Saturday 5 December 2015

ರಾತ್ರಿ ೮ ಘಂಟೆ ಹತ್ತಿರ ಆಗಿತ್ತು. ಮಂಜು ಟಿವಿ ನೋಡ್ತಾ ಇದ್ರು  ಅವರ ಪಕ್ಕ ಎಂದಿನಂತೆ ನಾನೂ ಪೇಪರ್ ಓದ್ತಾ  ಕೂತ್ತಿದ್ದೆ . ಕಾರ್ತಿ ಅವನ ಕಾಲೇಜ್ ಇಂದ industrial ವಿಸಿಟ್ ಅಂತ ಮೈಸೂರಿನ ಒಂದು ಕಾರ್ಖಾನೆಗೆ ಹೋಗಿದ್ದವನು ಬಂದ.  ಬಂದು ಅವರಪ್ಪನ ಹೆಗಲಿಗೆ ತಲೆ ಒರಗಿಸಿ ಕೂತ. ಯಾಕೋ ಆಯಾಸದಿಂದ ಇರೋ ಹಾಗೆ ಕಾಣ್ತಾ ಇದ್ದ. 'ಯಾಕ್  ಮಗ ಸುಸ್ತಾಯ್ತ ' ಅಂತ ಮಂಜು ಮಗನ ತಲೆ ಸವರ್ತಾ ಕೇಳಿದ್ರು . 'ಏನಿಲ್ಲಪ್ಪ' ಅಂದ. ಒಂದೆರದು ನಿಮಿಷ ಸುಮ್ಮನಿದ್ದು ಮತ್ತೆ ದಿನದ ಪ್ರವರ ಶುರು ಮಾಡಿದ . 'ಮಾ, ಎಷ್ಟ್ ದೊಡ್ಡ ಫ್ಯಾಕ್ಟರಿ ಗೊತ್ತಾಮ ಅದು. ಒಳಗೆ ಹೋದ್ವ , ಅಲ್ಲಿನ ಟೆಕ್ ಗಳು ನೀವು ಇನ್ನು ಚಿಕ್ಕವರು ಮುಂದಿನ ವರ್ಷ ಬರ್ಬೇಕಿತ್ತು ಅಂತ ಶುರು ಮಾಡಿದ್ರು . ಎಲ್ಲಾ ಮಷೀನ್ಗಳ ಬಗೆ ಹೇಳ್ತಾ ಹೋದ್ರು . ಕೆಲವು ಕಡೆ (ಡಿವಿಷನ್) ಒಳಗೂ ಬಿಡಲಿಲ್ಲ . ಏನ್ ಗೊತ್ತ ಮಾ, ನಮಗೆ ಹೇಳಿಕೊಟ್ಟ ಯಾರೂ ಇಂಜಿನಿಯರ್ಗಳಲ್ಲ . ಎಲ್ಲಾ ಡಿಪ್ಲೋಮಾ ಮತ್ತು ITI ಅವರೇ' 'ಇಂಗ್ಲಿಷ್ ಅಲ್ಲಿ ಹೇಳಿದ್ರಾ ಮಗ'  ' ಏ ಮಾ, ಅವರಿಗೆ ಗೊತ್ತಿದ್ದ ಇಂಗ್ಲಿಷ್ ಅಲ್ಲೇ ಹೇಳಿದ್ರು , ಆದ್ರೂ ಅಪ್ಪ , ಅವರಿಗೆ ಇರೋ ಅಷ್ಟು ಪ್ರಾಕ್ಟಿಕಲ್ ಜ್ಞಾನ ನಮಗೆ ಇಲ್ವೆ ಇಲ್ಲ ಬಿಡು . ಎಲ್ಲಾ ನನ್ನ ವಯಸ್ಸಿಗಿಂತ ಜಾಸ್ತಿ ವರ್ಷ ಸರ್ವಿಸ್ ಆಗಿರೋರು , ಅದೆಷ್ಟ್ knowledge ಇದೆ ಅಂತೀಯ ಸಬ್ಜೆಕ್ಟ್ ಅಲ್ಲಿ ಏನಾದ್ರೂ ಪ್ರಶ್ನೆ ಇದ್ರೆ ಕೇಳಿ ಅಂದ್ರು , ನಾವೂ ಏನೇನೋ ಕೇಳಿದ್ವಿ ' ಅಂತೆಲ್ಲ ಹೇಳ್ತಾ ಹೋದ. ನಾವೂ ಕೇಳ್ತಾನೆ ಹೋದ್ವಿ
'ಅಪ್ಪ , ನಾನೂ ಇಂಜಿನಿಯರಿಂಗ್ ಬದ್ಲು ಡಿಪ್ಲೋಮೊ ಮಾಡಬೇಕಿತ್ತೇನೋ ಕಣಪ್ಪ , ತಪ್ ಮಾಡಿಬಿಟ್ಟೆ' ಅಂದ. ವರುಷಗಳಿಂದ ಬಲು ಆಸೆ ಪಟ್ಟು ಅವನೇ ಸೇರಿದ ಕೋರ್ಸ್!!! ಈಗ ಹೀಗಂದ್ರೆ ಅಂತ ಯಾಕೋ ಒಂದ್ ತರ ಆಯ್ತು 'ಯಾಕ್ ಮಗ' 'ಮಾ  ಆ ಫ್ಯಾಕ್ಟರಿ ಅಲ್ಲಿ ಒಂದ್ ಮಾತು ಹೇಳಿದ್ರು ಕಣಮ್ಮ placement ಬಗ್ಗೆ ಕೇಳಿದಕ್ಕೆ , ಇಂಜಿನಿಯರ್ಗಳನ್ನ ತಗೊಳೋ ಬದ್ಲು ಡಿಪ್ಲೋಮಾ ಅಥವಾ ITI ಅವರನ್ನ ತಗೊಂಡ್ರೆ ೫ ಸಾವಿರದಲ್ಲಿ ಅದೇ ಕೆಲ್ಸ ಆಗೋಗುತ್ತೆ. ನಾವು ಡೈಲಿ ವೇಜ್ ಆಗಿ ತಗೊಂಡರು  ನಡಿತದೆ , ಅದೇ ಇಂಜಿನಿಯರ್ಗಳಾದರೆ ಜಾಸ್ತಿ ಕೊಡಬೇಕು... (ಮತ್ತೊಂದೆರಡು ಸೆನ್ಸಿಟಿವ್ ವಿಷ್ಯ ) ನಿಮ್ಗಳಿಗೆ  ಪ್ರಾಕ್ಟಿಕಲ್ ಆಗಿ ಏನೂ ಗೊತ್ತಿರೋದಿಲ್ಲ, ಜೊತೆಗೆ ಅವರುಗಳಾದ್ರೆ ಏನ್ ಹೇಳಿದ್ರೂ ಮಾಡ್ತಾರೆ. ನೀವ್ಗಳು ನಾ ಇಂಜಿನಿಯರ್ ಅದನ್ನ ಮಾಡ್ಲ ಅಂತೀರಾ , ಇತ್ಯಾದಿ ಇತ್ಯಾದಿ' ಹೇಳ್ತಾ ಹೋದ .ಅವನು ಹೇಳಿದ್ದನ್ನೆಲ್ಲ ಕೇಳಿದ ಮೇಲೆ ಮಂಜು  ' ಮಗ, ನೀ ತಗೊಂಡಿರೋದು ನಿನ್ನ ಪ್ರೀತಿಯ ವಿಷ್ಯ. ಅದನ್ನೇ ತುಂಬಾ ಚೆನ್ನಾಗಿ ಕಲಿ, ಮನಸಿಟ್ಟು  ಕಲಿ. ಆಮೇಲೆ ಮುಂದೆ ಓದೋದೋ ಕೆಲ್ಸಕ್ಕೆ ಸೇರೊದೊ ನೋಡಿದರೆ ಆಯ್ತು, ಸುಮ್ಸುಮ್ನೆ ಈಗಲೇ ಬೇಡದ್ದು ತಲೆಗೆ ತಗೋಬೇಡ, ....etc, etc ' ಅಂದ್ರು. ಅದೆಷ್ಟ್ ತಲೆಗೆ ಹೋಯ್ತೋ ಗೊತ್ತಿಲ್ಲ . 'ಅಲ್ಲ ಕಣಪ್ಪ , ನೋಡು ಈವತ್ತು ನನ್ನ ಹಾಗೆ  ನನ್ನ classmates ಕೂಡ ಯೋಚಿಸಿರ್ತಾರೆ ಅಲ್ವ , ಅದೆಷ್ಟ್ competition ಅಲ್ವ' ಅಂದ.
ಅವನು ಊಟ ಮಾಡಿ ಹೋದ ಮೇಲೆ ಮಂಜು ಕಣ್ಣು ತುಂಬಿಕೊಂಡರು 'ಇನ್ನು ಈಗ ಹುಟ್ಟಿದ ಅನ್ನೋ  ಹಾಗೆ ಸುನಿ ಇವ್ನು .. ಅದೆಷ್ಟಲ್ಲಾ  ಇದೆ ಅಲ್ವ ಈ ಪುಟ್ಟ ತಲೆಯಲ್ಲಿ.. ಅಪ್ಪ ಅಮ್ಮ ಕಲಿಸದೆ ಇರೋದನ್ನ ಪ್ರಪಂಚ(ಬದುಕು) ಕಲಿಸ್ತಾ ಹೋಗುತ್ತೆ ' ಅಂದ್ರು ..
ಮನಸ್ಸು ಒಂದ್ ತರ ಮೂಡದ ಮರೆಯಲ್ಲಿ ಇಣುಕೋ ಸೂರ್ಯನ ಮೇಲೆ ಭರವಸೆ ಇಡು ಅನ್ನೋ ಹಾಗೆ ..........
Proud of bleeding Angry of bleeding .... ಇವೆಲ್ಲ ನನಗ ಅರ್ಥ ಆಗೋದಿಲ್ಲ . ನಾ ಒಬ್ಬಹೆಣ್ಣಾಗಿ, ಹೆಂಡತಿಯಾಗಿ , ತಾಯಿಯಾಗಿ, ವೈದ್ಯೆಯಾಗಿ ಋತುಚಕ್ರ ಅಂದ್ರೆ ಒಂದು ಹೆಣ್ಣಿನ ಸ್ವಾಭಾವಿಕ ಆರೋಗ್ಯದ ಸೂಚಕ ಎಂಬ ಅರಿವಿದೆ ..ತವರಿನಲ್ಲಿ ತುಂಬಾನೇ ಲಿಬರಲ್ ಆಗಿ ಬೆಳೆದ ನಾನು ಮದ್ವೆ ಆಗಿ ಹೋದಾಗ ಅವರ ಮನೆಯ ನಂಬಿಕೆಯಂತೆ 'ಆ ೩ ದಿನ' ದೇವರ ಮನೆಗೆಲ್ಲ ಹೋಗ್ತಾ ಇರಲಿಲ್ಲ, and i never opposed it also.. ನನಗೆ ಅದರ ಬಗ್ಗೆ ಯಾವ್ದೇ ಇಶ್ಯೂಸ್ ಇರಲಿಲ್ಲ. ಮಂಜುಗೆ ಇಂತಹ ವಿಷಯದಲ್ಲಿ ತುಂಬಾನೇ ನಂಬಿಕೆ . ಆದ್ರೆ ಪುಟ್ಟಿಯ ಜೊತೆ ಹಾಗಾಗಲಿಲ್ಲ . 'ಹಂಗೆಲ್ಲ ಯಾಕಮ್ಮ ' ಅಂತ ಪುಟ್ಟಿ ಕೇಳೋವಾಗ ಹಿಂಸೆ ಅನಿಸ್ತ ಇತ್ತು ಒಬ್ಬ ವೈದ್ಯೆಯಾಗಿ , ನಾ ಅವಳಿಗೆ ಎಲ್ಲಾ ತಿಳಿಸಿ ಕೊಟ್ಟೆ . ಹಾಗೆ ಒಬ್ಬ ಅಮ್ಮನಾಗಿ ಮನೆಯ ಸಾಮರಸ್ಯಕ್ಕೆ ಧಕ್ಕೆ ಬಾರದಂತೆ ಅವರಪ್ಪನ ನಂಬಿಕೆಯನ್ನ ಕೂಡ ಹೇಳಿದೆ . ಮನವರಿಕೆ ಮಾಡೋಕೆ ಪ್ರಯತ್ನಿಸಿದೆ.. 'ನೋಡು ಮಗ, This is just a physiological phenomenon ,u wil know how healthy yr genitourinary system is when u bleed ನನಗೆ ನೀನು ಏನು ಮಾಡಿದ್ರು ಬೇಸರ ಇಲ್ಲ ನಿನಗೆ guilt ಇರಬಾರದು ಅಷ್ಟೇ. ನೀ ಇಲ್ಲ ನಾ ಹೋಗೆ ಹೋಗ್ತೀನಿ ದೇವರ ಮನೆಗೆ, ಮುಟ್ತೀನಿ ಅಂದ್ರೆ ನನಗೆ ಬೇಸರ ಇಲ್ಲ. ನಾ ನಿನ್ನ ಜೊತೆ ಇರ್ತೀನಿ , ಆದ್ರೆ ಅಪ್ಪನಿಗೆ ಅನವಶ್ಯಕ ನೋವು v cannot change him and we need not hurt him. becoz he is our own...' ಅಂದೆ . ಪುಟ್ಟಿ ಈಗ ಸಂತೃಪ್ತೆ ಈ ವಿಷಯದಲ್ಲಿ . ಮಾನಸಿಕವಾಗಿ ಅವಳು ಆರೋಗ್ಯವಾಗಿದ್ದಾಳೆ . ನನಗೆ ಬೇಕಾಗಿದ್ದಿದ್ದೂ ಕೂಡ ಅವಳ ಸ್ಥಿರತೆ , ಸಂಯಮ, ಮತ್ತು ಖುಷಿ... ಮತ್ತೆ ಅಪ್ಪ ಮಗಳ ಮಧ್ಯೆ ಈ ಅನವಶ್ಯಕ ವಿಷಯಕ್ಕೆ ಮಾತು ಬೇಡ ಅನ್ನೋದು ನನ್ನ ಇಚ್ಛೆಯಾಗಿತ್ತು ಕೂಡ , ಹಾಗೆ ಮಂಜು ಕೂಡ ಬೇಸರಗೊಳ್ಳಬಾರದೆಂಬ ಇಚ್ಛೆ ಇತ್ತು .. ನಾ ಅದೆಷ್ಟು ಸರಿ ಅದೆಷ್ಟು ತಪ್ಪು ಅನ್ನೋದು ನನಗೆ ತಿಳಿಯದು . ಆದ್ರೆ ಒಬ್ಬ ಅಮ್ಮನಾಗಿ, ಒಬ್ಬ ವೈದ್ಯೆಯಾಗಿ, ಒಬ್ಬ ಹೆಂಡತಿಯಾಗಿ ನನಗೆ ನಾ ಏನು ಮಾಡಿದೆ ಮತ್ತು ಯಾಕೆ ಮಾಡಿದೆ ಅನ್ನೋ ಅರಿವಿದೆ . moreover, menstruation ಅನ್ನೋದು ಒಂದು ದೈಹಿಕ, ಮಾನಸಿಕ, ಅಥವಾ ದೈವಿಕ ಖಾಯಿಲೆ ಅಲ್ಲ ಅನ್ನೋ ಅರಿವಿದೆ .....
 ಹೀಗೊಂದಷ್ಟು ಸಣ್ಣ ಕಥೆಗಳು 
1.'ಪ್ರೀತಿಗೆ ನಾಳೆಗಳಿಲ್ಲ ' ಅಂದ್ಲು ಅವಳು .. 
'ಆದರೂ ನಾಳೆಗಳಿಲ್ಲದ ಪ್ರೀತಿಯೂ ಇದೆ , ನಮ್ಮದರಂತೆ ' ಅಂದ್ಲು ಇವಳು...
ನಿಜವೇನೋ !!!!!

2.'ನಿನ್ನ ಭುಜದ ಮೇಲೆ ತಲೆಯಿಟ್ಟು ಒಂದಷ್ಟು ಹೊತ್ತು ಕೂರಬೇಕು '
'ಅಷ್ಟೇನಾ ' ಕಣ್ಣಲ್ಲಿ ಅದೇ ತುಂಟತನ 
'ಹೂಂ, ಅಷ್ಟೇ .. ಅದೆಷ್ಟೋ ವರ್ಷಗಳಾಗಿತ್ತು ಅಲ್ವ ನಾವಿಬ್ಬರೇ ಹೀಗೆ ಏಕಾಂತವಾಗಿ ಇದ್ದು '
'ಮದ್ವೆಗೆ ಮೊದಲೇನೋ ....."
ಮಕ್ಕಳ ಜವಾಬ್ದಾರಿ ಮುಗಿಸಿ ನಿರಾಳವಾಗಿ ಕುಳಿತ ಇಬ್ಬರ ಮೊಗದಲ್ಲೂ ನಗು...

3. 'ಈಗ ನಾ ಸರಿ ಇದ್ದೀನಿ ಕಣೆ , ಎಲ್ಲಾ ಮರೆತು .....' ಅಂದ್ಲು ಅವಳು
'ಒಳ್ಳೆಯದಾಯ್ತು ಬಿಡು , ನಿನ್ನ ಬದುಕು ನೀ ನೋಡಿಕೋ ಇನ್ನು ...' ಅಂದೆ
'ಟೀ ಮಾಡ್ತೀನಿ ನಿನಗೆ ...' ಅಂದ್ಲು ಅವಳು
'ಸ್ವಲ್ಪ ಶುಂಠಿ ಹಾಕು, ...... ' ಅಂದೆ
'ಅವನಿಗೂ ಶುಂಠಿ ಟೀ ಅಂದ್ರೆ ಇಷ್ಟ !!!!!!!!!!!!!"
ಅಂದ್ಲು
ಅವಳು ಅಂದ್ರೆ ಅವಳು ಅಷ್ಟೇ .........

4. 
'ಬದುಕಲ್ಲಿ ಮಾಡಿದ ಅತೀ ದೊಡ್ಡ ತಪ್ಪೊಂದಿದೆ ಕಣೋ '
'ಅದೇನ್ ಹೇಳು ಮತ್ತೆ ..'
'ಬೇಡ ಬಿಡು ... '
'ಹೇಳು ಪ್ಲೀಸ್ '
'ಏನಿಲ್ಲ ಬಿಡು , ಆದ್ರೆ ಬದುಕಲ್ಲಿ ಯಾವತ್ತು ನನ್ನ ಮುಂದೆ ಬರಬೇಡ , ಬಂದ್ರೆ ನಿನ್ನ ಕಾಲರ್ ನನ್ನ ಕೈಲಿರುತ್ತೆ '
'ಓಯ್ , ಟೀ ಶರ್ಟ್ ಹಾಕೊಂಡ್ ಬರ್ತೀನಿ ಬಿಡು .. !!!'
'ಏನ್ ಮಹರಾಯ ಬೈದ್ರೂ ನಗ್ತೀಯ ...'
'ಕೋಪದ ಹಿಂದಿರೋ ಅಗಾಧ ಪ್ರೀತಿಯ ಅರಿವಿದೆ , ಪರಿಸ್ಥಿತಿಗಳ ಅರಿವಿದೆ ಅದಕ್ಕೆ ನಗ್ತೀನಿ ... ಲವ್ ಯು ಎಂದಿನಂತೆ ...ಅಂದ ಹಾಗೆ ನಿನ್ನೆದುರು ಬರೋದಿಲ್ಲ ಬಿಡು, ಬಂದ್ರೆ ಕರಡಿ ಕೈ ಸಿಕ್ಕಂತೆ .!!!!!'
ಅದೆಷ್ಟೋ ವರುಷಗಳ ಗೆಳೆತನ ಪ್ರೀತಿ ... ಬಂಧನವಿಲ್ಲ ಅಷ್ಟೇ !!!!

5.ಈವತ್ತು ನಮ್ಮ ಗೆಳೆತನದ ವಾರ್ಷಿಕೋತ್ಸವ,ನನಗೆ ಏನ್ ಕೊಡ್ತೀಯ ಅಂದ್ಳು 'ನನ್ನಿಂದ ಈ ನಗು ಮಾಸದಂತೆ ನೋಡಿಕೊಳ್ತೀನಿ' ಎಂದ 
'ಬೇರೆಯವರಿಂದ ಮಾಸಿದರೆ' ಅಂದ್ಳು 
'ಮತ್ತೆ ನಗು ತರಿಸ್ತೀನಿ' ಅಂದ . 
ಅಷ್ಟು ಸಾಕು ವಾಸ್ತವ ಬದುಕಿಗೆ.....!!!

6. 'ಒಹ್ ಅದಾ!!! ಆ ನೋವೆ ಮರೆತು ಹೋಯ್ತು ಕಣೆ ಈ ನೋವಲ್ಲಿ ' ಅಂದ್ಲು... 
ಕಣ್ಣಂಚಲ್ಲಿ ಹನಿ ನೀರು ......... 
ನೋವು ಅಂತ್ಯವಾದ ಖುಷಿಗಾ ಅಥವಾ ಹೊಸ ನೋವಿನ ಉದಯಕ್ಕಾ .!?
ಅವಳು ಅವಳೇ !!!
ಬಲು ಅಪರೂಪಕ್ಕೆ ನೆನ್ನೆ ಮಗಮಗಳಿಗೆ ಇಬ್ಬರಿಗೂ ಮಂಜು ಚೆನ್ನಾಗಿ ಬೈದಿದ್ದರು. ಹಳೆಯ ಎಂದೋ ಬೈಯದೆ ಉಳಿದಿದ್ದ ವಿಷಯವನ್ನೆಲ್ಲ ತೆಗೆದು ಬೈದ್ರು .. ಸಂಜೆ ಎಂದಿನಂತೆ ಊಟ ಆಯ್ತು . ಎಲ್ಲಾ ಸ್ವಲ್ಪ ಕಡಿಮೆ ತಿಂದ್ರು , ಕಡಿಮೆ ಮಾತಾಡಿದ್ರು , ಮತ್ತೆ ಮಲಗಿದರು. ಬೆಳಿಗ್ಗೆ ಮಂಜು ಎದ್ರು . ಟೀ ಕುಡಿದು ಡ್ಯೂಟಿಗೆ ಹೋದ್ರು. ಪುಟ್ಟಿ ಎದ್ದು ರೆಡಿ ಆಗೋವಾಗ 'ಅಪ್ಪ ಏನಾದ್ರು ಅಂತ ಮಾ' ಅಂದ್ಲು. 'ಇಲ್ಲಾ ಮಗ, ಆದರೂ ಅಪ್ಪನಿಗೆ ಬೇಜಾರಾಗಿದೆ ಬಿಡು. ನೀವು ಸ್ವಲ್ಪ ರೆಕ್ಟಿಫ್ಯ್ ಮಾಡಿಕೊಳ್ಳಿ , ಸುಮ್ಸುಮ್ನೆ ಅಪ್ಪನ ತನಕ ಯಾಕೆ ಬೇಡದ್ದು'. ಅಂದೆ. 'ಹ್ಞೂ ಮಾ, ಸರಿ '.. ಶಾಲೆಗೆ ಹೋದ್ಲು. ಆಮೇಲೆ ಕಾರ್ತಿ ಕೇಳ್ದ 'ಅಪ್ಪ ಏನಾದ್ರೂ ಅಂತೆನಮ್ಮ ?' 'ಇಲ್ಲ ಮಗ, ಆದರೂ ನೀ ನಿನ್ನ ರೆಕ್ಟಿಫ್ಯ್ ಮಾಡ್ಕೊಬೇಕಲ್ವ, ನೀ ದೊಡ್ಡೋನು' ಅಂದೆ . ಅವನು 'ಸರಿ ಮಾ , ಸಾರಿ ' ಅಂದ. ಮಂಜು ಸಂಜೆ ಡ್ಯೂಟಿಯಿಂದ ಬಂದ್ರು . ಬಂದಿದ್ದೆ ಕೇಳಿದ್ರು 'ಪುಟ್ಟಿ ಕಾರ್ತಿ ಏನಾದ್ರು ಹೇಳಿದ್ರಾ ?' 'ಯಾಕಪ್ಪ?' ಅಂದೆ . 'ಅಲ್ಲ ನೆನ್ನೆ ಬೈದಿದ್ದಕ್ಕೆ ಏನಾದ್ರು ಹೇಳಿದ್ರಾ ಅಂತ ಕೇಳ್ದೆ' ಅಂದ್ರು.. 'ನೆನ್ನೆ ನೀ ಬೈದದಕ್ಕೆ ಖುಷಿಯಾಗಿದೆ ಅಂದ್ರು !!' ಅಂದೆ ನಗ್ತಾ . 'ನೀನೊಂದು , ತುಂಬಾ ಬೈದ್ ಬಿಟ್ಟೆ ಮಕ್ಕಳನ್ನ, ಅದ್ಯಾಕೋ ಸಿಟ್ ಬಂದಿತ್ತು ಸಾರಿ. " ಅಂದ್ರು... ಸಂಜೆ ಮಕ್ಕಳಿಬ್ಬರು ಬಂದ ಮೇಲೆ ಮೂರು ಜನಕ್ಕೂ ಮಾತಾಡೋಕೆ ಒಂದ್ ತರ ..'ಸಾರಿ ಕೃತು, ಸಾರಿ ಕಾರ್ತಿ ' ಅಂತ ಮಂಜು ಹೇಳಿದ ಕೂಡ್ಲೇ 'ಅಪ್ಪೋ ನೀನೆನಪ್ಪ ನೀ ಬೈದೆ ಮತ್ತೇನು ಎದುರು ಮನೆಯವರು ಬೈತಾರ?; ಅಂತ ಇವರಿಬ್ಬರು. 'ಆ ಮಗ ಯಾಕ್ ಬೈತಾನೆ ನಿಮ್ನ ಏನಿಲ್ಲ ಅವನಿಗೆ ' ಅಂತ ಮಂಜು ...
ಅಲ್ಲೆಲ್ಲೋ ಮೋಡ ಕರಗಿದಂತೆ... ನಗುವಿನ ಮಳೆ ಸುರಿದಂತೆ ......
Be it sorrows after happiness r or vice versa.........Life is ..........ಮೋಡ and ಮಳೆ:))))
ಬಹಳಷ್ಟು ಸಾರಿ ಹೀಗಾಗುತ್ತೆ . ನಾವು ತುಂಬಾ ಪ್ರೀತಿಸೋರು ಏನೋ ಕೇಳ್ತಾರೆ , ನಾವು ಅದನ್ನ ಒಪ್ಪಿಕೊಳ್ಳೋದಿಲ್ಲ , ಹೋಗ್ಲಿ ಬಿಡಮ್ಮ ನಿನಗೆ ಇಷ್ಟ ಇಲ್ದೆ ಇದ್ರೆ ಬೇಡ ಬಿಡು ಅಂತ 'ಒಂದ್ ತರಾ ' ಹೇಳ್ತಾರೆ, ನಾವು ಅದಕ್ಕೆ ಕರಗಿ ಹೋಗಿ 'ಹೋಗ್ಲಿ ಬಿಡು ಮಾಡ್ತೀನಿ, ಹೋಗ್ಲಿ ಬಿಡು ಬರ್ತೀನಿ , ಬೇಡ ಬಿಡು ನೀ ಹೇಳಿದ್ದೆ ಆಗ್ಲಿ' ಅಂತೆಲ್ಲಾ ಅವರು ಹೇಳಿದಕ್ಕೆ ಒಪ್ಪಿಬಿಡ್ತಿವಿ ಕೆಲವೊಮ್ಮೆ ಅಭಿಮಾನಕ್ಕೆ ನೋವಾದ್ರು ಹಾಗೆ 'ಸಾವರಿಸಿಕೊಂಡು' ಬಿಡ್ತೀವಿ . 'ಪ್ರೀತಿಗಾಗಿ , ಪ್ರೀತಿಸುವವರಿಗಾಗಿ ತಾನೇ ಬಿಡು, ಖುಷಿ ಇದ್ರೆ ಸರಿ ' ಅಂತ ಅಂದ್ಕೊಳ್ತಾ ಹೋಗ್ತೀವಿ. ನಾನಂತೂ ಬಹಳ ಸಾರಿ ಹೀಗೆ ಮನೆಯವರಿಗಾಗಿ ಅಂತಲೋ , ಪ್ರೀತಿಸುವವರಿಗಾಗಿ ಅಂತಲೋ , ಅವರೇನು ಬೇರೆಯವರ ಬಿಡು ಅಂತಲೋ , ಸುಮ್ಸುಮ್ನೆ ಯಾಕೆ ಅನಗತ್ಯ ಕಿರಿಕಿರಿ ಅಂತಲೋ , ಕಟ್ಟು ಬೀಳ್ತೀನಿ.
ಮೊನ್ನೆ ಹೀಗೆ ಒಂದ್ functionge ಹೋಗಬೇಕಿತ್ತು . ನನಗೆ ಇಷ್ಟ ಇರಲಿಲ್ಲ ಸರಿ ಮಂಜುಗೆ ಹೇಳ್ದೆ 'ನೀ ಹೋಗ್ಬಾ ಪ್ಲೀಸ್'. ಮಂಜು ಎಂದಿನಂತೆ 'ನೀ ಬರದೆ ಇದ್ರೆ ನಾನೂ ಹೋಗೋದಿಲ್ಲ ಬಿಡಮ್ಮ ' ಅಂತ ಅಂದ್ರು ಸಪ್ಪಗೆ . ತುಂಬಾ ಇಕ್ಕಟಿನ ಹಿಂಸೆ . ಪುಟ್ಟಿ ಪಕ್ಕದಲ್ಲೇ ಇದ್ಲು . ಥಟ್ ಅಂತ 'ಬೇಡ ಬಿಡಪ್ಪ ಯಾರೂ ಹೋಗೋದು , ಅವರು ಮಾಡಿರೋದು ಅಷ್ಟರಲ್ಲೇ ಇದೆ. ಅಮ್ಮನಿಗೆ ಮನಸ್ಸಿಗೆ ಹಿಂಸೆ ಅಂದ್ರೆ ಯಾಕೆ ಹೋಗೋದು' ಅಂದ್ಲು . ಮಂಜು ಮುಖ ಒಮ್ಮೆಲೇ ಒಂದ್ ತರ ಆಗಿಹೋಯ್ತು . ಹೋಗದೆ ಇರುವಂತಿಲ್ಲ ಬಿಡುವಂತಿಲ್ಲ ಅನ್ನೋ ಹಾಗೆ 'ಅಲ್ಲ ಕಣಪ್ಪ ನಿನಗೆ ಇಷ್ಟ ಇದ್ರೆ ಹೋಗಿ ಬಾ , ಯಾವಾಗ್ಲೂ ಹಿಂಗೆ ಅಮ್ಮನ್ನ ಯಾಕೆ ಸೆಂಟರ್ ಅಲ್ಲಿ ತರ್ತೀಯ' ... ಪರಿಸ್ಥಿತಿಯ ತುಂಬಾ ಜಟಿಲವಾಗೋದು ಬೇಡ ಅಂತ ನಾನೇ 'ಬಿಡು ಪುಟ್ಟಿ ಹೋಗ್ಬರ್ತೀನಿ 'ಅಂದೆ. ಪುಟ್ಟಿ 'ನೀ ಉದ್ದಾರ ಆಗೋದಿಲ್ಲ ಬಿಡು ನೀನು ನಿನ್ ಗಂಡನ ಕಡೆನೇ ಯಾವಾಗ್ಲು , ನಾವ್ ಹಿಂಗೆಲ್ಲ ಆಗೋದಿಲ್ಲ ಬಿಡು' ಅಂದ್ಲು
ತಪ್ಪೋ ಸರಿಯೋ ಗೊತ್ತಿಲ್ಲ .... ಆದ್ರೂ ಕೆಲವೊಮ್ಮೆ, ಕೆಲವೊಂದು ಬಂಧುತ್ವ ಉಳಿಸಿಕೊಳ್ಳಲು ನಾವೇ (ಮಂಜು ಮತ್ತು ನಾನು)ಕಮಿಟ್ ಆಗ್ತಾ ಹೋಗ್ತೀವಿ . ಇಷ್ಟವಿರಲಿ ಬಿಡಲಿ ಹೊಂದಿಕೊಂಡು ಹೋಗ್ತೀವಿ.... ಅಭಿಮಾನಕ್ಕೆ ಪೆಟ್ಟಾಗೋವರೆಗೂ ...ಪೆಟ್ಟಾದರೆ ಹಗ್ಗ ಕಿತ್ತು ಬೀಸಡೋದೇ
ಬದುಕೇ ಹಾಗೆ ಬಿಸಿಲು ಮಳೆಯ ಹಾಗೆ................

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...