ನಾವು ಈಗಿರೋ ಮನೆಗೆ ಬಂದು ಸುಮಾರು ಹತ್ತು ವರ್ಷ ಆಯ್ತು . ಇಲ್ಲಿಯವರೆಗೂ ನೀರಿಗೆ ಕೈ ಬೆರಳಿನಲ್ಲಿ ಎಣಿಸೋ ಅಷ್ಟ್ ಸಾರಿ ಮಾತ್ರ ತೊಂದರೆ ಆಗಿದೆ. ಹಾಗಾದಾಗ corporaterಗೆ ಒಂದ್ ಫೋನ್ ಮಾಡಿದ್ರೆ ಲಾರಿ ಅಲ್ಲಿ ಕಳಿಸಿಬಿಡ್ತಾರೆ . ಹಾಗಾಗಿ ನೀರಿಗೆ ಬರ ಅನ್ನೋದು ಇಲ್ಲ . ರೋಡ್ ಅಲ್ಲಿ drainage ಇಲ್ಲ . ಬೆಳಿಗ್ಗೆ ಎದ್ರೆ ಇಡೀ ರಸ್ತೆ ಬಾಗಿಲು ತೊಳೆದ ನೀರಿನಿಂದ ಮಿನಿ ಕಾವೇರಿಯಂತೆ ಹರಿಯುತ್ತದೆ . ಪೈಪ್ ಹಿಡಿದು ನಿಂತರೆ ಕಿಟಕಿ ಬಾಗಿಲು ಬಿಟ್ಟು ಗೋಡೆಯನ್ನೂ ತೊಳೆದು ಬಿಡ್ತಾರೆ ... ಬಂದ ಹೊಸದರಲ್ಲಿ ನನಗೂ ಬಹಳ ಬೇಸರ ಅಗ್ತಾ ಇತ್ತು ಇಷ್ಟೊಂದ್ ನೀರು ವೇಸ್ಟ್ ಅಲ್ವ ಅಂತ ಒಂದೆರಡು ಸಲ ನಮ್ಮ ಮನೆ ಮುಂದೆ ನೀರು ನಿಲ್ಲುತ್ತದೆ , ಎಲ್ಲರಿಗೂ ತೊಂದರೆ ಅಲ್ವ ಅಂತ ಹೇಳಿಯೂ ಇದ್ದೆ.. .ನನ್ನ ಒಂದ್ ತರ ವಿಚಿತ್ರವಾಗಿ ನೋಡಿದ್ರು 'ಆರು ಹೆತ್ತೋಳಿಗೆ ಮೂರು ಹೆತ್ತೋಳು ಹೇಳೋಕೆ ಬಂದ್ಲಾ !!? ಅನ್ನೋ ಹಾಗೆ. ಮಂಜು ನನ್ನನ್ನೇ ಬೈದ್ರು .. ನೀನೇನು ೨೪ ಘಂಟೆ ರಸ್ತೆ ಅಲ್ಲೇ ಇರೋ ಹಾಗೆ , ಸುಮ್ಮನೆ ಇದ್ದು ಬಿಡು ಅಂತ ... ಈಗ ಅಭ್ಯಾಸ ಆಗಿಬಿಟ್ಟಿದೆ .ಒಮ್ಮೊಮ್ಮೆ ಅನಿಸುತ್ತದೆ .. ಒಂದ್ ನಾಲ್ಕ್ ದಿನ ನೀರ್ ಬರಬಾರದು ಆಗ ನೀರಿನ "ಬೆಲೆ' ತಿಳಿಯುತ್ತದೆ ಅಂತ ... ಈ ತರದ ಜನರ ನಡುವೆಯೂ ಒಂದಷ್ಟು ಹಿರಿಯ ತಲೆಗಳಿರುವ ಮನೆಯವರು ಮೊದಲೇ ಕಸ ಗುಡಿಸಿ ಅಮೇಲೆ ಸ್ವಲ್ಪ ನೀರು ಬಾಗಿಲಿಗೆ ಹಾಕಿ ಒಂದ್ ರಂಗೋಲೆ ಹಾಕಿ ಬಿಡ್ತಾರೆ .... ಏನೇ ಹೇಳಿ ಹಿರಿ ತಲೆಗಳಿಗೆ ಇರೋ ಅಷ್ಟು ಯಾವುದೇ ವಸ್ತುವಿನ ಬೆಲೆ ಬಹಳಷ್ಟು namma ಇಂದಿನ ಜನರೇಶನ್ ಜನಕ್ಕೆ ಇರೋದಿಲ್ಲ ... ವಿಪರ್ಯಾಸ ಅಂದ್ರೆ ಅವರ ಕಾಲದಲ್ಲಿ ಅವರೆಲ್ಲ ಯಾವುದಕ್ಕೂ ಕಡಿಮೆ (ಬರ) ಇಲ್ಲದೆ ಬದುಕಿದವರು .. ಆದರೂ ಈಗಲೂ ಕೂಡ ಹಿತಮಿತವಾಗೆ ಬದುಕುತ್ತಾರೆ ...... ಬದುಕುವುದು ಹೀಗೆ ಅಂತ ತಿಳಿಸುತ್ತಾರೆ ........
Monday, 27 July 2015
Subscribe to:
Post Comments (Atom)
ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...
-
ಎಷ್ಟೊಂದು ವರ್ಷಋತುಗಳು ಕಳೆದುಹೋಯ್ತು ವರುಷಗಳ ಸಾಂಗತ್ಯದಲ್ಲಿ ಗೆಳೆಯ ..... ಒಮ್ಮೊಮ್ಮೆ ಬಿರುಮಳೆಯೊಂದು ಇಳೆಯ ತಣಿಸಿದಂತೆ ಒಮ್ಮೆ ತುಂತುರುಹನಿಯಾಗಿ ಭುವಿಗಿ...
-
ಈ ಮದುವೆ ಅನ್ನೋದು ಬಂಧುತ್ವಗಳ ಬೆಸೆಯೋ ಸಾಧನ , ಅದೇನು ಸಂಭ್ರಮ, ಸಡಗರ, ಕಲರವ, ನಗು, ಅಲ್ಲೆಲ್ಲೋ ಒಂದೆರಡು 'ಸಣ್ಣ ' ಮಾತುಗಳು, ಇನ್ನೆಲ್ಲೋ ಒಂದು ಜಗಳ, ಹೆಣ್ಣ...
-
ಮದ್ವೆಯಾದ ಹೊಸದರಲ್ಲಿ ನಾವೂ ತುಂಬಾನೇ ಕಿತ್ತಾಡ್ಕೋಳ್ತಾ ಇದ್ವಿ . ಮೊದ್ಲೇ ಪ್ರೀತಿಸಿ ಆದ ಮದುವೆ.. ಎರಡೂ ಮನೆಗಳ ನಡುವೆ ಅಗಾಧ ಅಂತರ ಎಲ್ಲದರಲ್ಲೂ . ಸಣ್ಣ ಸಣ್ಣ ವಿಷಯಗಳಿ...
No comments:
Post a Comment