Sunday, 9 November 2014

ಆಗೋದೆಲ್ಲ ಒಳಿತಿಗೆ ತಾನೇ !!!!!!
ಒಂದು ಊರು....ಅದೊಂದು ದೇವಸ್ಥಾನ ...ಅಲ್ಲಿನ ದೇವರ ಮೇಲೆ ಜನರಿಗೆ ಬಹಳ ಭಕ್ತಿ...
ಆ ದೇವಸ್ಥಾನದಲ್ಲಿ ಒಬ್ಬ ಕಸಗುಡಿಸುವವ ಇದ್ದ....ದಿನಾಲು ದೇಗುಲ ಸ್ವಚ್ಛ ಮಾಡಿ ದೇವಸ್ಥಾನದಲ್ಲೇ ಕಾಲ ಕಳಿತಾ ಇದ್ದ...
ಒಮ್ಮೆ ಅವನಿಗೆ ಒಂದು ಯೋಚನೆ ಬಂತು....'ಅಲ್ಲ,.. ಈ ದೇವರು ದಿನ ಪೂರ್ತ ಇಷ್ಟು ವರ್ಷಗಳಿಂದ ನಿಂತಿದ್ದಾನಲ್ಲ,,,ಅವನಿಗೆ ಬೇಸರ ಆಗೋದಿಲ್ವ...ಕಾಲು ನೋವು ಬರೋದಿಲ್ವ" ಎನಿಸಿತು..
ಸರಿ ದೇವರನ್ನೇ ಕೇಳಿದ..."ಸ್ವಾಮಿ ನಿನಗೆ ಕಾಲು ನೋಯೋದಿಲ್ವ...ಬೇಜರಾಗೋಲ್ವ.."
ದೇವರು "ಇದು ಸೃಷ್ಟಿಯ ನಿಯಮ...ಇದು ನನಗೆ ಸಂತಸದ ಕೆಲಸ" ಅಂದ...
ಇವನು ಹೇಳಿದ.."ಒಂದ್ ಕೆಲಸ ಮಾಡೋಣ...ಒಂದು ದಿನ ನಾನು ನಿನ್ನ ಜಾಗದಲ್ಲಿ ನಿಂತ್ಕೊಳ್ತಿನಿ...ನೀನು ಸ್ವಲ್ಪ rest ತಗೊಂಡು ತಿರುಗಾಡ್ಕೊಂಡು ಬಾ "ಅಂದ...ಮೊದಲು ದೇವರು ಒಪ್ಪಲಿಲ್ಲ...
ಆಮೇಲೆ ."ನೀನು ಯಾವುದೇ ಕಾರಣಕ್ಕೂ ,..ಏನೇ ಆದರು ಮಾತಾಡೋದಿಲ್ಲ ಅಂತ ಮಾತು ಕೊಡಬೇಕು....ಆಗ ನಾನು ಒಪ್ಪುತ್ತೇನೆ..."ಅಂದ..
ಸರಿ ಈ ಕಸಗುಡಿಸುವವ ಒಪ್ಪಿದ...
ಬೆಳಗಾಗುವ ಮುನ್ನ ದೇವರ ಸ್ಥಾನದಲ್ಲಿ ಇವ ನಿಂತ...ದೇವರು ಖುಷಿಂದ ಹೊರ ಸುತ್ತಲು ಹೋದ...
ಭಕ್ತರು ಬರತೊಡಗಿದರು.....ಕೋರಿಕೆಗಳ ಇಟ್ಟು ಹೋಗತೊಡಗಿದರು...ಸಂಜೆವರೆಗೂ ಹಾಗೆ ನಿಂತಿದ್ದ ಇವನು...ಕೆಲಸ ಇಷ್ಟು ಸುಲಭ ಅನ್ಕೊಂಡಿರಲಿಲ್ಲ ಅವನು....
ಸಂಜೆ ಆಗ್ತಾ ಬಂತು...ಒಬ್ಬ ಶ್ರೀಮಂತ ಒಳಗೆ ಬಂದ...ದೇವರ ಮುಂದೆ ಬೇಡಿಕೆಗಳ ಬೆಟ್ಟವನ್ನೇ ಇಳಿಸಿದ...ತನ್ನ purse ತೆಗೆದು ಹುಂಡಿಗೆ ಹಣ ಹಾಕಿದ....ಹೊರ ಹೊರಟ...ಹೊರಡೋ ಭರದಲ್ಲಿ purse ಕೆಳಗೆ ಬಿತ್ತು..ಗಮನಿಸದ ಅವ ಹಾಗೆ ಹೊರಗೆ ಹೋದ...ದೇವರ ಸ್ಥಾನದಲ್ಲಿ ಇದ್ದ ಇವನು ಅವನ "purse ಎತ್ತಿಕೋ "ಅಂತ ನಾಲಿಗೆ ತುದಿಯವರೆಗೆ ಬಂದ ಮಾತನ್ನ ದೇವರ ಎಚ್ಚರಿಕೆ ನೆನಪಿಸಿಕೊಂಡು ಹೊರಹಾಕದೆ ಉಳಿದ...ಈಗ ಒಬ್ಬ ಬಡ ಮರ ಕಡಿಯುವವ ಬಂದ...ಜೇಬಲ್ಲಿ ಉಳಿದ ಒಂದು ಸಣ್ಣ ನಾಣ್ಯವ ಹುಂಡಿಗೆ ಹಾಕಿದ...ಅದನ್ನ ದೇವರು ಕೊಟ್ಟಿದ್ದಕ್ಕೆ ನಮಿಸಿದ...ಮಕ್ಕಳ ಆಸೆ ತೀರಿಸೋ ಶಕ್ತಿ ಕೊಡು ಅಂತ ಬೇಡಿದ...ಹೊರ ಹೊರಟ ಅವನಿಗೆ ಆ purse ಸಿಕ್ಕಿತು..ಎತ್ತಿಕೊಂಡು ಹೊರ ಹೋದ....ಈಗಲೂ ದೇವರ ಸ್ಥಾನದಲ್ಲಿ ಇದ್ದ ಕಸಗುಡಿಸುವವ 'ಅದು ಆ ಶ್ರೀಮಂತನ ಹಣ' ಎಂದು ಹೇಳಲು ಬಾಯಿ ತೆರೆದ...ದೇವರಿಗೆ ಕೊಟ್ಟ ಭಾಷೆ ನೆನಪಾಗಿ ಸುಮ್ಮನಾದ....ದೇಗುಲ ಮುಚ್ಚುವ ವೇಳೆಯಾಗುತ್ತಿತ್ತು ಈಗ ಒಬ್ಬ ನಾವಿಕ ಬಂದ....ಅವನು ಅಂದು ರಾತ್ರಿ ದೂರ ಪಯಣ ಹೊರಟಿದ್ದ...ದೇವರ ಬಳಿ ತನ್ನ ಪಯಣ ಹಿತವಾಗಿರಲಿ ಎಂದು ಕೇಳಿಕೊಂಡು ಹೊರಟ....ಇನ್ನೇನು ಹೊರ ಹೋಗಬೇಕೆನ್ನುವಾಗ ಆ ಶ್ರೀಮಂತ ಪೋಲಿಸರೊಡನೆ ಒಳ ಬಂದ...ಯಾರು ಕಾಣದೆ ನಾವಿಕನೆ ತನ್ನ purse ಕದ್ದಿರಬೇಕು ಅಂತ ಪೊಲೀಸರಿಗೆ ಹೇಳಿದ...ಪೊಲೀಸರು ನಾವಿಕನನ್ನ ಹಿಡಿದು ಹೊರಟರು...ಇನ್ನು ಈ ಕಸಗುಡಿಸುವವನಿಗೆ ತಡೆಯಲು ಆಗಲೇ ಇಲ್ಲ..."ಇವನು ಅದ ಕದ್ದಿಲ್ಲ ..ಕದ್ದವ ಆ ಮರಕಡಿಯುವವ"ಎಂದ....ದೇವರ ಮಾತಲ್ಲವೇ...ಆ ಮರ ಕಡಿಯುವವನನ್ನ ಹಿಡಿದು ತಂದರು ಅವನ ಬಳಿ purse ಸಿಕ್ಕಿತು ಅವನನ್ನ arrest ಮಾಡಿದ್ರು ....
ಆಯ್ತು...ಆ ದಿನ ಮುಗಿತು....ಊರೆಲ್ಲ ಸುತ್ತಿ ಖುಷಿಯಿಂದ ದೇವರು ಬಂದ, ಇವನಿಗೆ thanks ಹೇಳಿದ 'ವಿಶೇಷ ಏನು ಇಲ್ಲ ತಾನೇ ಎಲ್ಲ ಸರಿ ಇತ್ತು ತಾನೇ' ಅಂದ...ಇವನು ಹೇಳಿದ.."ಚೆನ್ನಾಗಿತ್ತು...ನಾನು ಮಾತೇ ಆಡಲಿಲ್ಲ , ಒಂದು ಸಾರಿ ಮಾತ್ರ ಆದ ಅನ್ಯಾಯ ನೋಡಲಾರದೆ ಮಾತಾಡಿದೆ" ಅಂದ...
ದೇವರು ತನ್ನ ದಿವ್ಯದೃಷ್ಟಿಯಿಂದ ನೋಡಿದ...ಆದ ವಿಷಯ ಅರಿತ...ಇವನು ಕೇಳಿದ.."ನಾನು ಮಾಡಿದ್ದು ಸರಿ ತಾನೇ?"
ದೇವರು ಹೇಳಿದ..."ಅಯ್ಯೋ ಮೂರ್ಖ!!.ತಪ್ಪು ಮಾಡಿದೆ...ಆ ಶ್ರೀಮಂತ ದೊಡ್ಡ ಮೋಸಗಾರ ಬಂದ ಹಣವೆಲ್ಲ ಮೋಸದ್ದು..ಅವನು ಅದ ಕಳೆದುಕೊಳ್ಳಬೇಕೆಂದು ಅವನ ವಿಧಿ ಬರಹ ಆಗಿತ್ತು...ಆ ಮರಕಡಿಯುವವ ತುಂಬಾನೇ ಒಳ್ಳೆಯವ...ಅವನಿಗೆ ಉಪಕಾರ ಆಗಲಿ ಎಂದೇ ಆ purse ಅವನಿಗೆ ಸಿಗೋ ಹಾಗೆ ಬರೆದಿತ್ತು...ಇನ್ನು ಆ ನಾವಿಕ...ಅವನು ಹೋಗೋ ಹಡಗು ಇವತ್ತು ರಾತ್ರಿ ಮುಳುಗಿ ಹೋಗುತ್ತದೆ...ಅದರಿಂದ ಅವನು ತಪ್ಪಿಸಿಕೊಳ್ಳಲಿ ಅಂತನೇ ಅವ arrestಆಗಿದ್ದು..ನಿನ್ನ ಒಂದು ಮಾತು ಎಲ್ಲವ ಹಾಳು ಮಾಡಿತು ನೋಡಿದ್ಯ "ಅಂದ...."ಎಲ್ಲದಕ್ಕೂ ಕಾರಣ ಇರುತ್ತೆ...ಆಗೋದೆಲ್ಲ ಒಳ್ಳೇದಕ್ಕೆ ಅಂತ ಅರಿತರೆ ಸಾಕು " ಅಂದ ....!!!!!
ಹೌದಲ್ಲವೇ......ಏನೇ ಅದ್ರೂ ಒಂದು ಕಾರಣ ...ಒಂದು ಒಳಿತು ಇದೆ ಅಂತ ತಾಳ್ಮೆಯಿಂದ ಇದ್ರೆ ಸಾಕಲ್ಲವೇ...:)))))


No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...