ಸುಮಾರು ೨೫ ವರ್ಷಗಳ ಹಿಂದೆ ಮೈಸೂರಿನ ಸಯ್ಯಾಜಿ ರಾವ್ ರಸ್ತೆಯ 'ಹೋಟೆಲ್ ಪರಾಸ್ ' ಅಂದ್ರೆ ತುಂಬಾನೇ ಫೇಮಸ್ಸು . ಮಂಜು ನಾನು ಆಗ ಇನ್ನು ಓದ್ತಾ ಇದ್ವಿ.. ಆಗ ನಾವಿಬ್ಬರು ಒಳ್ಳೆ ಗೆಳೆಯರಾಗಿದ್ವಿ ಅಷ್ಟೇ .. ವಾರಕ್ಕೆ ಒಂದು ದಿನ ಕಾಲೇಜ್ ಮುಗಿದ ಮೇಲೆ ಅಲ್ಲಿ ಹೋಗಿ ಒಂದಷ್ಟು ಹೊತ್ತು ಕೂತು 'ಕಷ್ಟಸುಖ' ಮಾತಾಡಿ ಮತ್ತೆ ನಮ್ಮ ನಮ್ಮ ದಾರಿ ಹಿಡಿತಾ ಇದ್ವಿ , ಮತ್ತೆ ಒಂದು ವರ್ಷದ ನಂತರ ಪ್ರೇಮಿಗಳಾಗಿ ಹೋಗಿ ಕೂರ್ತಾ ಇದ್ವಿ .. (ಅದೇನ್ ಮಾತಾಡ್ತಾ ಇದ್ವೋ ಗೊತ್ತಿಲ್ಲ , ಅಂದು ಶುರು ಮಾಡಿದ ಮಾತು ಇಂದೂ ಮುಗಿದಿಲ್ಲ !!)... ಮತ್ತೆ ಯಾವಾಗ್ಲೋ ಒಮ್ಮೊಮ್ಮೆ ಹೋದದ್ದು ಬಿಟ್ರೆ ಅಲ್ಲಿಗೆ ಹೋಗೆ ಇರಲಿಲ್ಲ . ಮೈಸೂರು ಬೆಳಿತು... ಬೇಕಾದಷ್ಟು ಹೋಟೆಲ್ಗಳು ಬಂದ್ವು .. ಮಕ್ಕಳು ಕೂಡ 'ಅದೇನ್ ಅದೂ ಒಂದು ಹೋಟೆಲಾ' ಅಂತಾರೆ ಅಂತ ಅಲ್ಲಿಗೆ ಹೋಗೆ ಇರಲಿಲ್ಲ .. ನೆನ್ನೆ ಯಾಕೋ ಬಹಳ ವರ್ಷಗಳ ನಂತರ ಪಾರಸ್ ಗೆ ಹೋಗಬೇಕು ಅಂತ ಮಂಜು ಕರ್ಕೊಂಡ್ ಹೋದ್ರು .. ಕಾಲಕ್ಕೆ ತಕ್ಕಂತೆ ಸ್ವಲ್ಪ ಬದಲಾದ ಜಾಗ ...ಮಂಜು 'ಏನಮ್ಮ, ನಿನ್ fav ಮಸಾಲೆ ಪುರಿ ಹೇಳಲಾ' ಅಂದ್ರು .. ಸುಮ್ಮನೆ ನಕ್ಕು ಬಿಟ್ಟೆ. ಅಂದು ನಾವು ಹೋಗುತ್ತಿದ್ದಾಗ ಇದ್ದ ಒಬ್ಬ ಸರ್ವರ್ ಈಗಲೂ ಇದ್ದಾರೆ.. ವಿಶ್ವಾಸದಿಂದ ಮಾತಾಡಿಸಿದರು .. ಅವರ ಮಕ್ಕಳಿಗೆ ಮದುವೆ ಮಾಡಿದ್ದು ಹೇಳಿದ್ರು , ಮತ್ತೊಬ್ಬಳು M Comಮಾಡ್ತಾ ಇರೋದನ್ನ parttime ಕೆಲಸ ಮಾಡೋದನ್ನ ಹೇಳಿದ್ರು ..ನಮ್ಮ ಮಕ್ಕಳ ಬಗ್ಗೆ ಕೇಳಿದ್ರು ...ಮನಸ್ಸು ಒಂದ್ ತರ ನೀಲಿ ನೀಲಿ .. ಬರುವಾಗ ಮಂಜು ಹೇಳಿದ್ದು 'ಸರ್, ಮೊಮ್ಮಕ್ಕಳನ್ನ ಕರ್ಕೊಂಡ್ ಬನ್ನಿ ಸರ್ ಮನೆಗೆ ' ಅದಕ್ಕೆ ಅವರು ಕೊಟ್ಟ ಉತ್ತರ 'ಸರ್ ನೀವು ಮೊಮ್ಮಕಳನ್ನ ಕರ್ಕೊಂಡ್ ಬರಬೇಕು ಸರ್ ನಮ್ಮ ಹೋಟೆಲ್ಗೆ "....:)))))))))
Monday, 27 July 2015
Subscribe to:
Post Comments (Atom)
ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...
-
ಎಷ್ಟೊಂದು ವರ್ಷಋತುಗಳು ಕಳೆದುಹೋಯ್ತು ವರುಷಗಳ ಸಾಂಗತ್ಯದಲ್ಲಿ ಗೆಳೆಯ ..... ಒಮ್ಮೊಮ್ಮೆ ಬಿರುಮಳೆಯೊಂದು ಇಳೆಯ ತಣಿಸಿದಂತೆ ಒಮ್ಮೆ ತುಂತುರುಹನಿಯಾಗಿ ಭುವಿಗಿ...
-
ಈ ಮದುವೆ ಅನ್ನೋದು ಬಂಧುತ್ವಗಳ ಬೆಸೆಯೋ ಸಾಧನ , ಅದೇನು ಸಂಭ್ರಮ, ಸಡಗರ, ಕಲರವ, ನಗು, ಅಲ್ಲೆಲ್ಲೋ ಒಂದೆರಡು 'ಸಣ್ಣ ' ಮಾತುಗಳು, ಇನ್ನೆಲ್ಲೋ ಒಂದು ಜಗಳ, ಹೆಣ್ಣ...
-
ಮದ್ವೆಯಾದ ಹೊಸದರಲ್ಲಿ ನಾವೂ ತುಂಬಾನೇ ಕಿತ್ತಾಡ್ಕೋಳ್ತಾ ಇದ್ವಿ . ಮೊದ್ಲೇ ಪ್ರೀತಿಸಿ ಆದ ಮದುವೆ.. ಎರಡೂ ಮನೆಗಳ ನಡುವೆ ಅಗಾಧ ಅಂತರ ಎಲ್ಲದರಲ್ಲೂ . ಸಣ್ಣ ಸಣ್ಣ ವಿಷಯಗಳಿ...
No comments:
Post a Comment