳ ಜೊತೆ ಒಂದ್ ಹಳ್ಳಿಯಲ್ಲಿ ವಾಸವಾಗಿದ್ದ. ಒಂದ್ ದಿನ ಅವನು ಹೊಲ ಉಳ್ತಾ ಇರೋವಾಗ ಅವನಿಗೆ ತಿಳಿಯದೆ ಅವನ ನೇಗಿಲಿಗೆ ಪುಟ್ಟ ಮೂರು ನಾಗರಹಾವಿನ ಮರಿಗಳು ಸಿಲುಕಿ ಸತ್ ಹೋದ್ವು. ಮರಿಗಳ ಅಮ್ಮ ನೊಂದುಬಿಟ್ಲು , ಅವನ ಮೇಲೆ ಹಗೆ ತೊಟ್ಟಳು . ರಾತ್ರಿ ಎಲ್ಲಾ ಮಲಗಿದ್ದಾಗ ರೈತ, ಅವನ ಹೆಂಡತಿ, ಹಾಗು ಇಬ್ಬರು ಗಂಡು ಮಕ್ಕಳ ಕಚ್ಚಿಬಿಡ್ತು . ಹೆಣ್ಣು ಮಗಳ ಕಚ್ಚ ಹೊರಟಾಗ ಆ ಹುಡುಗಿ ಎಚ್ಚರಗೊಂಡು ಕೈ ಮುಗಿದು ಅರಿಯದೆ ಆದ ತಪ್ಪ ಮನ್ನಿಸುವಂತೆ ಕೇಳಿದ್ಲು . ಒಂದಷ್ಟು ಊಟವಿತ್ತಳು . ಹಾವು ಸಮಾಧಾನ ಹೊಂದಿ 'ನಿನಗೇನೂ ಬೇಕೋ ಕೇಳು 'ಅಂತು . ಹುಡುಗಿ "ನನ್ನ ಅಪ್ಪ ಅಮ್ಮ, ಅಣ್ಣಂದಿರ ಉಳಿಸು . ಅರಿಯದೆ ಆಗೋ ತಪ್ಪುಗಳ ಕ್ಷಮಿಸು . ಇಂದಿನ ದಿನ ನಿನ್ನ ಪೂಜೆ ಮಾಡೋರಿಗೆ ಅಭಯ ನೀಡು. " ಅಂದ್ಲು .. ಹಾವು 'ಹಾಗೆ ಆಗಲಿ" ಅಂತ ಹೊರಟಿ ಹೋಯ್ತು ..
"ಅದಕ್ಕೆ ಮಗ, ಅಣ್ಣತಮ್ಮ೦ದಿರ ಒಳಿತಿಗೆ ತೌರಿನ ಒಳಿತಿಗೆ ಈವತ್ತು ಕೇಳಿಕೊಂಡರೆ ಒಳ್ಳೆಯದಾಗುತ್ತದೆ ...ಹಾಗೆ ನೊಗ ಕೂಡ ಕಟ್ಟೋದಿಲ್ಲ ಆವತ್ತು "ಅಂದ್ರು ಅತ್ತೆ ..
ಕಥೆ ಸುಳ್ಳೋ ನಿಜವೋ ಗೊತ್ತಿಲ್ಲ .ಪಂಚಮಿಯಂದೆ ಅಲ್ಲದೆ ಯಾವಾಗ್ಲೂ ಕೇಳೋದು ಎಲ್ಲಾರಿಗೂ ಒಳಿತಾಗಲಿ ಎಂದೇ ....ಎಲ್ಲಾ ಚೆಂದ ಇದ್ರೆ ನೋಡೋಕೂ ಚೆಂದ ಅಲ್ವೇ
ಹಂಚಿಕೊಳ್ಳಬೇಕು ಅನಿಸ್ತು ....:)))))

Friday, 14 August 2015ಎಣ್ಣೆಗಾಯಿ ಮಾಡೋದಕ್ಕೆ ಬದನೆ ಕಾಯಿ ಹೆಚ್ಚುತ್ತಾ ಇದ್ದೆ .. ಚೆಂದ ಚೆಂದ ನೇರಳೆ ಬಣ್ಣದ ಪುಟ್ಟ ಬದನೆಕಾಯಿಗಳು. ಮಗಳು ಪಕ್ಕಇದ್ಲು 'ಏನಾದ್ರೂ ಮಾಡಿಕೊಡ್ಲ ಅಮ್ಮ' ಅಂತ ಹಿಂದೆ ಮುಂದೆ ಸುತ್ತುತ್ತಾ ಇದ್ಲು .... Usually ತಿಂದ ತಟ್ಟೆ ಕೂಡ ಎತ್ತದ ಮಗಳು ಅಮ್ಮನಿಗೆ ಸ್ವಲ್ಪ ಹುಷಾರಿಲ್ಲ ಅಂದ್ರೆ ಬಂದು ಏನಾದ್ರೂ ಮಾಡಿಕೊಡ್ತೀನಿ ನನಗೂ ಕೆಲ್ಸ ಹೇಳು ಅಂತ ಹಿಂದೆ ಬೀಳ್ತಾಳೆ ... ಅವಳು ಮಾಡದೆ ಇದ್ರೂ ಆ concern makes me feel happy.... ' ಏನಿಲ್ಲ ಮಗ ಇಷ್ಟೇ ಆಯ್ತಲ್ಲ ನೀ ನಡಿ ನಾ ಮಾಡಿ ಬರ್ತೀನಿ ' ಅಂದೆ ... ಹಾಗೆ slab ಮೇಲೆ ಕಾಲು ಆಡಿಸ್ತಾ 'ಕಥೆ' ಹೇಳ್ತಾ ಕೂತಿದ್ಲು .... ಬದನೆ ಕಾಯಿ ಹೆಚ್ಚುತ್ತಿದ್ದೆನಲ್ಲ ... ಮೇಲೆಲ್ಲಾ ಅಷ್ಟು ಚೆಂದ ಕಾಣೋ ಬದನೆಯ ಒಳಗೆ ಹುಳುಕು !!!! ಮಗಳು ಕೇಳಿದ್ಲು ... 'ಅಲ್ಲ ಕಣಮ್ಮ ಈ ಕಾಯಿ ಮೇಲೆಲ್ಲಾ ಎಷ್ಟ್ ಚೆನ್ನಾಗಿದ್ಯಲ್ಲ ... ಇದರೊಳಗೆ ಹುಳ ಹೆಂಗ್ ಹೋಯ್ತು' ..... 'ಹೂವಾಗಿದ್ದಾಗ ಸೇರಿಹೋದ ಹುಳು ಇರಬೇಕು ಮಗ' ಅಂದೆ .....
ಹೌದಲ್ಲವೇ .... ಸಣ್ಣವರಿದ್ದಾಗ ಕಲಿತ ಒಳಿತು ಕೆಡುಕು .... ಕಡೆಯವರೆಗೂ ಇರುತ್ತದೆ though we may change in few circumstances ಸಂಸ್ಕಾರ ಅನ್ನೋದು ಬದಲಾಗೊಲ್ಲ ಅಲ್ಲವೇ ..... ....... ಮನಸ್ಸು ಒಂದ್ ತರ ಸಿಹಿ ಸಿಹಿ ... ನಮ್ಮನ್ನ ಬೆಳೆಸಿದ ಹಿರಿಯರ ನೆನೆದು .........:))))

Tuesday, 4 August 2015ಕೆಲವೊಮ್ಮೆ ಹೀಗೆ ಆಗುತ್ತದೆ .ಮನೆಯ ಹಿರಿಯರು ಯಾರ ಜೊತೆನೋ ಏನೋ ಮನಸ್ತಾಪ ಮಾಡಿಕೊಂಡು ಅದರಿಂದ ಮನೆಯ ಇತರರೂ ಕೂಡ ಆ 'ಯಾರೋ" ಜೊತೆ ಮಾತುಕತೆ ನಿಲ್ಲಿಸಬೇಕು ಅನ್ನೋ ಪರಿಸ್ಥಿತಿ ತಂದುಬಿಡುತ್ತಾರೆ. ಮತ್ತ್ಯಾವಾಗಲೋ ಅವರೆಲ್ಲ ಸರಿ ಹೋದಾಗ ಮತ್ತೆ ಮಾತನಾಡುವಾಗ ಕಿರಿಯರು ಅನಿಸಿಕೊಂಡೋರಿಗೆ ಮಾತಾಡಿಸೋಕೆ ಮುಜುಗರ ಅನಿಸಿಬಿಡುತ್ತದೆ . ಮನಸಲ್ಲಿ ಒಂದ್ ತರ ಅಪರಾಧಿ ಪ್ರಜ್ಞೆ . ಯಾಕೆ ಅಂದ್ರೆ 'ಆ ಯಾರೋ ' ಇವರನ್ನ ನೋಯಿಸಿರೊದಿಲ್ಲ. ಆದ್ರೆ ಆಮೇಲೆ ಮಾತಾಡಿಸಿದಾಗ ಕೆಲವರು ಸುಮ್ಮನೆ ಏನೂ ತೋರಿಸದೆ ಮಾತಾಡಿಬಿಡ್ತಾರೆ , ಮತ್ತೆ ಕೆಲವರು 'ಇಷ್ಟ ದಿನ ಎಲ್ಲಿತ್ತು 'ಅನ್ನೋ ತರ ಮಾತಾಡ್ತಾರೆ . ಕೆಲವರು ಒಂದು ತುಂಬು ಕುಟುಂಬದಲ್ಲಿ ಇದೆಲ್ಲ ಸಾಮಾನ್ಯ ಅನ್ನೋ ತರ ಕೆಲವರು ಸುಮ್ಮನಾಗಿಬಿಡ್ತಾರೆ ...ಗೆಳೆತನದಲ್ಲೂ ಕೆಲವೊಮ್ಮೆ ಯಾರದೋ ಇಬ್ಬರ ಮನಸ್ತಾಪಕ್ಕೆ ಸಂಬಂಧವೇ ಇರದ ನಮ್ಮ ಬಂಧುತ್ವ ಕಳೆದುಕೊಂಡ್ಬಿಡ್ತಾರೆ!!..ಈ ರೀತಿಯ ಅನಗತ್ಯ ವಿಷಯಗಳಿಗೆ ನಾನೂ ಬಹಳಷ್ಟು ಸಾರಿ ಹಿಂಸೆಪಟ್ಟಿದ್ದೀನಿ.
ಅದಕ್ಕೆ ಈಗ ಮಕ್ಕಳಿಗೆ ಹೇಳಿದ್ದೀನಿ . ದೊಡ್ಡೋರು ಯಾರ ಜೊತೆ ಹೇಗೆ ಇರಲಿ , ನೀವು ತಲೆ ಕೆಡಿಸ್ಕೊಳ್ಳೋದು ಬೇಡ . ಅವರು ಒಂದ್ ಹೊತ್ತ್ ಇದ್ದಂಗೆ ಮತ್ತೊಂದ್ ಹೊತ್ತಲ್ಲಿ ಇರೊದಿಲ್ಲ. ನಿಮ್ಮ ಪಾಡಿಗೆ ನೀವು ಎಲ್ಲರ ಜೊತೆ ಮಾತಾಡಿ , ಚೆನ್ನಾಗಿರಿ. keep in touch ಅಷ್ಟೇ . ಯಾಕೆ ಅಂದ್ರೆ " 'ಇಷ್ಟ ದಿನ ಎಲ್ಲಿತ್ತು ' ಅನ್ನೋ ಮಾತಿಂದ ಮನಸ್ಸಿಗೆ ನೋವಾಗೋದು ಬೇಡ ಅಂತ. ಸಣ್ಣ ಸಣ್ಣ ಮಾತುಗಳೇ ತುಂಬಾ ನೋವು ತರೋದು .
ಆದ್ರೂ, ನಮ್ಮ ಭಾವನೆಗಳನ್ನ ಇನ್ನೊಬ್ಬರ ಮೇಲೆ ಹೇರೋದು ಎಷ್ಟ್ ಸರಿ?!
ನೆನ್ನೆ ಅಮ್ಮ ಹುಟ್ಟಿದ ದಿನ , ಅಮ್ಮ ಚಿಕ್ಕಮ್ಮ ಜಗಳ ಆಡಿದ್ದಾಗ ನಾ ಚಿಕ್ಕಮ್ಮ ಹತ್ತಿರ ಮಾತಾಡಿರಲಿಲ್ಲ. ಈಗ ಅವರಿಬ್ಬರೂ ಸರಿ ಇದ್ದಾರೆ ನನಗೆ ಮಾತಾಡಿಸೋಕೆ ಮುಜುಗರ . ಚಿಕ್ಕಮ್ಮ ಈಗ ಅಮ್ಮನ ಮನೆಯಲ್ಲಿ ಇದ್ದಾರೆ ಅಂತ ನಾ ಹೋಗಿಲ್ಲ. ಅತ್ತೆ ಮನೆಗೆ ಹೋಗಿ ಬರೋ ಅಷ್ಟರಲ್ಲಿ ಮಕ್ಕಳು ಅವರ ಅಜ್ಜಿಗೆ ಕೇಕ್ ತಗೊಂಡ್ ಹೋಗಿ ವಿಷೆಸ್ ಹೇಳಿ ಬಂದಿದ್ರು . ಅಮ್ಮ ಫೋನ್ ಮಾಡಿ ಖುಷಿಪಟ್ಟರು .. ಮನಸ್ಸು ಮತ್ತದೇ ನೀಲಿ ಬಾನು ... :))

Sunday, 2 August 2015

ವಿಧಿ ಎನ್ನುವ
ದ್ರೋಣಾಚಾರ್ಯ...
ದಿನಕ್ಕೊಂದು
ಕ್ಷಣಕ್ಕೊಂದು
ಚಕ್ರವ್ಯೂಹ
ರಚಿಸುತ್ತಿದ್ದರೆ...
ಮನ ಅಭಿಮನ್ಯುವಾಗಿ
ಚಕ್ರವ್ಯೂಹವ ಛೇದಿಸಿ
ಎಷ್ಟೋ ಬಾರಿ
ಸೋತು
ಸತ್ತು
ಮತ್ತೆ ಎದ್ದು ನಿಲ್ಲುತ್ತಿದ್ದೆ
ನನ್ನ ನೀನು ಸೋಲಿಸಲಾರೆ ಎಂದು..:))))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...