Wednesday, 26 November 2014

ಅದೊಂದು ಊರು...ಎಲ್ಲ ಊರಿನಂತೆ ಅಲ್ಲೂ ಮನೆ, ಮನುಷ್ಯರು, ಹಳ್ಳ ಕೆರೆ, ಭಾವಿ ನಾಯಿ, ಬೆಕ್ಕು ಹಸುಕರು ಎಲ್ಲಾ ಇತ್ತು....
ಊರಲ್ಲಿ ನಾಯಿಗಳ ಗುಂಪು...ನಾಯಿಗಳು ಅಂದ್ರೆ ಗೊತ್ತೇ ಇದೆಯಲ್ಲ..ಬೊಗಳೋದೇ ಕೆಲಸ...ಯಾರನ್ನ ಕಂಡ್ರು ಬೊಗಳೋದು ..ಪೋಲಿಸ್ ಅಂತ ಇಲ್ಲ, ಅಂಚೆಯವನು ಅಂತ ಇಲ್ಲ...ಹುಡುಗರು ಅಂತ ಇಲ್ಲ..ಮುದುಕರು ಅಂತ ಇಲ್ಲ ಬೊಗಳೋದೇ .....ಅಲ್ಲೊಂದು ನಾಯಿ ..ನಾಯಕನ ಗತ್ತಿನ ನಾಯಿ....ಬೇರೆ ನಾಯಿಗಳು ಬೋಗಳಿದಾಗೆಲ್ಲಾ ಬಂದು.."ಏನು ನಿಮಗೆ ಬೇರೆ ಕೆಲಸವೇ ಇಲ್ವಾ ...ಯಾವಾಗ್ಲೂ ಬೊಗಳೋದೇ ಕೆಲ್ಸನ...ಬೇರೆಯವರು ಬೈಯೋವರೆಗೂ ಬೊಗಳೋದೇನಾ...ಸುಮ್ನೆ ಇರಿ...ಎಲ್ಲರ ಕೈಲಿ ಬೈಸಿಕೊಳ್ಳೋದು ಯಾಕೆ" ಅಂತ ಹೇಳ್ತಾ ಇತ್ತು......ಬೇರೆ ನಾಯಿಗಳು ಅದನ್ನ ವಿಚಿತ್ರವಾಗಿ ನೋಡಿ ಸುಮ್ಮನೆ ಆಗ್ತಾ ಇದ್ವು....ಮತ್ತೆ ಅದೇ ಕಥೆ........ನಾಯಿಗಳು ಬೊಗಳೋದು....ಇದು ಬುದ್ದಿ ಹೇಳೋದು....ಇದೊಂತರ ರೂಟೀನ್ ಆಗಿ ಹೋಗಿತ್ತು......ಸರಿ ಒಂದು ದಿನ ಈ ನಾಯಕನ ಗತ್ತಿನ ನಾಯಿಯ ಹುಟ್ಟು ಹಬ್ಬ ಬಂತು.......ಬೇರೆ ನಾಯಿಗಳೆಲ್ಲ ಸೇರಿ ಈ ನಾಯಿಗೆ ಒಂದು ಉಡುಗೊರೆ ನೀಡಬೇಕು ಅಂತ ಅನ್ಕೊಂಡವು ...ಸರಿ ಗಿಫ್ಟ್ ಏನಪ್ಪಾ ಕೊಡೋದು ಅಂತ ಯೋಚಿಸುವಾಗ ಒಂದು ನಾಯಿ ಹೇಳ್ತು..."ಗೆಳೆಯರೇ,..'ಅವನು' ಯಾವಾಗ್ಲೂ ನಾವು ಗತ್ತಿನಿಂದ ಇರಬೇಕು...ಸುಮ್ಸುಮ್ನೆ ಬೊಗಳ ಬಾರದು ಅಂತೆಲ್ಲ ಹೇಳ್ತಿದ್ದ ಅಲ್ವ..ಅದಕ್ಕೆ ಇವತ್ತು ರಾತ್ರಿ ನಾವು ಬೊಗಳೋದೇ ಬೇಡ...ಅವನಿಗೆ ಖುಷಿ ಆಗುತ್ತೆ..ಇದೆ ನಾವು ಅವನಿಗೆ ಕೊಡೊ ಉಡುಗೊರೆ "ಅಂತು...ಸರಿ ಎಲ್ಲ ನಾಯಿಗಳು ಒಮ್ಮತದಿಂದ ಒಪ್ಪಿಕೊಂಡವು...ಎಂದಿನಂತೆ ಅಂದೂ ರಾತ್ರಿ ಆಯಿತು...ಎಲ್ಲ ನಾಯಿಗಳು ಅಂದುಕೊಂಡಿದ್ದಂತೆ ಸಂದು ಗೊಂದು ಸೇರಿಕೊಂಡವು...ಯಾರು ಬೊಗಳಲೇ ಬಾರದು ಅಂತ ಕುಳಿತವು....ಸರಿ ಆ ಗತ್ತಿನ ನಾಯಕ ನಾಯಿ ಎಂದಿನಂತೆ ತಿರುಗಾಡುತ್ತ ಬಂತು..ಎಲ್ಲಿ ಒಂದು ನಾಯಿಯ ಸದ್ದೇ ಇಲ್ಲ....ಬೊಗಳಾಟ ಇಲ್ಲ...ಇದಕ್ಕೆ ಯಾಕೋ ಬೇಸತ್ತು ಹೋಯ್ತು......"ಅಲ್ಲ ಯಾರಾದ್ರೂ ಬೊಗಳಿದರೆ ತಾನೇ ನನಗೆ ಕೆಲಸ...........ಯಾರು ಏನು ಮಾಡದೆ ಕುಳಿತರೆ ನನ್ನ ನಾಯಕನ ಗತ್ತ ತೋರಿಸೋದು ಯಾರ ಮೇಲೆ..ನನ್ನ ಬುದ್ದಿವಂತಿಗೆ ತೋರಿಸೋದು ಯಾರ ಬಳಿ ???".......ಸರಿ ಯಾರು ಕಾಣದ ಒಂದು ಮೂಲೆಗೆ ಹೋಗಿ ಒಂದೆರಡು ಸಾರಿ ಬೊಗಳಿತು..........ಮುಂದೆ ಗೊತ್ತೇ ಇದೆಯಲ್ಲ........ಎಲ್ಲ ನಾಯಿಗಳು ಶುರು ಹಚ್ಚಿಕೊಂಡವು .....ಈ ನಾಯಕ ನಾಯಿ ಹೊರ ಬಂದು ತನ್ನ ಪ್ರವಚನ ಶುರು ಮಾಡಿತು..............."ಏನು ನಿಮಗೆ ಬೇರೆ ಕೆಲಸವೇ ಇಲ್ವಾ ..........ಇತ್ಯಾದಿ ಇತ್ಯಾದಿ....."...........ಹಾಗೆ ಅಲ್ವೇ ನಮ್ಮ so called ನಾಯಕರು ಮಾಡೋದು....ಎಲ್ಲ ಚೆಂದ ಇದ್ರೆ ಸಹಿಸಲಾರರು.........ಯಾಕೆ ಅಂದ್ರೆ ಎಲ್ಲ ಚೆಂದ ಇದ್ರೆ ಅವರಿಗೆ ಕೆಲಸ ಇರೋದಿಲ್ವಲ್ಲ ಅದಕ್ಕೆ.......
ಇದು ಖಲೀಲ್ ಗಿಬ್ರಾನ್ ಅವರ ಕಥೆ..........ಹಾಗೆ ಓದಿದ ಮೇಲೆ ಹಂಚಿಕೊಳ್ಳ ಬೇಕು ಅನಿಸಿತು....

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...