'ಅಮ್ಮ, ಅವ್ಳೇ ಫಸ್ಟ್ ಮಾತಾಡಿಸಿದ್ದು ನಾನಲ್ಲ , ನಾ ಹೇಳಲಿಲ್ವ ನಾ ಸೋಲೋದಿಲ್ಲ ಅಂತ' ಮಗಳು ನಗುತ್ತಾ ಹೇಳಿದಾಗ ಮನಸ್ಸು ಎತ್ತಲೋ ಹೋಯಿತು ... ಚಿಕ್ಕವಳಿದ್ದಾಗ 'ನಾ ತಪ್ಪೇ ಮಾಡಿಲ್ಲ , ನಾ ಯಾಕೆ ಸೋಲಲಿ , ನಾ ಯಾಕೆ ಫಸ್ಟ್ ಮಾತಾಡಲಿ .......' ಅನ್ನೋ ಹಠ ಈಗೆಲ್ಲ ಇಲ್ಲವೇ ಇಲ್ಲ!! ಪರಿಸ್ಥಿತಿಗೆ ಅನುಗುಣವಾಗಿ ಸೋಲೋದಕ್ಕೆ ಮನಸ್ಸು ಹೊಂದಿಕೊಂಡು ಬಿಟ್ಟಿದೆ....ಅಮ್ಮ, ತಮ್ಮ, ಅತ್ತೆ, ಗಂಡ, ಮಕ್ಕಳು, ಮೈದುನಂದಿರು , ಕೆಲವು ಗೆಳೆಯ ಗೆಳತಿಯರು ....'ನನ್ನ'ನ್ನ ಸೋಲಿಸಿದ ಪಟ್ಟಿಗೆ ಸೇರುತ್ತಾರೆ ....ಅವರು ದೊಡ್ಡವರು ಅಲ್ವ ಅವರ ಹತ್ರ ಏನ್ ನಿನ್ನ ಹಠ ಅಂತ ಒಮ್ಮೆ, ನೀ ದೊಡ್ಡವಳು ಅಲ್ವ ಸಣ್ಣವರ ಹತ್ರ ಏನು ನಿನ್ನ ಹಠ ಅಂತ ಮತ್ತೊಮ್ಮೆ, ನಿನ್ನವರೆ ಅಲ್ವ ಅವರ ಬಳಿ ಏನು ನಿನ್ನ ಹಠ ಅಂತ ಇನ್ನೊಮ್ಮೆ ... ಹೀಗೆ ಸೋಲುತ್ತಾ ಹೋಗುವ ಮನಸ್ಸು ಪ್ರೀತಿಯ ಗೆದ್ದ ಮೇಲೆ ಎಲ್ಲೋ ಒಂದು ಕಡೆ ನಾ ಸೋತಿಲ್ಲ ಅನ್ನೋ ಹಂತ ತಲುಪಿದೆ ! ಕೆಲವೊಮ್ಮೆ ಇಗೋಗೆ ಏಟಾಗಿದ್ದು ನಿಜವಾದರೂ ಅದು ನನ್ನ uprise ಗೆ ಕಾರಣವಾಗಿದ್ದು ಹೌದು !!!
ಗೆದ್ದ ಗೆಲುವೆಲ್ಲ ಗೆಲುವಲ್ಲ ........ ಸೋತ ಸೋಲೆಲ್ಲ ಸೋಲೂ ಅಲ್ಲ ಅನ್ನೋ ಅಮ್ಮನ ಮಾತು ಯಾವಾಗ್ಲೂ ಮನಸ್ಸಲ್ಲಿ ಎವರ್ಗ್ರೀನ್ .... ಆಗೆಲ್ಲ ಮನಸ್ಸು ಮತ್ತದೇ ನೀಲಿ ನೀಲಿ ಬಾನು ......ಹಾಗೆ ಸುಮ್ಸುಮ್ನೆ ಬರೆಯ ಬೇಕು ಅನಿಸಿತು ಪುಟ್ಟಿಯ ಮಾತಿಂದ ...... :)))))

No comments:
Post a Comment