Monday, 17 November 2014

ಒಂದಷ್ಟು ವಾಸ್ತವಗಳು ..........!!!

ಹೆರಿಗೆ ಮಾಡಿದ ವೈದ್ಯ:"ಗಂಡು ಮಗು!!!"
ಹುಡುಗಿಯ ತಾಯಿ:"......." ಕಣ್ಣ ತುಂಬಾ ತುಂಬಿದ ನೀರು.
ವೈದ್ಯ: "ಗಂಡು ಮಗು ಅಂದಾಗ ಅತ್ತಿದ್ದು ನೀವೆ ಮೊದಲಿರಬೇಕು "... 
ಹುಡುಗಿಯ ತಾಯಿ : 'ಅವರ ಅಪ್ಪನ ಹಾಗೆ ಆಗದೆ ಇರಲಿ ಅಂತ ಡಾಕ್ಕ್ತ್ರೆ "
ಆ ಪುಟ್ಟ ಅವಿವಾಹಿತ ಹೆಣ್ಣು ,ಆಗಷ್ಟೇ ಹುಟ್ಟಿದ ಗಂಡು ಮಗುವಿನ ತಾಯಿ ಇನ್ನು ಕಣ್ಣು ಬಿಡದೆ ಮಲಗಿತ್ತು !!


ಬೆಳಗು ಬೈಗಿನ ಅನ್ನಕ್ಕೆ
ಆ ಹೋಟಲಲ್ಲಿ ದುಡಿವ ಅವನು ಚೆಂದದ ಹುಡುಗ
ನನ್ನ ಮಗಳ ವಯಸ್ಸೇ ಏನೋ ... 
ಒಂದಷ್ಟು ನೀರೆರೆದು ಹೊಸ ಬಟ್ಟೆ ಹಾಕಿದರೆ ನನ್ನ ಮಕ್ಕಳಿಗಿಂತ ಚೆಂದವೇನೋ ...
ಒಂದಷ್ಟು ಓದು ನೀಡಿದರೆ ನನ್ನ ಮಕ್ಕಳಿಗಿಂತ ಎತ್ತರಕ್ಕೇರುವನೇನೊ ....
'ಶಾಲೆಗೆ ಹೋಗುವೆಯೇನೋ ಪುಟ್ಟ'ಅಂದೆ
'ಈಗ ಹೋಗಿಬಂದೆ ಅವ್ವ, ಟೀ ಕೊಟ್ಟು ಬಂದೆ' ಅಂದ .... !!!!!!!



'ಅಪ್ಪ, ಅಮ್ಮನ ಮುಚ್ಚಿದ್ದ ಕಣ್ಣಲಿ ಏನೋ ನೋಡ್ತಾ ಇದ್ದೆ ಅಲ್ವಾ '
'ಹೂಂ '
'ಅವಳು ಸತ್ತ ಅಷ್ಟು ಹೊತ್ತಿನ ಮೇಲೆ ಅವಳ ಮುಚ್ಚಿದ ಕಣ್ಣಲ್ಲಿ ಏನ್ ಕಾಣ್ತಿತ್ತು ಅಪ್ಪ ???'
'ಸಮಯ ಕಾಣ್ತಾ ಇತ್ತು ಮಗ, ಅವಳು ಯಾವಾಗ್ಲೂ ಕೇಳ್ತಾ ಇದ್ದ 'ನನ್ನ ಸಮಯ' ಕಾಣ್ತಾ ಇತ್ತು ಮಗ'...... !!!!


'ನಾ ಅಮ್ಮ ಆಗ್ತಾ ಇದ್ದೀನಿ ' ಅಂದ್ಲು
ಅವನ ಕಣ್ಣಲ್ಲಿ ಖುಷಿ ....
ಅವನಿಂದ ಉಡುಗೊರೆ ಸಿಗುತ್ತದೆ ಎಂದು ತಿಳಿದಿತ್ತು ....
ಅವನ ಬಳಿ ಬರುತ್ತಿದ್ದ ಸಿಗರೇಟಿನ ವಾಸನೆ ನಿಂತು ಹೋಗಿತ್ತು ....
ಇಷ್ಟು ದೊಡ್ಡ ಉಡುಗೊರೆ ನಿರೀಕ್ಷಿಸದ ಅವಳಿಗೆ ಅವನ ಬಗ್ಗೆ ಹೆಮ್ಮೆ ಗೌರವ ..!!!!

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...