Wednesday, 27 April 2011

ಬದುಕಿಗೆ ಬಣ್ಣ ತುಂಬಿದ ನೀನು......
ಬದುಕಿನ ಬಣ್ಣವನ್ನು ಅಳಿಸಬೇಡ ಗೆಳೆಯ ....
ಬದುಕಿಗೆ ಅರ್ಥ ತಂದವ ನೀನು ......
ಬದುಕನ್ನು ಅನರ್ಥಗೊಳಿಸ ಬೇಡ.....
ನಿನ್ನ ಇರವೇ ಸಾಕು ನನ್ನ ಬದುಕಿಗೆ ....
ಶಾಶ್ವತ ಬಣ್ಣ ಅರ್ಥ ತುಂಬಲು...... 
ನೋಟ.....ಸ್ಪರ್ಶ.....ಬೇಟಿ....ಏಕೇ


 ...
ನಿನ್ನ ಪ್ರೀತಿ ಹೊಂದಲು ......



ನೀನೆ ಬೆಳೆಸಿದ ಒಲವಿನ ತೋಟವಿದು ಗೆಳೆಯ 
ನೀನು ನಂಬಿದರೂ ನಂಬದಿದ್ದರೂ ಇದು ನಿಜ …!
ಯಾರಿಗೂ ಕಾಣದೆ..ಯಾರಿಗೂ ಕೇಳದೆ ....

ಬೆಳೆದ ಪ್ರೀತಿಯ ಹೊವುಗಳು .....
ನೀನು ಎಂದಾದರೂ ಬರುವೆ ಎಂದು ಕಾಯುತ್ತಿವೆ .... .
ನೂರಾರು ಜನ್ಮದ ಪ್ರೀತಿ ಆಹ್ವಾನದೊಂದಿಗೆ ......
ಪ್ರೀತಿಯಿಂದ ಬಂದು ಆ ಹೂಗಳ ಪ್ರೀತಿ ಅನುಭವಿಸಲಾರೆಯ ಆಸ್ವಾದಿಸಲಾರೆಯ..
ನನ್ನ ನಿನ್ನ ಸಂಬಂಧವೇ ಹೀಗೆ......ಗೆಳೆಯ

ಬೇಕು ಎಂದರೂ ಸನಿಹ ಇರಲಾಗದೆ.......

ಬೇಡ ಎಂದರೂ ಸಾಂಗತ್ಯ ಬಿಡಲಾಗದೆ ..
...
ಅಗತ್ಯ ಅನಗತ್ಯಗಳ ವ್ಯತಾಸವೇ ತಿಳಿಯದ ಹಾಗೆ......

ನನ್ನದಲ್ಲದ್ದು ನನ್ನದಾದ ಹಾಗೆ .


ನನ್ನ ನಿನ್ನ ನಡುವೆ ಎಲ್ಲ ಇದ್ದರೂ ಏನೂ ಇಲ್ಲದ ಹಾಗೆ........

ಏನು ಇಲ್ಲದಿದ್ದರೂ ಎಲ್ಲ ಇದ್ದ ಹಾಗೆ.....


ಪ್ರೀತಿ ಇದ್ದೂ ಪರವಾನೆಗೆ ಇಲ್ಲದ ಹಾಗೆ..........

ಬಂದಗಳಿಲ್ಲದ ಸಂಬಂಧ...........
ಆದರೂ ಪ್ರೀತಿಯಲ್ಲಿ ಬಂಧಿಗಳು ನಾವು .....

ಕಣ್ಣಿಗೇ ಕಾಣದ ಹಾಗೇ....
 
ನಾನು ನೀನು ಸಮಾನಂತರ ರೇಖೆಗಳು ಗೆಳೆತಿ ...
ಭೂಮಿ ಬಾನು ಇದ್ದಂತೆ.........
ಬಾನು ಬಾಗಿದಂತೆ ಕಂಡರೂ..
ಭೂಮಿ ಬಾನತ್ತ ಚಾಚಿದಂತೆ ಕಂಡರೂ ..
ಬಾನು ಭೂಮಿಗಾಗಿ ಮಳೆ ಹನಿಸುವೆ ಎಂದರೂ..
ಭೂಮಿ ಮಳೆಗಾಗಿ ಹಪಹಪಿಸಿದರೂ ...
ಬಾನು ಭೂಮಿ ಅಪ್ಪಿದಂತೆ ಕಂಡರೂ....
ಬಾನು ಭೂಮಿ ..ನಾನು ನೀನು......ಗೆಳತಿ...
ನಮ್ಮದೇ ಪರಿದಿ...ನಮ್ಮದೇ ಪರದೆ ...ನಮ್ಮದೇ ಸರಹದ್ದು..
ಆದರು ಕ್ಸಿತಿಜದಂಚು ತಲುಪಿದಾಗ ......
ಪರಿದಿ ಪರದೆ ಎಲ್ಲ ಹರಿದು ಸರಹದ್ದ ತೊರೆದು...
ನಾನು ನಿನ್ನಲ್ಲಿ..ನೀನು ನನ್ನಲ್ಲಿ.........
ಹೊರಟೆ ಬಿಟ್ಟೆಯಲ್ಲ ಗೆಳೆಯ....
ಗುರುತೇ ತಿಳಿಯದ ಹಾಗೆ...
ನಗೆಯ ಉಳಿಸದ ಹಾಗೆ...
ಮನವ ಅರಿಯದ ಹಾಗೆ....
ಯಾರಿಗೂ ಕಾಣದ ನಿನ್ನ ಹೆಜ್ಜೆ ನನ್ನ ಪುಟ್ಟ ಮನದಲ್ಲಿ ಹಾಗೆ ಇದೆ..
ನಿನ್ನ ದನಿಯ ರಿಂಗಣ ನನ್ನ ಕಿವಿಯಲ್ಲಿ ಧ್ವನಿಸುತ್ತ ಇದೆ..
ನಿನ್ನ ಪ್ರೀತಿಯ ಹನಿ ಹೃದಯದಲ್ಲಿ ಹನಿಸುತ್ತ ಇದೆ...
ಆದರೂ....
ನಿನ್ನ ಹೆಜ್ಜೆ..ನಿನ್ನ ದನಿ..ನಿನ್ನ ಪ್ರೀತಿ ಹಾಗೆ ಭದ್ರ ಮಾಡುವೆ ಗೆಳೆಯ......
ಯಾರಿಗೂ ಕಾಣದ ಹಾಗೆ...
ಎಂದಾದರು ನೀ ಮತ್ತೆ ಬರುವೆ ಎಂದು....
ಬಂದು ನನ್ನ ಕಲೆಯುವೆ ಎಂದು......
ನನ್ನ ನಿನ್ನ ನಡುವೆ ಏನು ಇಲ್ಲ ಎಂಬ ಭಾವ....
ಆದರೂ ನಿನ್ನ ಹಿಡಿದೆಡುವ ಛಲ.....
ಹೋಗಿಬಿಡು ನನ್ನ ಬಿಟ್ಟು ಎನ್ನುವ ವ್ಯರಾಗ್ಯ.....
ಬಿಟ್ಟಿರಲಾರೆ ನಿನ್ನ ಬಿಟ್ಟು ಎನ್ನುವ ಪ್ರೀತಿ.......
ಬದುಕು ಕೊಡು ಕೊಳ್ಳುವಿಕೆ ಎಂಬ ಅನಿಸಿಕೆ...
ಆದರೂ ಬದುಕಬೇಕೆಂಬ ಹಂಬಲಿಕೆ........
ನೆನಪು ಕನಸುಗಳ ನಡುವೆ .ನಾನಿದ್ದೇನೆ.......
ನೆನ್ನೆ ನಾಳೆಗಳ ನಡುವಿನ ಇಂದಿನಲಿ...
ನಿನ್ನಿಂದ ....ನಿನಗಾಗಿ......ನನ್ನ ಒಲವಿಗಾಗಿ ...
ಮೌನ ಗೀತೆಯಾಗಿ....ಮೂಕ ರಾಗವಾಗಿ ........
ಇಂದೇಕೋ ನಿನ್ನ ನೆನಪು ಕಾಡುತ್ತಿದೆ ಗೆಳೆಯ.....
ಮೊದಲ ಮಳೆ ಇಳೆಯ ಸೋಕಿದ ಪರಿಗೆ...
ಹನಿಯು ಭುವಿಯ ಚುಂಬಿಸಿ .....
ಭುವಿಯು ಹನಿಯ ಅಪ್ಪಿದ ಸೊಬಗಿಗೆ....
ಮಳೆಯಲ್ಲಿ ಮಿಂದ ವಸುಧೆಯ ಮುಗುಳ್ನಗೆಯ ಮಿಂಚಿಗೆ...
ನಿನ್ನ ನೆನೆಪು ಸುಳಿದಾಡುತ್ತಿದೆ ಗೆಳೆಯ......
ಸುಳಿದ ನೆನಪೆಲ್ಲ ಹನಿ ಹನಿಯಾಗಿ 
ಮನದ ಬನದಲ್ಲಿ ತುಂತುರು ಮಳೆಯಾಗಿ ....
ನನ್ನ ಮನದ ಹಾಡಾಗಿ ಮೂಡಿದೆ ಗೆಳೆಯ..........

ಸಾಂಗತ್ಯ

ನಿನ್ನ ನೆನಪಿನ ಸಂಪುಟದಲ್ಲಿ 
ಕಳೆದು ಹೋಗಿದ್ದೇನೆ ಗೆಳೆಯ ನಾನು..........
ಪುಟ ಪುಟದಲ್ಲೂ ..
ಪದ ಪದದಲ್ಲೂ ..
ನಿನ್ನೊಳಗಿನ ನನ್ನನ್ನು...
ನನ್ನೊಳಗಿನ ನಿನ್ನನ್ನು...
ನಮ್ಮೊಳಗಿನ ಪ್ರೀತಿಯನ್ನು..
ನಮ್ಮಿಬ್ಬರ ಸಾಂಗತ್ಯವನ್ನು ...
ಕಾಣುತ್ತಿದ್ದೇನೆ ಗೆಳೆಯ....
ಸಂಪುಟದ ತುಂಬೆಲ್ಲ ....
ಸಾಮಿಪ್ಯವನ್ನೇ ಬೇಡದ...
ಸ್ಪರ್ಷವನ್ನೇ ಕೇಳದ...
ಬಣ್ಣ ಬಣ್ಣದ ಪ್ರೀತಿಯ ಹೂಗಳು..
ಕವಿತೆಗಳು...ರಾಗಗಳು....
ಕಳೆದುಹೋಗಿದ್ದೇನೆ ನಾನು.....ನಿನ್ನ ಸಂಪುಟದಲ್ಲಿ ..
ಪ್ರೀತಿಯಲಿ..ಕವಿತೆಯಲಿ...ರಾಗದಲಿ..!!!!!

ಅಂತರ

ಅಂತರವಿದ್ದರು.
ನಿರಂತರ ಪ್ರೇಮ ನೀಡುವ ನಿನ್ನ ಪರಿ ...
ಬೆರಗು ತರುತ್ತದೆ ಗೆಳೆಯ.....
ನಸುಗತ್ತಲ ಮುಗಿಲ ನೋಡುತ್ತಾ ...
ನಿನ್ನ ಪಿಸುನುಡಿಯ ಅನುಭೂತಿ ಪಡೆಯುತ್ತಾ...
ನಿನ್ನ ಬೆಚ್ಚನೆಯ ಸ್ಪರ್ಶದ ಮುದ ಅನುಭವಿಸುತ್ತ...
ಪರಿಪೂರ್ಣ ಸಾಂಗತ್ಯದ ಕನಸು ಕಾಣುತ್ತ.....
ಮನದಾಳದ ಮೌನದಲ್ಲಿ.......
ಜೀವವೀಣೆಯ ಝೆ0ಕಾರದಲ್ಲಿ ...
ಇಲ್ಲದಿದ್ದರೂ ಇರುವಿಕೆಯ ಕಡಲಲ್ಲಿ ಮುಳುಗೆಳುತ್ತಾ..........
ಕಾಯುವೆ....ಕನವರಿಸುವೆ.....
ದಿಗಂತದ ಅಂಚಿನ ಜೀವಗಾನದ ಮಿಡಿತಕ್ಕಾಗಿ......
ನಿನಗಾಗಿ.....ನಿನ್ನ ಒಲವಿಗಾಗಿ......

ME

She Has Secrets You'll Never Know Or Understand
She Appears So Strong On The Outside..But On The Inside Her World Is Spinnin Upside Down.
She is Smiling And Standing Tall to The Outta World  But  She is Crying And Breaking Down In Her Inner World.
She Appears So Happy to Her Mates,But Alone, She Shares Her Tears With Her Pillow
She Knows Not to Get Her Hopes Up,As They Always Come Crashing Down
She had Heard It All Before & Felt It All.
Shes Experienced More Then Her Fair Share.
One  Touch, and  She'll Flinch
One  Harsh Word  and She'll Cry
One  Bad Moment and She'll Break Down
She Trusts No one Because The People She Has- Hurt Her & Left Her to  Pick Up The Pieces
She Believes No one Because The People She Has- Lied & Betrayed Her
So For Now She'll Keep everything  to Herself & Pretend Everything Is Fine
 When Everything Is Wrong.........

AND

I Know This Girl, Because This Girl...Is ME........
ನಸುಕು ಎದ್ದಾಗ ಇರುಳಿನ ಕೋಪ ಆರಿರಲಿಲ್ಲ...
ಪ್ರೀತಿಯ ಮಾತಿರಲಿ ಬರಿ ನೋಟವು ಇರಲಿಲ್ಲ...
ನಿನಗೆ ಇಷ್ಟಾದರೆ ನನಗಿನ್ನೆಷ್ಟು ಎಂಬ ಅವನ ಭಾವ....
ಹೋದರೆ ಹೋಗು ಎಲ್ಲಿ ಹೋಗುವೆ ಎಂಬ ನನ್ನ ಹಠ.....
ಕೊನೆಗೂ ಹೊರಟೆ ಹೋದ ನನ್ನನ್ನು ನೋಡದೆ...ನನಗೆ ಹೇಳದೆ...
ಅಷ್ಟೆಲ್ಲ ಪೊಗರು ಮಾಡಿದ್ದ ನನ್ನ ಮನ ಈಗ ಶೂನ್ಯ....ಕಣ್ಣ ತುಂಬಾ ನೀರು........
ಕಣ್ಣ ತುಂಬಿದ ಹನಿ ಕೆಳ ಜಾರುವ ಮೊದಲೇ ಕೇಳಬಂದಿತು...
ದೂರವಾಣಿಯ ರಿಂಗಣ .........
" ಕಣ್ಣು ಒರೆಸಿಕೊ ಹುಡುಗಿ ಸಂಜೆ ಬೇಗ ಬರುವೆ"
ಎಂದ ಇನಿಯನ ಸಾಂತ್ವನ.
ಈಗ ತುಂಬಿದ ಕಣ್ಣ ಹನಿ ನೀನು ನನ್ನವನೆಂಬ ಹಮ್ಮಿಗೆ ಗೆಳೆಯ...
ಹನಿಯನ್ನು ಜಾರಗೋಡದ ನಿನ್ನ ಪ್ರೀತಿಗೆ..

ಸಾರ್ಥಕ್ಯ .........

ನೀನಂದು ಮಲಗಿದ್ದೆ...
ನಾ ನಿನ್ನ ಬದಿಯಲ್ಲಿ ಕುಳಿತು ನೀನು ಕನಸಿನಲ್ಲಿ ನಗುವುದ ಕಂಡಿದ್ದೆ...
ನಿನ್ನ ಮುಂಗುರುಳ ಸವರಿ...ನಿನ್ನ ಹಣೆಗೊಂದು ಹೂಮುತ್ತನಿತ್ತು ...
ನಿನ್ನಂದ ಕಂಡು ಕಣ್ಣೀರಾಗಿದ್ದೆ....
ಅದೇನು ಮೋಡಿಯೋ ಮರ್ಮವೋ ಅರಿಯದಾದೆ....
ನನ್ನ ಮನ ನಿನ್ನ ಬಳಿಯಿಂದ ದೂರ ಸರಿಯದಾಗಿತ್ತು....
ಮಾಡುವುದೆಲ್ಲ ಬಿಟ್ಟು ನಿನ್ನ ಬಳಿಯೇ ಇರುವ ಹಂಬಲ ಕಾಡಿತ್ತು...
ನಾನು ಅಲ್ಲೇ ನಿನ್ನ ಬಳಿ ನಿನ್ನ ಪುಟ್ಟ ಕೈ ಹಿಡಿದು ಗೋಡೆಗೊರಗಿ ಕುಳಿತು ...
ನಿನ್ನನ್ನೇ ನೋಡುತ್ತ ಎಲ್ಲ ಮರೆತು ......
ಮತೊಮ್ಮೆ ನಿನ್ನ ಪ್ರೀತಿಸ ತೊಡಗಿದೆ....
ಮಾತೃತ್ವದ ಸಾರ್ತಕ್ಯ ನೀಡಿದ ನೀನು ಮಾತ್ರ ತುಟಿಯಂಚಲ್ಲಿ ನಗುತ್ತಿದ್ದೆ.........

Monday, 25 April 2011

ಜೀವಜಲ

 





















ಅಂಗಳದಿ ಸುರಿದ ಬೆಳದಿಂಗಳು ........
ತಿಂಗಳನ ಬೆಳಕಿನಲ್ಲಿ ತುಂತುರು ಹನಿಗಳು .....
ಮನದ ತುಂಬಾ ಪ್ರೀತಿಯ ಶರಧಿ ಉಕ್ಕಿಸುತ್ತದೆ ಗೆಳೆಯ.......
ಇವನಾರು............ಇದೇಕೆ ಈ ಪ್ರೀತಿ ....
ಮೊದಲ ನೋಟದ ಪ್ರೀತಿಯನ್ನಲು.....ನಿನ್ನ ರೂಪ ಕಣ್ಣ ತುಂಬಾ ತುಂಬಿಕೊಂದಿಲ್ಲ ....
ಮೋಹವೆನ್ನಲು ..ನಿನ್ನ ಬೆರಳ ತುದಿಯ ಸ್ಪರ್ಶ ಸುಖದ ಅರಿವಿಲ್ಲ....
ಬಂಧುತ್ವವವೇ........ಬಂಧನವೇ ಇಲ್ಲ......
ಜನುಮಗಳ ಅನುಬಂಧವೆನಲು .....ಜನ್ಮದ ತಿಳಿವಿಲ್ಲ......
ಮತ್ತೇಕೀ ವ್ಯಾಮೋಹ...ಮತ್ತೇಕೀ ಸೆಳೆತ.........
ವೇಣು ವಾದನಕ್ಕೆ ಸೋತ ರಾಧೆಯಂತೆ........
ಸಾಗರ ಸೇರುವ ಹಂಬಲಿಕೆಯ ನದಿಯಂತೆ....
ಉತ್ತರವಿಲ್ಲದ ಪ್ರಶ್ನೆಗೆ ಚಂದಿರ ಉತ್ತರಿಸಿದ......
ನಿನ್ನ ಅಂಗಳದಿ ಸುರಿದ ಬೆಳದಿಂಗಳು .....ಅಲ್ಲೂ ಇದೆ.....
ಭೋರ್ಗರೆವ ಮಳೆ ಅಲ್ಲೂ ಇದೆ.....
ಮನದ ತುಂಬಾ ಒಲವಿನ ಅಲೆಗಳು...ಅಲ್ಲೂ ಇದೆ..
ಮತ್ತೆಕಿರಬಾರದು ವ್ಯಾಮೋಹ..ಮತ್ತೆಕಿರಬಾರದು ಸೆಳೆತ....
ಹೌದಲ್ಲವೇ ಗೆಳೆಯ...............
ಭುವಿಗೆ ಸೋಕಿಯು ಸೊಕದಂತಿರುವ ಬಾನಿನಂತೆ ...
ನೀನು ಅಲ್ಲಿ ನಾನು ಇಲ್ಲಿ........ಚಂದಿರನ ರಾಯಭಾರದಲ್ಲಿ.....
ಸ್ಪರ್ಶವಿಲ್ಲದೆ, ನೋಟವಿಲ್ಲದೆ, ಒಲವಿನ ದೋಣಿಯಲ್ಲಿ.
ಇದ್ದರು ಇಲ್ಲದಂತೆ....ಇಲ್ಲದಿದ್ದರೂ ಇದ್ದಂತೆ...ಬದುಕಿನ ಪಯಣದಲ್ಲಿ
ಬದುಕಿಗೆ ಬೆಳಕಾಗಿ...ಜೀವಜಲವಾಗಿ.........
ಮಳೆಯಾಗುತ್ತಿದೆ.
ಹನಿ ಹನಿಯದೂ ಒಂದೊಂದು ಕತೆ ..
ಜಗದ ದನಿಗೆ ಕಿವುಡಾಗಿ....ಕತೆ ಕೇಳುತ್ತಿದ್ದೇನೆ ...
ನೊಸಲ ತಾಕಿದ ಹನಿಯು ನೀನಿಟ್ಟ ಸಿಂದೂರದ ....
ಕಣ್ಣಂಚ ತಾಕಿದ ಹನಿ ಕಂಬನಿಯೊಡನೆ ಕೂಡಿ ನಿನ್ನ ಸಾಮಿಪ್ಯ ಬಯಸುವ 
ತುಟಿಯಂಚ ತಾಕಿದ ಬಿಂದು ಮುತ್ತಿನ ಮತ್ತಿನ.....
ಒಡಲ ತಾಕಿದ ಹನಿ ನಮ್ಮ ಮಿಲನದ......
ಕತೆಗಳನ್ನು ಹೇಳುತ್ತಿವೆ.
ಕತೆ ಕೇಳುತ್ತಿರುವ ಮನ
ಮಳೆಗೆ ಬಿರಿದ ಇಳೆಯಂತೆ...
ಒಲವಿನ ವೀಣೆ ನುದಿಸುತ್ತಿದೆ....
ಮೌನವಾಗಿ...ನಿನಗಾಗಿ....ನಿನ್ನ ಪ್ರೀತಿಗಾಗಿ....
ಪ್ರೀತಿಯ ಮಳೆಯಾಗಿ...ಹಿತವಾಗಿ..ಸೊಗಸಾಗಿ.

ಕಿರುಹಣತೆ










ಅಳಲಾರೆ ಗೆಳೆಯ ನಾನು ಹಾಗೆ ಸುಮ್ಮನೆ...
ಪ್ರೀತಿಸಿದವನ ಮುಂದಲ್ಲದೆ ಮತ್ತೊಬ್ಬರ ಮುಂದೆ...
ಪ್ರೀತಿಯ ಮುಂದೆ ನಾನು ತುಂಬಾ ಅಬಲೇ...
ಅಳಲಾರೆ ಗೆಳೆಯ ನಾನು ಹಾಗೆ ಸುಮ್ಮನೆ...
ಪ್ರೀತಿಸುವವನ ಮುಂದಲ್ಲದೆ ಇನ್ನೊಬ್ಬರ ಮುಂದೆ..
ನನ್ನೆಲ್ಲ ಅಭಿಮಾನ ತೊರೆದು
ಪ್ರೀತಿಸುವವನ ಮುಂದೆ ನಾನು ತುಂಬಾ ನಿರಭಿಮಾನಿ...
ನನ್ನ ಕಂಬನಿ ನಾನು ಅಬಲೇ ಎಂದಲ್ಲ...ನಾನು ನಿರಭಿಮಾನಿ ಎಂದಲ್ಲ...
ನನ್ನ ಕಣ್ಣಿನ ಹನಿ ನಿನ್ನ ಅನುಕಂಪಕ್ಕಾಗಿ ಅಲ್ಲ ...ನಿನ್ನ ಸೆಳೆಯಲು ಅಲ್ಲ...
ಪ್ರೀತಿಯ ಬಿಟ್ಟು ಬೇರೇನು ನೀಡಲಾಗದ ನನ್ನ ಅಸಹಾಯಕತೆಗಾಗಿ...
ನಾ ನಿನಗೆ ನೀಡುವ ಪುಟ್ಟ ಪ್ರೀತಿಗೆ....
ನೀ ನನಗೆ ನೀಡುವ ಪರಿಪೂರ್ಣ ಒಲವಿನ ಕಿರುಹಣತೆಗಾಗಿ....
ಸಂಬಂದಗಳ ಪರಿವೆ ಇಲ್ಲದೆ ಬೆಳೆದ ನಮ್ಮ ಪ್ರೀತಿಯ ರೀತಿಗಾಗಿ!!!!!!......

ಪ್ರೀತಿಯ ಕೊಂಡಿ















ಯಾಕೆ ನೀನು....ಯಾಕೆ ನಾನು..
ಆಯ್ಧವರಾಗಿದ್ದೇವೆ ಈ ಪ್ರೀತಿಯಲ್ಲಿ....
ಈ ಬಾಂಧವ್ಯದಲ್ಲಿ..
ಯಾರ ಕೈವಾಡವಿದು ...
ಉತ್ತರ ಧ್ರುವದ ನಾನು...ದಕ್ಷಿಣ ತುದಿಯ ನೀನು..
ಒಲವಿನ ಧಾರೆಯಲ್ಲಿ ...ಪ್ರೀತಿಯ ಕೊಂಡಿಯಲ್ಲಿ ..
ನಿನಗೂ ನಿನ್ನದೇ ಬಂಧಗಳು....
ನನಗೋ ನನ್ನದೇ ನಿರ್ಬಂಧಗಳು..
ನಮ್ಮ ನಡುವೆ ನಾವೇ ಎಳೆದುಕೊಂಡ ಗೆರೆಗಳು...
ಎಳೆದ ಪರೆದೆಗಳ ಹಿಂದೆ ಪ್ರೀತಿಯ ಎಳೆಗಳು...
ವಿಷ್ಮಯವೇ .....ವಿಶೇಷವೆ...ವಿಷಾದವೇ ....
ಏನು ಅರಿಯದ ಮನಸ್ಥಿತಿ ನನ್ನದು...
ನನ್ನದೊಂದು ಕೋರಿಕೆ ಒಲವೆ...
ನೀನು ನಾನು...ನಾನು ನೀನು...
ಅನಂತದಲ್ಲಿ ಲೀನವಾಗುವವರೆಗೆ....
ನಿನ್ನೊಳಗೆ ನಾನು...ನಾನ್ನೊಳಗೆ ನೀನು..
ಕೃಷ್ಣನಂತೆ ...ರಾಧೆಯಂತೆ...
ಅಗಾಧ ಪ್ರೇಮ ಸಾಗರದಂತೆ...
ಸಾಗೋಣ ..
ಒಲವಾಗಿ...ಬಲವಾಗಿ ...ಗೆಲುವಾಗಿ...
ಹೀಗೆ ಒಂದಾಗಿ ಅಗೋಚರವಾಗಿ...ನಿರಂತರವಾಗಿ.....!!!!

ಸಾಗರ


  

















ಮೊನ್ನೆ ಸಮುದ್ರ ರಾಜ ಅವನರಮನೆಗೆ ಕರೆಸಿಕೊಂಡಿದ್ದ ....
ಬಾಗಿಲಲ್ಲೇ ಅಲೆಗಳಿಂದ ಪಾದ ತೊಳೆಸಿದ್ದ...
ಕಪ್ಪೆ ಚಿಪ್ಪುಗಳ ಉಡುಗೊರೆ ನೀಡಿದ್ದ...
ಮರಳ ಉಡಿಗೆ ಸುರಿದು ಮಡಿಲು ತುಂಬಿದ್ದ..
.
ಸಂಜೆಗತ್ತಲ ನಡುವೆ...
ಅಲೆಗಳ ರಾಶಿಯೊಡನೆ.
ನನ್ನ ಅವನ ಸರಸ...
ಅವನೊಳಗೆ ಸೇರಿ ಬಿಡುವ ನನ್ನ ಮನದ ತನನ...
ಹೊರಟು ಬಿಡು ಬೇಗಾ ಎಂದು ಅವನ ಮನನ.....
ಪ್ರೀತಿಯಿಂದ ಬಳಿಗೆ ಬಂದ ಹೆಣ್ಣನ್ನು ..
ಒಮ್ಮೆಲೇ ಅಪ್ಪಿ ಒಳ ಕರೆದೊಯ್ಯಬಾರದೆ...
ನಿನ್ನೊಳಗೊಂದಾಗಿಸಿಕೊಳ್ಳಬಾರದೇ ...

ಮನದ ಬಯಕೆ ಅರಿತ ಸಾಗರ ನಸು ನಕ್ಕ..

ಪ್ರೀತಿ ಎಂದರೆ ಒಂದಾಗಿಸಿಕೊಳ್ಲೋದಲ್ಲ..
ಒಲುಮೆ ಎಂದರೆ ಮಿಲನವಲ್ಲ...
ನೀನಿರುವಲ್ಲೇ ನನಗಾಗಿ ನೀನು...
ಒಲವಿನ ಹಣತೆ ಹೊತ್ತಿಸಿ....
ಆ ಜ್ಯೋತಿಯಿಂದ ಇರುವ ಇರವನ್ನು ಬೆಳಗು....
ಎಂಬಂತೆ ನಕ್ಕ.......ಅಕ್ಕರೆಯಿಂದ ಬೀಳ್ಕ್ಕೊಟ್ಟ..

ಆ ಪ್ರೀತಿ ಸ್ನೇಹದ ಧಾರೆಯಲ್ಲಿ ಮಿಂದೆದ್ದ ನಾನು ಚಿರಪ್ರೇಮಿ...ಚಿರವಿರಹಿ..:)))

Monday, 11 April 2011



ನೀನು ನನಗೆ ಯಾರು ಎಂಬ ಪ್ರಶ್ನೆ ಕಾಡುತ್ತಿದೆ ಗೆಳೆಯ......ಹೆಸರಿಸಲಾಗದ ಸಂಬಂದ ನಮ್ಮದು..........ತಂದೆಯ ಮಮತೆ ..ಅಣ್ಣನ ವಾತ್ಸಲ್ಯ...ಗೆಳೆಯನ ಆತ್ಮೀಯತೆ...ಪ್ರೇಮಿಯ ಪ್ರೇಮ......
ಪತಿಯ ಆದರ....
ಮಗನ ತುಂಟತನ ...
ಎಲ್ಲ ನೀಡುವ ನೀನು........
ನನಗೆ ಏನೂ ಅಲ್ಲ ..ಯಾರೂ ಅಲ್ಲ 
ಆದರು...ನೀನೆ ಎಲ್ಲ...ನೀನಿಲ್ಲದೆ..ಏನೂ ಇಲ್ಲ...







ನಿನಗಾಗಿ ಕಾಯುವ ನನ್ನ ಹೆಗಲ ಮೇಲೆ ..
ಮತ್ತೊಂದು ಹಗಲು  ಇನ್ನೊಂದು ಇರುಳು 
ಕಳೆದು ಹೋಗಿದೆ ಗೆಳೆಯ.......
ವರುಷಗಳೇ ಉರುಳಿದರು  ಕಾಯುವಿಕೆ ಬದಲಾಗದು .....
ನೀನು ಬರಲಾರೆಯೆಂದು ನನಗೆ ತಿಳಿದಿದ್ದರೂ...
ನಾನು ಕಾಯುತ್ತಿರುವೆ ಎಂದು ನಿನಗೆ ಅರಿವಿದ್ದರೂ...
ನಮಗಿಬ್ಬರಿಗೂ
ಅದು ಕಾಯುವಿಕೆಯಲ್ಲ..ವಿರಹವಲ್ಲ...ಮೋಹವಲ್ಲ...
ಅದು ಪ್ರೀತಿ ಪ್ರೇಮಕ್ಕು ಮೀರಿದ ಸುಂದರ ಅನುಬಂಧ ಎಂದು.....
ಅದಕ್ಕೆ ಬಂಧವಿಲ್ಲ...ಮುಪ್ಪಿಲ್ಲ......
ಆದರೂ ನಾನು ಕಾಯುವೆ ಗೆಳೆಯ........
ಸಾವಿನಾಚೆಯ ಬದುಕಿನ ಮಿಲನಕ್ಕಾಗಿ..ಮೌನವಾಗಿ........
 ಗೊತ್ತು....

Friday, 8 April 2011















ಕಿರು ಹಣತೆ..........

ನಿನ್ನ ಮುನಿಸೂ ಕೆಲವೊಮ್ಮೆ ಖುಷಿ ತರುತ್ತದೆ ಗೆಳೆಯ....
ನಾನು ಇಡಿಯಾಗಿ ನಿನ್ನವಳೆಂದು
ನನ್ನ ಆನಂದದ ಹಕ್ಕು ನಿನ್ನದೆಂದು...
ನನ್ನ ಕಂಬನಿ ಒರೆಸುವ ಕರ ನಿನ್ನದು ಮಾತ್ರವಾಗಿರಬೇಕೆಂದು ...
ನನ್ನ ಹೆಜ್ಜೆಯಾ ಗೆಜ್ಜೆಯ ದನಿ ನಿನಗೆ  ಮಾತ್ರ ಕೇಳಬೇಕೆಂದು......
ನನ್ನ ನಗು ನಿನ್ನ ನಗುವಿನೊಂದಿಗೆ  ಬೆರೆಯಬೇಕೆಂದು.....
ನನ್ನ ಪುಟ್ಟ ಹೃದಯದ ತುಂಬೆಲ್ಲ ನಿನ್ನದೇ ಚಿತ್ರವಿರಬೇಕೆಂದು....
ನೀನೆಣಿಸುವ ಪರಿ ಮುದ ನೀಡುತ್ತದೆ .....
ನನಗೂ ಇದೆಲ್ಲ ಪ್ರಿಯವೇ ಗೆಳೆಯ.....
ನನಗೂ ನೀನೆಂದರೆ  ಪ್ರೀತಿಯಿದೆ....ಭಾವವಿದೆ...ರಾಗವಿದೆ...
ಆದರೂ ನಾನು ನಿನಗೆ ಹೇಳಲಾರೆ.....
ತಾವರೆ ಎಲೆಯ ಮೇಲಿನ ಪುಟ್ಟ ಹನಿಯಂತೆ....
ದೇವರ ಮುಂದಿನ ಕಿರು ಹಣತೆಯಂತೆ......
ಉಳಿದು  ಹೋಗುವೆ ಗೆಳೆಯ ........
ಏಕೆಂದರೆ
ಎಂದಾದರು ...ನೀನು ನನ್ನಿಂದ  ದೂರಾದರು
ನಿನ್ನ ಮನದಲ್ಲಿ ನಿನ್ನ ಬಗೆ ಬೇಸರ ಮೂಡದಿರಲಿ...
ಅವಳ ತೊರೆದೆನಲ್ಲ ಎಂಬ ಸಂಕಟ ಕಾಡದಿರಲಿ...
ನಾನು ಹೀಗೆ ಉಳಿಯುವೆ ಗೆಳೆಯ ....
ಹೇಳದೆಯೇ ......ನಿನ್ನ ಆರಾಧಿಸುತ್ತ .....ಪ್ರೀತಿಸುತ್ತ.....

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...