ಸೋದರತ್ತೆಗೆ ತಮ್ಮ ಮಗನಿಗೆ ಸೋದರ ಸೊಸೆಯನ್ನ ತರಬೇಕು ಅನ್ನೋ ಅದಮ್ಯ ಆಸೆ .. ಒಂದು ಕಾಲದಲ್ಲಿ ಏನೂ ಸರಿ ಇಲ್ಲದೆ ಇದ್ದಾಗ ತಿರುಗಿ ಕೂಡ ನೋಡದ ಅತ್ತೆ, ಸೋದರಸೊಸೆ ಚೆಂದ ಓದಿ ಚೆಂದ ಇದ್ದಾಳೆ ಎನಿಸಿದಾಗ ಅವಳನ್ನ ತಮ್ಮ ಮಗನಿಗೆ ಮದುವೆಗೆ ಕೇಳಿದರು .. ನಾದಿನಿ 'ಅವಳ ಓದು ಮುಗಿಯಲಿ ಅತ್ತಿಗೆ . ಆಮೇಲೆ ಅವಳ ಇಷ್ಟ' ಎಂದಾಗ ಸೊಸೆ ತನ್ನ ಮಾತು ತೆಗೆಯಲಾರಳು ಎನಿಸಿ ಸುಮ್ಮನಾದರು . ಆದರೆ ಸೋದರಸೊಸೆ ಮತ್ಯಾರನ್ನೊ ಪ್ರೀತಿಸಿ ಅವನನ್ನೇ ಮದುವೆಯಾಗ ಹೊರಟಾಗ ಕೋಪ ಮಾಡಿಕೊಂಡು ಮತ್ತೆ ಮಾತುಬಿಟ್ಟರು. ಒಂದಷ್ಟು ವರುಷಗಳು ಕಳೆದ ಮೇಲೆ ಮಾವ ತೀರ ಹುಷಾರು ತಪ್ಪಿದಾಗ ಮತ್ತೆ ಕುಟುಂಬಗಳು ಒಂದಷ್ಟು ಹತ್ತಿರವಾದವು . ಮಾವ ತೀರಿಹೋದರು . ಅತ್ತೆ ಒಂದಷ್ಟು ಕುಗ್ಗಿಹೋದರು .. ಮಾವ ಸತ್ತ ಒಂದು ವರ್ಷಕ್ಕೆ ಮಗ ರಸ್ತೆ ಅಪಘಾತದಲ್ಲಿ ತೀರಿಹೋದ. ಸೋದರಸೊಸೆಯ ಕಂಡ ಒಡನೆ ಅವಳನ್ನ ತಬ್ಬಿ ಅತ್ತ ಸೋದರತ್ತೆ 'ನೀ ಮದುವೆ ಆಗಿದ್ದರೆ ನನ್ನ ಮಗ ಸಾಯ್ತಾ ಇರಲಿಲ್ಲ !!!ನಿನ್ನ ಮಾಂಗಲ್ಯ ಅವನನ್ನ ಉಳಿಸಿಕೊಳ್ತಾ ಇತ್ತು ' ಅಂತ ಅತ್ತಾಗ ಅದ್ಯಾಕೋ ದಿಗ್ಬ್ರಮೆ... ನೋವು .... ಅಲ್ಲೇ ಇದ್ದ ಮತ್ತೊಬ್ಬ ಸೋದರತ್ತೆ ಆ ಹುಡುಗಿಯ ತಬ್ಬಿ ಆಚೆ ಕರೆದುಕೊಂಡು 'ಸುಮ್ಮನೆ ಬೇಡದ್ದು ತಲೆ ಕೆಡಿಸಿಕೊಳ್ಳಬೇಡ ತಾಯಿ , ಅವಳು ನೋವಲ್ಲಿ ಇದ್ದಾಳೆ ಏನೋ ಮಾತಾಡ್ತಾಳೆ ..ನಿನ್ನ ಮದುವೆ ಆದಾಗ ಹೀಗೆ ಆಗಿದ್ದರೆ ನಿನ್ನ ಕಾಲುಗುಣ ಅಂತ ಇದ್ರು ... ನೀ ಚೆನ್ನಾಗಿದ್ದೀಯ, ಬಂದಿದ್ದೀಯ ,ಅದೇನು ನಿನ್ನ ಕೆಲಸ ಮುಗಿಸಿ ಹೋಗು' ಅಂದ್ರು ......
ಇಂದಿಗೂ ಅರಿವಿಲ್ಲ ನನಗೆ ಯಾವುದು ಸರಿ ಅಂತ .. ಆ ಅತ್ತೆ ಹೇಳಿದ್ದಾ!? ಇಲ್ಲ ಈ ಅತ್ತೆ ಹೇಳಿದ್ದು ಸರಿಯ ಅಂತ .. ಆದರು ಮಾವನ ಮಗ ಒಳ್ಳೆ ಗೆಳೆಯನಾಗಿದ್ದ ಅವನ ಕಳೆದುಕೊಂಡ ನೋವು ಇನ್ನು ಇದೆ ... ಈ ತಿಂಗಳಿಗೆ ಅವನನ್ನ ಕಳೆದುಕೊಂಡು ೮ ವರ್ಷ .... ಅದ್ಯಾಕೋ ನೆನಪಾದ .............

No comments:
Post a Comment