Sunday, 30 November 2014

'I love colors......
ಬಣ್ಣ ಎಂದರೆ ನನಗಿಷ್ಟವೆ ಗೆಳೆಯ..........
ಆದರೆ ಬದಲಾಗುವ ಬಣ್ಣ ಭಯ ತರುವುದು'......
ಬದಲಾಗುವ ಬಣ್ಣ ಆಗಸದ್ದಾದರೆ ಚೆಂದವೇ, ಹೂವಿನದಾದರೆ ಇನ್ನು ಚೆಂದವೇ,....ಆದರೆ ಮನುಷ್ಯರದ್ದಾದರೆ ಭಯವೇ,................ಅಲ್ವೇ...!!?

ಹೀಗೊಂದು ಸ್ವಗತ...:)))
"ನಾ ಹೋಗಿ ಬರಲೇ..." ...ನಿನ್ನ ಮಾತು ಕೇಳಿ ಕಣ್ತುಂಬಿ ಬಂತೇ???....ಅರಿವಾಗಲಿಲ್ಲ....ಮನದ ಮೂಲೆಯಲ್ಲೆಲ್ಲೋ ಹೇಳಲು ಆಗದ ತಳಮಳ...ಇನ್ನು ಸ್ವಲ್ಪ ಹೊತ್ತು ಇರು ಎನ್ನಲೇ....ಉಹೂ ಬೇಡ... ಹಾಗೆ ಹೇಳಿ ನಿನ್ನ ತಡೆಯಲಾರೆ ಗೆಳೆಯ ...ನಿಜ ಗೆಳೆಯ ....ನೂರಾರು ಮಂದಿ ನಿನಗಾಗಿ ಕಾಯುವಾಗ ನೀನು ನನ್ನ ಅರಸಿ ಹಂಬಲಿಸಿದ್ದು ನನಗೆ ಖುಷಿಯೇ ..ಆದರೆ ಅದನ್ನ ನಾನು advantage ಆಗಿ ತೆಗೆದುಕೊಳ್ಳಲಾರೆ ..... ನನ್ನಿಂದ ನಿನಗೆ ...ನಿನ್ನಿಂದ ನನಗೆ ಈ ನಿರ್ಮಲ ಪ್ರೀತಿ ಸ್ನೇಹದ ಹೊರತು ಇನ್ಯಾವ ಬಯಕೆಗಳು ಇಲ್ಲ...ಸ್ವಾರ್ಥಗಳು ಇಲ್ಲ....ಅದು ಬರಬಾರದು ಕೂಡ..ಗೆಳೆತನ ಬದುಕಿಗೆ ಬೆಳಕಾಗಬೇಕೇ ಹೊರತು ಹೊರೆ ಅಲ್ಲ ಅಲ್ವೇ....ನಿನಗೆ ನೆನಪಿದೆಯ ಸುಮಾರು ಒಂದು ಘಂಟೆಯ ನನ್ನ ನಿನ್ನ ಬೇಟಿಯಲ್ಲಿ ಬಂದು ಹೋಗದ topiceಇಲ್ಲ ಅಲ್ವ...ನಕ್ಕೆವು,..ಕಣ್ಣ ಹನಿ ತುಂಬಿಕೊಂಡೆವು.,..ತರ್ಲೆ ಮಾಡಿದೆವು., ಸಿಟ್ಟು ಕೂಡ ಮಾಡಿಕೊಂಡೆವು...ನನ್ನ ಅಡುಗೆ ಮನೆಯ ಸ್ಲಾಬ್ ಮೇಲೆ ಕುಳಿತು ಟೀ ಕುಡಿದೆವು....ಎಷ್ಟು ಸುಂದರ ಬಂಧ ಅಲ್ವೇ....ಆದರು ಗೆಳೆಯ......"ನಾ ಹೋಗಿ ಬರಲೇ" ಎಂದು ನೀ ಅಂದ ಒಡನೆ ತಳಮಳ ಏಕೆ...????ನೀ ಹೊರಟ ಮೇಲೆ ಖಾಲಿತನ ಏಕೆ....ಮತ್ತೆ ನೀ ಬರಬಾರದೇ ಎಂಬ ಹಂಬಲ ಏಕೆ.....???ಗೊತ್ತಿಲ್ಲ ಗೆಳೆಯ.... ಪ್ರೀತಿ ಗೊತ್ತು...ಸ್ನೇಹ ಗೊತ್ತು...ಮಕ್ಕಳ ಮಮತೆ ಗೊತ್ತು .....ಬಂಧುಗಳ ಬಂಧುತ್ವ ಗೊತ್ತು....ಆದರೆ ಅದೆಲ್ಲವ ಮೀರಿದ ಈ ಅನುಬಂಧ simply superb......ಅಂತಹ ಗೆಳೆತನಕ್ಕೆ...ಗೆಳೆಯನಿಗೆ....ಕೋಟಿ ನಮನ....:))))
ಒಂದು ತಪ್ಪು ಹೆಜ್ಜೆಗೂ
ಒಂದು ಸರಿ ಹೆಜ್ಜೆಗೂ
ನಡುವಿನ
ಅಂತರ
ಒಂದೇ ಹೆಜ್ಜೆಯಾದರೂ
ಒಂದು ತಪ್ಪು ಹೆಜ್ಜೆಯಿಂದ
ಒಂದು ಸರಿ ಹೆಜ್ಜೆಯೆಡೆಗಿನ
ಅಂತರ
ಅಜಗಜಾಂತರವೆನ್ನುವುದು
ವಿಪರ್ಯಾಸ ........... 

Saturday, 29 November 2014



ಅಂದು ಸಂಜೆ ಆ ಪಾರಿಜಾತತ ಬುಡದಲ್ಲಿ ಕುಳಿತು ಮತ್ತೆ ಅವನನ್ನ ಕೇಳಿದಳು 
'ಪ್ರೀತಿ ಅಂದ್ರೆ ಏನು'
ಎಂದಿನಂತೆ ಅದೇ ನಿಷ್ಕಲ್ಮಶ ನಗುವಿನೊಡನೆ  
'ಆ ಸಾಗರ ದಿನವೂ  ತಟವ ಚುಂಬಿಸಿ ಹೋದರೂ ತನ್ನ ನೀಲಿ ಬಿಡದಂತೆ , ಆ ಮರಳು ದಿನವೂ ಅವನ ಬಳಿ  ಚುಂಬಿಸಿಕೊಂಡರೂ ಅವನಿಗಾಗಿ ದಿನವೂ ಕಾಯ್ವಂತೆ  ... ಅದೇ ಪ್ರೀತಿ' ಅಂದ .....
ಸುಲಿದ ತಣ್ಣನೆ ಗಾಳಿಗೆ ಪಾರಿಜಾತ ಒಂದಷ್ಟು ಹೂಗಳ ಉದುರಿಸಿದಳು ...... 


Friday, 28 November 2014

'ಚತುರ ಮಾತುಗಳಿಂದ
ತಾನೆಲ್ಲರ ಗೆದ್ದೆ' ಎಂದೇ ಭಾವಿಸಿ
ಬೀಗುತ್ತಾ ಸಾಗಿದ ಒಬ್ಬ ಜಾಣ  ...........
ಪಾಪ
ಎಲ್ಲರ ಮನದ ಒಳಗೆ ಸೋಲುತ್ತಾ
ಬಿದ್ದು ಹೋಗಿದ್ದ .............!!!!

Wednesday, 26 November 2014

ಅದೊಂದು ಊರು...ಎಲ್ಲ ಊರಿನಂತೆ ಅಲ್ಲೂ ಮನೆ, ಮನುಷ್ಯರು, ಹಳ್ಳ ಕೆರೆ, ಭಾವಿ ನಾಯಿ, ಬೆಕ್ಕು ಹಸುಕರು ಎಲ್ಲಾ ಇತ್ತು....
ಊರಲ್ಲಿ ನಾಯಿಗಳ ಗುಂಪು...ನಾಯಿಗಳು ಅಂದ್ರೆ ಗೊತ್ತೇ ಇದೆಯಲ್ಲ..ಬೊಗಳೋದೇ ಕೆಲಸ...ಯಾರನ್ನ ಕಂಡ್ರು ಬೊಗಳೋದು ..ಪೋಲಿಸ್ ಅಂತ ಇಲ್ಲ, ಅಂಚೆಯವನು ಅಂತ ಇಲ್ಲ...ಹುಡುಗರು ಅಂತ ಇಲ್ಲ..ಮುದುಕರು ಅಂತ ಇಲ್ಲ ಬೊಗಳೋದೇ .....ಅಲ್ಲೊಂದು ನಾಯಿ ..ನಾಯಕನ ಗತ್ತಿನ ನಾಯಿ....ಬೇರೆ ನಾಯಿಗಳು ಬೋಗಳಿದಾಗೆಲ್ಲಾ ಬಂದು.."ಏನು ನಿಮಗೆ ಬೇರೆ ಕೆಲಸವೇ ಇಲ್ವಾ ...ಯಾವಾಗ್ಲೂ ಬೊಗಳೋದೇ ಕೆಲ್ಸನ...ಬೇರೆಯವರು ಬೈಯೋವರೆಗೂ ಬೊಗಳೋದೇನಾ...ಸುಮ್ನೆ ಇರಿ...ಎಲ್ಲರ ಕೈಲಿ ಬೈಸಿಕೊಳ್ಳೋದು ಯಾಕೆ" ಅಂತ ಹೇಳ್ತಾ ಇತ್ತು......ಬೇರೆ ನಾಯಿಗಳು ಅದನ್ನ ವಿಚಿತ್ರವಾಗಿ ನೋಡಿ ಸುಮ್ಮನೆ ಆಗ್ತಾ ಇದ್ವು....ಮತ್ತೆ ಅದೇ ಕಥೆ........ನಾಯಿಗಳು ಬೊಗಳೋದು....ಇದು ಬುದ್ದಿ ಹೇಳೋದು....ಇದೊಂತರ ರೂಟೀನ್ ಆಗಿ ಹೋಗಿತ್ತು......ಸರಿ ಒಂದು ದಿನ ಈ ನಾಯಕನ ಗತ್ತಿನ ನಾಯಿಯ ಹುಟ್ಟು ಹಬ್ಬ ಬಂತು.......ಬೇರೆ ನಾಯಿಗಳೆಲ್ಲ ಸೇರಿ ಈ ನಾಯಿಗೆ ಒಂದು ಉಡುಗೊರೆ ನೀಡಬೇಕು ಅಂತ ಅನ್ಕೊಂಡವು ...ಸರಿ ಗಿಫ್ಟ್ ಏನಪ್ಪಾ ಕೊಡೋದು ಅಂತ ಯೋಚಿಸುವಾಗ ಒಂದು ನಾಯಿ ಹೇಳ್ತು..."ಗೆಳೆಯರೇ,..'ಅವನು' ಯಾವಾಗ್ಲೂ ನಾವು ಗತ್ತಿನಿಂದ ಇರಬೇಕು...ಸುಮ್ಸುಮ್ನೆ ಬೊಗಳ ಬಾರದು ಅಂತೆಲ್ಲ ಹೇಳ್ತಿದ್ದ ಅಲ್ವ..ಅದಕ್ಕೆ ಇವತ್ತು ರಾತ್ರಿ ನಾವು ಬೊಗಳೋದೇ ಬೇಡ...ಅವನಿಗೆ ಖುಷಿ ಆಗುತ್ತೆ..ಇದೆ ನಾವು ಅವನಿಗೆ ಕೊಡೊ ಉಡುಗೊರೆ "ಅಂತು...ಸರಿ ಎಲ್ಲ ನಾಯಿಗಳು ಒಮ್ಮತದಿಂದ ಒಪ್ಪಿಕೊಂಡವು...ಎಂದಿನಂತೆ ಅಂದೂ ರಾತ್ರಿ ಆಯಿತು...ಎಲ್ಲ ನಾಯಿಗಳು ಅಂದುಕೊಂಡಿದ್ದಂತೆ ಸಂದು ಗೊಂದು ಸೇರಿಕೊಂಡವು...ಯಾರು ಬೊಗಳಲೇ ಬಾರದು ಅಂತ ಕುಳಿತವು....ಸರಿ ಆ ಗತ್ತಿನ ನಾಯಕ ನಾಯಿ ಎಂದಿನಂತೆ ತಿರುಗಾಡುತ್ತ ಬಂತು..ಎಲ್ಲಿ ಒಂದು ನಾಯಿಯ ಸದ್ದೇ ಇಲ್ಲ....ಬೊಗಳಾಟ ಇಲ್ಲ...ಇದಕ್ಕೆ ಯಾಕೋ ಬೇಸತ್ತು ಹೋಯ್ತು......"ಅಲ್ಲ ಯಾರಾದ್ರೂ ಬೊಗಳಿದರೆ ತಾನೇ ನನಗೆ ಕೆಲಸ...........ಯಾರು ಏನು ಮಾಡದೆ ಕುಳಿತರೆ ನನ್ನ ನಾಯಕನ ಗತ್ತ ತೋರಿಸೋದು ಯಾರ ಮೇಲೆ..ನನ್ನ ಬುದ್ದಿವಂತಿಗೆ ತೋರಿಸೋದು ಯಾರ ಬಳಿ ???".......ಸರಿ ಯಾರು ಕಾಣದ ಒಂದು ಮೂಲೆಗೆ ಹೋಗಿ ಒಂದೆರಡು ಸಾರಿ ಬೊಗಳಿತು..........ಮುಂದೆ ಗೊತ್ತೇ ಇದೆಯಲ್ಲ........ಎಲ್ಲ ನಾಯಿಗಳು ಶುರು ಹಚ್ಚಿಕೊಂಡವು .....ಈ ನಾಯಕ ನಾಯಿ ಹೊರ ಬಂದು ತನ್ನ ಪ್ರವಚನ ಶುರು ಮಾಡಿತು..............."ಏನು ನಿಮಗೆ ಬೇರೆ ಕೆಲಸವೇ ಇಲ್ವಾ ..........ಇತ್ಯಾದಿ ಇತ್ಯಾದಿ....."...........ಹಾಗೆ ಅಲ್ವೇ ನಮ್ಮ so called ನಾಯಕರು ಮಾಡೋದು....ಎಲ್ಲ ಚೆಂದ ಇದ್ರೆ ಸಹಿಸಲಾರರು.........ಯಾಕೆ ಅಂದ್ರೆ ಎಲ್ಲ ಚೆಂದ ಇದ್ರೆ ಅವರಿಗೆ ಕೆಲಸ ಇರೋದಿಲ್ವಲ್ಲ ಅದಕ್ಕೆ.......
ಇದು ಖಲೀಲ್ ಗಿಬ್ರಾನ್ ಅವರ ಕಥೆ..........ಹಾಗೆ ಓದಿದ ಮೇಲೆ ಹಂಚಿಕೊಳ್ಳ ಬೇಕು ಅನಿಸಿತು....
ಒಮ್ಮೆ ನಾರದ ಮುನಿಗಳು ಹಾಗೆ ಲೋಕ ಸಂಚಾರ ಮಾಡುವಾಗ ಅವರ ಕಣ್ಣಿಗೆ ಒಂದು ಪುಟ್ಟ ಸುಂದರ ಹಕ್ಕಿ ಕಣ್ಣಿಗೆ ಬಿತ್ತಂತೆ.....ಆ ಹಕ್ಕಿಯ ಸೌಂದರ್ಯಕ್ಕೆ ಬೆರಗಾದ ಅವರ ಆಂತರ್ಯಕ್ಕೆ ಅದರ ಸಾವು ಅದರ ಹಿಂದೆ ಹೊಂಚು ಹಾಕುತ್ತ ಇದ್ದಿದ್ದು ಕಾಣಿಸಿತಂತೆ..........ಸರಿ ನಾರದರು ತಮ್ಮ ದಿವ್ಯ ತಪೋಬಲದಿಂದ ಆ ಹಕ್ಕಿಯ ಉಳಿಸಲು ಉಪಾಯ ಮಾಡಿದರಂತೆ....ಆ ಹಕ್ಕಿಯ ಹೊತ್ತು ,ಒಂದು ದೊಡ್ಡ ಬೆಟ್ಟದ ಗವಿಯ ಒಳಗೆ ಹೊಕ್ಕು ಅಲ್ಲಿ ಆ ಹಕ್ಕಿಯ ಬಿಟ್ಟರಂತೆ.....ಆದರೆ ಆ ಗುಹೆಯಲ್ಲಿ ವಾಸವಿದ್ದ ಒಂದು ಕಾಳಸರ್ಪಕ್ಕೆ ಹಕ್ಕಿ ಆಹಾರ ಆಯ್ತಂತೆ......ಗುಹೆಯ ಬಳಿ ಬಂದ ಯಮಧರ್ಮ 'ಗುರುವರ್ಯ , ನಿಮ್ಮಿಂದ ತುಂಬಾ ಉಪಕಾರವಾಯ್ತು....ಕಾಳಸರ್ಪದಿಂದ ಹಕ್ಕಿಯ ಸಾವು ಎಂದಿತ್ತು ..ಆ ಸರ್ಪ ಹಕ್ಕಿಯ ಹುಡುಕಿ ಇಷ್ಟು ದೂರ ಬರುವ ಬಗ್ಗೆ ಹೇಗೆ ಎಂದು ನಾ ಚಿಂತಿಸುವಾಗ....ನೀವು ಆ ಕೆಲಸ ಮಾಡಿದಿರಿ ಉಪಕಾರವಾಯ್ತು " ಎಂದ.......
ನಾರದರಿಗೆ ಈಗ ನಗು ಬಂತು...'ಅಲ್ಲ ಕಾಲಜ್ಞಾನಿ ಆದ ನಾನೇ ಹೀಗೆ ಲೌಕಿಕವಾಗಿ ಚಿಂತಿಸಿದೆನಲ್ಲ" ಅನಿಸಿತು..................ಕಥೆ ಇಷ್ಟೇ..........
ಆದರೆ......ಅರಿಯಲಾರದ್ದು ಏನು ಅಂದ್ರೆ.........'ಬದುಕಿನ ಮೊದಲ ಪುಟ ಬರೆದವ ಕೊನೆಯ ಪುಟದ ಕೊನೆಯ ಸಾಲು ಬರೆದು ಬಿಟ್ಟಿರುತ್ತಾನೆ ಅಲ್ವೇ..........ಬರಿ ನಡುವಿನ ಪುಟಗಳ 'ನೆಪ ಮಾತ್ರಕ್ಕೆ 'ತುಂಬುವ ಹೊಣೆ ನಮ್ಮದು ಅಲ್ವೇ....'................:)))
ಗಂಗೆಯ
ಪ್ರೇಮ ರಭಸಕ್ಕೆ ತೆಲೆಯೊಡ್ಡಿದ ಶಿವ...
ತನ್ನ ಜಟೆಯ ಮುಡಿ ಕಟ್ಟುವ ಮೊದಲು
ತಲೆ ಕೊಡವಿದನೇನೋ ಕಾಣೆ....
ಅಂಗಳದ ಗಿಡಗಳ ತುಂಬೆಲ್ಲ ಮುತ್ತಿನ ಹನಿಯಂತ ಇಬ್ಬನಿಯ ಹಾಳೆ ............:))))
ಅಕ್ಕ ....
ಕದಳಿಯ ಬನದಲ್ಲಿ
ನಿನ್ನ ಚೆನ್ನಮಲ್ಲಿಕಾರ್ಜುನ ಸಿಕ್ಕಿದ್ದನೇನೇ ....???
ಸಿಕ್ಕರೆ ನನಗೂ ಹೇಳೆ ....
ಬದುಕಿನ ಕಾಡುಮೇಡುಗಳ ಅಲೆದು
ಒಂದು ಹಂತ ದಾಟಿದೆ ಎಂದೆನಿಸುವಾಗ .....
ನನಗೂ ಅಲ್ಲೇ ಕದಳಿಯಲ್ಲೇ....
ಅವನೊಡನೆ ಲೀನವಾಗಿ ಹೋಗುವ ಮನಸ್ಸಾಗಿದೆ..................:))

Thursday, 20 November 2014

ಅವನ ಬಾಹುಗಳಲ್ಲಿ ಅವಳು ಎಂದೂ ತೃಪ್ತಳು.. ಸದ್ದೇ ಇಲ್ಲದೆ, ಭಯವೇ ಇಲ್ಲದೆ , ನೆಮ್ಮದಿಯಾಗಿ ವರುಷಗಳೇ ಕಳೆದುಬಿಟ್ಟಳು ....
ಅದೆಷ್ಟೋ ವರುಷಗಳ ಬಳಿಕ ಇಬ್ಬರೂ ಈಗ ಬೇರೆ ಬೇರೆ ಮಲಗಿದ್ದಾರೆ
ಅವಳಿಗೋ ಅವನ ತೋಳಿಗೆ ತಲೆಯಾನಿಸದೆ  ಅವನ ಬಾಹುಗಳ ಬಂಧನವಿಲ್ಲದೆ ತೀರ ಚಳಿ ಎನಿಸುತ್ತಿದೆ .....
ಆದರೂ ನಿಸ್ಸಹಾಯಕರಾಗಿದ್ದಾರೆ ಇಬ್ಬರೂ .....
ಅವಳು ಇನ್ನೂ ಬೆಂಕಿ ಇಡದ ಅವಳ ಚಿತೆಯಲ್ಲಿ ............. ಇವನು ಸಮಾಧಿಯಲ್ಲಿ .................... 

Tuesday, 18 November 2014

ಮಗಳು ....

ಹೊಸ ಮಂಚ, ಹಾಸಿಗೆ, ದಿಂಬು, ಹೊದಿಕೆ .. ಏನ್ ಸಂಭ್ರಮ ಅವಳಿಗೆ ... 'ಸುಪರ್ಬ್ ಆಗಿದೆ ಅಪ್ಪಾ ' 'Thank you ಮಗ" 'ಯಾವಾಗ ಮಲಗ್ತೀನೋ ಅನಿಸ್ತಾ ಇದೆಅಪ್ಪಾ" ಅಪ್ಪನ ದೊಡ್ಡ ಸ್ಮೈಲ್ ......
ಸಂಜೆ ಊಟ ಆಯಿತು .. ಮಗಳು ಮಲಗಲು ಹೋದಳು ... ಅಪ್ಪ ಟಿವಿ ನೋಡ್ತಾ ಇದ್ದ .. ಒಂದ್ ಹತ್ ನಿಮಿಷ ಆಯಿತು ..ಅಪ್ಪ ಮಲಗಲು ಅವನ ರೂಮ್ಗೆ ಹೋದ ..ಂಮುದ್ದು ಮಗಳು ಬೆಚ್ಚಗೆ ಅವನ ಹಾಸಿಗೆಯಲ್ಲಿ !!!!...'ಯಾಕೋ ಪುಟ್ಟ ಹೊಸ ಹಾಸಿಗೆ ಇಷ್ಟ ಅಂದೆಯಲ್ಲ ????ಯಾವಾಗ ಮಲಗ್ತೀನೋ ಅಂದ್ಯಲ್ಲ ??" ' ಏ ಹೋಗಪ್ಪ ನೀನು ಬೆನ್ನು ಸವರದೇ ಇದ್ರೆ ನಿದ್ರೆ ಬರೋಲ್ಲ ........ಬೆನ್ನು ಸವರು " ಅಂತ ಅಪ್ಪನ್ನ ತಬ್ಬಿದ ಮಗಳು ಅವನ ಕಣ್ಣಿಗೆ ಮೊದಲ ಬಾರಿ ಹೆರಿಗೆ ಕೋಣೆಯಿಂದ ಅತ್ತೆ ತಂದು ಕೊಟ್ಟಿದ್ದ ಹಸುಕೂಸಿನಂತೆ ಕಂಡಳು ..:))))

Monday, 17 November 2014

ಒಂದಷ್ಟು ವಾಸ್ತವಗಳು ..........!!!

ಹೆರಿಗೆ ಮಾಡಿದ ವೈದ್ಯ:"ಗಂಡು ಮಗು!!!"
ಹುಡುಗಿಯ ತಾಯಿ:"......." ಕಣ್ಣ ತುಂಬಾ ತುಂಬಿದ ನೀರು.
ವೈದ್ಯ: "ಗಂಡು ಮಗು ಅಂದಾಗ ಅತ್ತಿದ್ದು ನೀವೆ ಮೊದಲಿರಬೇಕು "... 
ಹುಡುಗಿಯ ತಾಯಿ : 'ಅವರ ಅಪ್ಪನ ಹಾಗೆ ಆಗದೆ ಇರಲಿ ಅಂತ ಡಾಕ್ಕ್ತ್ರೆ "
ಆ ಪುಟ್ಟ ಅವಿವಾಹಿತ ಹೆಣ್ಣು ,ಆಗಷ್ಟೇ ಹುಟ್ಟಿದ ಗಂಡು ಮಗುವಿನ ತಾಯಿ ಇನ್ನು ಕಣ್ಣು ಬಿಡದೆ ಮಲಗಿತ್ತು !!


ಬೆಳಗು ಬೈಗಿನ ಅನ್ನಕ್ಕೆ
ಆ ಹೋಟಲಲ್ಲಿ ದುಡಿವ ಅವನು ಚೆಂದದ ಹುಡುಗ
ನನ್ನ ಮಗಳ ವಯಸ್ಸೇ ಏನೋ ... 
ಒಂದಷ್ಟು ನೀರೆರೆದು ಹೊಸ ಬಟ್ಟೆ ಹಾಕಿದರೆ ನನ್ನ ಮಕ್ಕಳಿಗಿಂತ ಚೆಂದವೇನೋ ...
ಒಂದಷ್ಟು ಓದು ನೀಡಿದರೆ ನನ್ನ ಮಕ್ಕಳಿಗಿಂತ ಎತ್ತರಕ್ಕೇರುವನೇನೊ ....
'ಶಾಲೆಗೆ ಹೋಗುವೆಯೇನೋ ಪುಟ್ಟ'ಅಂದೆ
'ಈಗ ಹೋಗಿಬಂದೆ ಅವ್ವ, ಟೀ ಕೊಟ್ಟು ಬಂದೆ' ಅಂದ .... !!!!!!!



'ಅಪ್ಪ, ಅಮ್ಮನ ಮುಚ್ಚಿದ್ದ ಕಣ್ಣಲಿ ಏನೋ ನೋಡ್ತಾ ಇದ್ದೆ ಅಲ್ವಾ '
'ಹೂಂ '
'ಅವಳು ಸತ್ತ ಅಷ್ಟು ಹೊತ್ತಿನ ಮೇಲೆ ಅವಳ ಮುಚ್ಚಿದ ಕಣ್ಣಲ್ಲಿ ಏನ್ ಕಾಣ್ತಿತ್ತು ಅಪ್ಪ ???'
'ಸಮಯ ಕಾಣ್ತಾ ಇತ್ತು ಮಗ, ಅವಳು ಯಾವಾಗ್ಲೂ ಕೇಳ್ತಾ ಇದ್ದ 'ನನ್ನ ಸಮಯ' ಕಾಣ್ತಾ ಇತ್ತು ಮಗ'...... !!!!


'ನಾ ಅಮ್ಮ ಆಗ್ತಾ ಇದ್ದೀನಿ ' ಅಂದ್ಲು
ಅವನ ಕಣ್ಣಲ್ಲಿ ಖುಷಿ ....
ಅವನಿಂದ ಉಡುಗೊರೆ ಸಿಗುತ್ತದೆ ಎಂದು ತಿಳಿದಿತ್ತು ....
ಅವನ ಬಳಿ ಬರುತ್ತಿದ್ದ ಸಿಗರೇಟಿನ ವಾಸನೆ ನಿಂತು ಹೋಗಿತ್ತು ....
ಇಷ್ಟು ದೊಡ್ಡ ಉಡುಗೊರೆ ನಿರೀಕ್ಷಿಸದ ಅವಳಿಗೆ ಅವನ ಬಗ್ಗೆ ಹೆಮ್ಮೆ ಗೌರವ ..!!!!
ಸುಮಾರು 17 ವರ್ಷದ ಹಿಂದೆ, ಕಾರ್ತಿಗೆ ಆಗ ಆರು ತಿಂಗಳು ಇರಬೇಕು , ಹರ್ಬರ್ಟ್ ಅಂಬ್ರೋಸ್ ಮನೆಗೆ ಬಂದ 'ಸುನೀತಾ, ನಾ ಹೋಗ್ತೀನಿ ಅಮ್ಮ , ಸನ್ನೀ ದೊಡ್ಡದು ಆದ ಮೇಲೆ ಮೇಲೆ ನೀನು ಹೌಸ್ಮ್ಯಾನ್ ಶಿಪ್ ಮಾಡು ..ಬಿಡಬೇಡ , ನೀನು ಚೆನ್ನಾಗಿ ಇರಬೇಕು , ಮಂಜುನ ಸಾಯಂಕಾಲ ಇನ್ ಮೇಲೆ ಕರ್ಕೊಂಡ್ ಹೋಗೊಲ್ಲ ..ನಿನಗೆ ಬೈಯೋಕೆ ನಾವಿಬ್ಬರು ಸಿಗೋಲ್ಲ ಅಮ್ಮ.. But still You Both Remain in me always , Lov u Guys'ಅಂದ. ಅದೇ ಕೊನೆ ಅವನನ್ನ ನೋಡಿದ್ದು . ಆಗಾಗ ನನ್ನ ಮಂಜುವಿನ ಮಾತಿನ ನಡುವೆ ಬರುತ್ತಿದ್ದ ಹರ್ಬರ್ಟ್ ಮನದಲ್ಲೇ ಉಳಿದಿದ್ದ
ಮೊನ್ನೆ ಗೆಳಯನೊಬ್ಬ fone ಮಾಡಿದ್ದ.ಮಾತಿನ ನಡುವೆ ಹರ್ಬರ್ಟ್ ಬಂದ 'ಹೇಯ್ ಸುನಿ, ಹರ್ಬರ್ಟ್ ಹೋಗ್ಬಿಟ್ಟನಂತೆ' ಅಂದ. 'ಏನೂ' ಕಿರುಚಿದ್ದೆ ..'ಹೂ ಸುನಿ ಹೋಗ್ಬಿಟ್ಟ ಅಂತೆ, accident ಆಯ್ತಂತೆ .... ' ಮುಂದೆ ನನಗೆ ಏನೂ ಕೇಳೋದು ಬೇಡ ಅನಿಸಿತ್ತು ...
ಓದುವಾಗ ನನಗಿಂತ ೩ ವರ್ಷ ಸೀನಿಯರ್ ಈ ಹರ್ಬರ್ಟ್..ವಯಸ್ಸಲಿ ಇನ್ನು ಸ್ವಲ್ಪ ಹೆಚ್ಚೇ ಏನೋ. ಮಲೇಸಿಯದ ಒಂದು ಕುಗ್ರಾಮದ ಹುಡುಗ .ಅಲ್ಲಿಂದ ಬಂದು ಇಲ್ಲಿ ಮೆಡಿಕಲ್ ಓದುತ್ತಾ ಇದ್ದ.. ಮೂರನೇ ವರ್ಷದಲ್ಲಿ ಇದ್ದಾಗಲೇ ಕಲಿತ ವಿದ್ಯೆಗೆ ಸಾರ್ಥಕ್ಯ ಹುಡುಕೋಕೆ ಹೊರಡುತ್ತಿದ್ದ. ಗದ್ದೆಯ ಕೆಲಸದ ಜನಕ್ಕೆ ಹುಷಾರಿಲ್ಲ ಅಂದ್ರೆ ಥಟ್ ಅಂತ ಹೆಲ್ಪ್ ಮಾಡ್ತಾ ಇದ್ದ .. 'ಹರ್ಬರ್ಟ್'ಅಂದ್ರೆ ಸಾಕು, 'ಏನು ಅಮ್ಮ ಸುನಿತಾ , ಏನು ಮಾಡಿದ್ದೀರಾ?ನಾನು ಇದ್ದೀನಿ ಬಿಡಿ ಅಮ್ಮ ಬೇಜಾರು ಬೇಡ ' ಅಂತೆಲ್ಲ ಸಾಂತ್ವಾನ ಹೇಳ್ತಾ ಇದ್ದ .. ಸಂಜೆ ಆದ್ರೆ ಸಾಕು 'ಮಂಜು ರೆಡಿನ' ಅಂತಿದ್ದ . 'ಸುನಿತಾ ಬೈಬೇಡ, ಬರಿ ಒಂದೇ ಒಂದು ರೌಂಡ್ ಅಷ್ಟೇ manju is safe in my hands' ಅಂತ ಇದ್ದ .. ಕೋಪ ಗೊಂಡರೆ ನಗಿಸುತ್ತಾ ಇದ್ದ.. ಸಂಜೆ ಇಬ್ಬರು ಹೋಗಿ ಅದೇನು ಮಾತಾಡಿಕೊಂಡು ಬರ್ತಾ ಇದ್ರೊ ... ವಾರಕ್ಕೊಮ್ಮೆ ಟೆರೇಸ್ ಮೇಲೆ ಹೋಗಿ ಇಬ್ಬರೂ ಸಣ್ಣದೊಂದು ಪಾರ್ಟಿ ಮಾಡಿದರೆ ಇಬ್ಬರಿಗೂ ಸಮಾಧಾನ.. ಹೆಸರಿಗೆ ನನ್ನ ಗೆಳೆಯ ಆದರೂ ಮಂಜು ಮತ್ತು ಹರ್ಬರ್ಟ್ ಗೆಳೆತನ ಹಂಚಿಕೊಂಡಿದ್ದೆ ಹೆಚ್ಚು .. ಗೆಳೆತನಕ್ಕೆ ಭಾಷೆ, ವಿದ್ಯೆ, ಹಣ, ವಯಸ್ಸು ಯಾವುದು ಅಡ್ಡಿಯಾಗದು ಅನ್ನೋದನ್ನ ತೋರಿಸಿದ್ದ .
ಅಂದು ಹೋದ ಹರ್ಬರ್ಟ್ ನನ್ನ ಅವನ ಕೆಲಸಗಳ ನಡುವೆ ಕಳೆದು ಹೋದ್ವಿ , ಹೋದ ಮೇಲೆ ಒಂದೆರಡು ವರ್ಷ ಕನೆಕ್ಟ್ ಆಗಿದ್ದು ಬಿಟ್ಟರೆ ಮತ್ತೆ ಮೊನ್ನೆಯೇ ಅವನ ವಿಷಯ ತಿಳಿದಿದ್ದು ..................... ಆದರೂ ...... ಆದರೂ ಅವನ ಸಾವಿಗೆ ಆದ ನೋವು ಪ್ರತಿ ದಿನ ಒಟ್ಟಿಗೆ ಇದ್ದವರ ಸಾವಿಗೂ ಆಗುತ್ತಿತ್ತೋ ಇಲ್ವೋ ಗೊತ್ತಿಲ್ಲ .... ಹಂಚಿಕೊಂಡ ಒಂದು ತುತ್ತು ಅನ್ನ , ಹಂಚಿಕೊಂಡ ಒಂದು ಹನಿ ಕಣ್ಣೀರು , ಹಂಚಿಕೊಂಡ ಪುಸ್ತಕ, ಹಂಚಿಕೊಂಡ ಹೊಸ ಅಮೆಚೂರ್ ಡಾಕ್ಟರ್ ಗಳ ಭಾವನೆ ........... ಎಲ್ಲಾ ಇನ್ನೂ  ಹಸಿರು..... ಹೇಯ್ ಹರ್ಬರ್ಟ್, Are you smiling at me?? 'ಬೇಜಾರು ಬೇಡ ಅಮ್ಮಾ ' ಅನ್ತಿದ್ದೀಯ?? U cheated us Herbert ನೀನು ನಮಗೆ ಹೇಳದೆ ಹೋದೆ ....ಆದರು U remain In us.......U remain.....

Sunday, 16 November 2014

ಪದಗಳಿಂದ ನೀ ಗೆದ್ದರೆ 
ನನಗದು ಹೆಮ್ಮೆ ಏನಲ್ಲ ಬಿಡು ಕಂದ 
ಕೃತಿಗಳಿಂದೊಮ್ಮೆ ಗೆದ್ದು ಬಿಡು 
ಆಮೇಲೆ ನೋಡು 
ಬೀಗುವ ಬಗ್ಗೆ ಹೇಗೆ ಎಂದು ಹೇಳಿಕೊಟ್ಟೇನು ......... :)))
ಅಂದೆಂದೋ ಚಕಮಕಿಯ ಕಲ್ಲ ಉಜ್ಜಿ
ಬೆಂಕಿಯ ಕಂಡುಕೊಂಡ ಮಾನವ 
ಕತ್ತಲ ಓಡಿಸಿದ 
ಭಯವ ಓಡಿಸಿದ 
ಹಸಿವ ಓಡಿಸಿದ 
ಈಗೆಲ್ಲ
ಮನಸ್ಸಿನ ಬೆಂಕಿಯಿಂದಲೇ
ಕತ್ತಲೆ ಹುಟ್ಟಿಸಬಲ್ಲ
ಭಯವ ಹುಟ್ಟಿಸಬಲ್ಲ
ಹಸಿವ ಹೆಚ್ಚಿಸಬಲ್ಲ .................
ಅದ್ಯಾಕೋ
ಒಮ್ಮೊಮ್ಮೆ
ಮಾನವ
ಬೆಂಕಿಗಿಂತ ಭಯ
ಹುಟ್ಟಿಸುತ್ತಾನೆ .....................
ಕೋಪದಿಂದ ನಲ್ಲೆ ಕಳುಹಿಸಿದ ಖಾಲಿ ಸಂದೇಶವ ಕೂಡ 
ಎಷ್ಟು ಚೆಂದ ಅರ್ಥೈಸಿಕೊಂಡನಲ್ಲ ಆ ನಲ್ಲ ........ 
ನೀ ಹೇಳಿದ್ದು ಅರ್ಥವಾಯ್ತು ನಲ್ಲೆ ಸಂಜೆ ಬೇಗ ಬರುವೆ ಎಂದು 
ಮರು ಸಂದೇಶ ಕಳುಹಿದನಲ್ಲ ..... ;))))))))
ಆ ಕಡೆಯ ಮೆಟ್ಟಿಲಿನ ಅಂಚಲ್ಲಿ ಕುಳಿತು 
ಕಣ್ಣಿನಿಂದ ಇಳಿದ ಎಲ್ಲಾ ಹನಿಗಳನ್ನು 
ಸೆರಗ ತುದಿಯಲ್ಲಿ 
ಯಾರಿಗೂ ಕಾಣದಂತೆ ಗಂಟು 
ಹಾಕೋದ ಕಲಿತಿದ್ದಾಳೆ ಅವಳು .. 
ಅದರಲ್ಲಿ ...
ಅಮ್ಮನ ಪಾಲಿನ ಹನಿ ...
ಅತ್ತೆಯ ಪಾಲಿನ ಹನಿ
ಮೈದುನನ ಪಾಲಿನ ಹನಿ
ಓರಗಿತ್ತಿಯ ಪಾಲಿನ ಹನಿ
ತಮ್ಮನ ಪಾಲಿನ ಹನಿ
ಗಂಡನ ಪಾಲಿನ ಹನಿ
ಮಕ್ಕಳ ಪಾಲಿನ ಹನಿ
ಕಳೆದು ಹೋದ ಅಪ್ಪನ ಪಾಲಿನ ಹನಿ
ಪ್ರೀತಿಯ ಗೆಳೆಯನ ಪಾಲಿನ ಹನಿ
ಗೆಳತಿಯರ ಪಾಲಿನ ಹನಿ
ಖುಷಿಯ ಹನಿ
ನೋವಿನ ಹನಿ
ಹೆದರಿಕೆಯ ಹನಿ
ಗೆದ್ದ ಹನಿ
............. ....
ಇನ್ನು ಎಷ್ಟೋ ಲಕ್ಷ ಹನಿಗಳು ಇವೆ ...
ಕೇಳಿದ್ರೆ ಏನೂ ಇಲ್ಲಾ ಅಂತಾಳೆ ....
ಸೆರಗ ಸೊಂಟಕ್ಕೆ ಸಿಕ್ಕಿಸಿ ನಗ್ತಾಳೆ .....
ಅಂತಹ
ಅಮ್ಮ,.. ಅಕ್ಕ.. , ತಂಗಿ,.. ಅತ್ತೆ ... ಮಗಳು ...
ನಿಮ್ಮ ಮನೆಯಲ್ಲೂ ಇರ್ತಾಳೆ ....
ಕೇಳಿ ನೋಡಿ .....
ಸೊಂಟಕ್ಕೆ ಸಿಕ್ಕಿಸಿದ ಸೆರಗಲ್ಲಿ
ಲಕ್ಷ ಹನಿಯ ಕಥೆಗಳಿವೆ .......... !!!!!
ಒಂದು ಮಳೆ ಸಾಕು ಗೆಳತಿ 
ಈ ಕೃತಕ ಬಣ್ಣಗಳೆಲ್ಲ 
ತೊಳೆದು ಹೋಗುತ್ತದೆ 
ಅಮೇಲೆ 
ಉಳಿಯುವುದು 
ಎಲ್ಲಾ ....
ಬರಿ
ಕಪ್ಪು ಬಿಳುಪೆ .........
ಘಮ್ಮನೆಯ ಮಣ್ಣಿನ ಘಮಲೇ ....:))))

Monday, 10 November 2014

ಹೀಗೊಂದು ಸಣ್ಣ ಪ್ರಶ್ನೆ ಅಪ್ಪನಿಗೆ !!!!

ಕಾವ್ಯ ಕಾರಣ ಹೇಳಿ ಎಲ್ಲ ಅಪ್ಪನ ಬಗ್ಗೆ ಬರೆವಾಗ
ನನಗೂ ಅಪ್ಪನ ನೋಡೋ ಆಸೆ ...
ಪ್ರೀತಿಗೋ, ಕಾಮಕ್ಕೋ
ನನ್ನ ಹುಟ್ಟಿಗೆ ಕಾರಣನಾದ ಅಪ್ಪನ ನೋಡುವ ಆಸೆ ...
ಪ್ರತಿಷ್ಟೆಗೋ , ಒತ್ತಡಕ್ಕೋ , ಕೋಪಕ್ಕೊ , ಪರಿಸ್ಥಿತಿಗೋ ಸಿಲುಕಿ
ಅಮ್ಮನ ವಿರುದ್ದ ದಿಕ್ಕಿಗೆ ತಿರುಗಿದ ಅಪ್ಪನ ನೋಡುವ ಆಸೆ ....
ಪುಟ್ಟಪುಟ್ಟ ಕೈಗಳಿಗೆ ಚೆಂದದ ಬಂಗಾರದ ಬಳೆಯ ತೊಡಿಸಿ
'ನನ್ನ ಮಹಾದೇವಿ ನೀನು' ಅಂದ ಅಪ್ಪನ ನೋಡೋ ಆಸೆ ...
ಪುಟ್ಟ ಬಂಗಾರದ ಕೈ ಮಸಿಯಾಗುವುದೆಂದು
ಕಡಲೆಕಾಯಿಯ ಬಿಡಿಸಿ ತಿನ್ನಿಸಿದ್ದ ಅಪ್ಪನ ನೋಡುವ ಆಸೆ ...
ಒಮ್ಮೆ ಹೋದ ನೀನು ಮತ್ತೆ ಬರದೆ ಇದ್ದಾಗ
ಅಮ್ಮನ ಕಣ್ಣ ಹನಿಯ ಕಂಡಾಗ ...
ಎಲ್ಲೋ ತಪ್ಪಿದೆ ಅನಿಸಿದಾಗ ...
ನಿನ್ನ ನೋಡೋ ಉತ್ಕಟ ಆಸೆಯ ಹುದುಗಿಸಿ ಬಿಟ್ಟೆ ಅಪ್ಪ ....
ಆದರೂ
ಅಂದೆಂದೋ ಒಂದು ಚೆಂದದ ಚಿತ್ರ ಬಿಡಿಸಿ 'ನನ್ನ ಮಗಳು ಹೀಗೆ ಆಗುತ್ತಾಳೆ' ಎಂದು ಹೇಳಿದ್ದ
ನಿನ್ನ ಮುಂದೆ ಈಗ ನಿಂತು 'ನಾ ನೀ ಹೇಳಿದಂತೆ ಇದ್ದೇನೆ ಅಲ್ವ ಅಪ್ಪ ' ಅನ್ನೋ ಆಸೆ ...
ನನ್ನ ಮಕ್ಕಳ ನಿನ್ನ ಮುಂದೆ ನಿಲ್ಲಿಸಿ ನಿನ್ನ ಮೊಗದ ನಗುವ ನೋಡುವ ಆಸೆ...
ನನ್ನ ಮಕ್ಕಳ ಮೊಗದಿ 'ತಾತ' ಎನ್ನುವ ಸಂಭ್ರಮ ನೋಡುವ ಆಸೆ ......
ಆದ್ರೆ
ಅಪ್ಪ, ನೀ ಹೊರಟ ಮೇಲೆ ನನ್ನ ನೆನಪೇ ಬರಲಿಲ್ಲವೇ ???
ಬಂದಿದ್ದರೆ ಪ್ರತಿಷ್ಟೆ , ಒತ್ತಡ , ಕೋಪ , ಪರಿಸ್ಥಿತಿಯಾವುದೂ ದೊಡ್ದದಾಗುತ್ತಿರಲಿಲ್ಲ ಅಲ್ವೇ ಅಪ್ಪ .............
ಎಲ್ಲಿಯಾದರೂ ಇದನ್ನು ಓದಿದರೆ ಒಮ್ಮೆ ಉತ್ತರಿಸಿ ಬಿಡು, ನಾನು, ನನ್ನಂತಹ ಎಷ್ಟೋ ಅಪ್ಪ ಇದ್ದರೂ ಇಲ್ಲದಂತೆ ಬದುಕ ಸಾಗಿಸೋ ಮಕ್ಕಳಿಗೆ ಉತ್ತರ ಸಿಕ್ಕೀತು...........

Sunday, 9 November 2014

ರಾತ್ರಿ ಇಡೀ ನಡೆದ
ಇಳೆಮಳೆಯ ಪ್ರಣಯದಾಟದಲಿ
ಸೋತವರಾರು ಗೆದ್ದವರಾರು
ಎಂದು ಕೇಳೋಣವೆಂದುಕೊಂಡು
ಕಣ್ಣುಜ್ಜುತ್ತ ಹೊರಬಂದೆ....
ರಾತ್ರಿಯ ಅಮಲು ಇನ್ನು ಇಳಿದಿಲ್ಲವೆಂಬಂತೆ
ಅವನು
ಇನ್ನೂ ಹನಿಗುಟ್ಟಿಸುತ್ತಿದ್ದ.......
ಇವಳೋ
ಮಿಲನ ಸುಖದ ಕಳೆಯ ಹೊತ್ತು ಇನ್ನೂ ಮಲಗಿದ್ದಳು.....:)))
ನಾನು ನಿನ್ನ ಪ್ರೀತಿಸಿದ್ದೆನಾ ..
ಶರಶಯ್ಯೆಯಲ್ಲಿದ್ದ ಭೀಷ್ಮನ ಮನದ ಪ್ರಶ್ನೆ ಅರಿತಂತೆ
ಶಿಖಂಡಿಯ ಮೊಗದಲ್ಲಿ ಹುಸಿನಗೆ ಮೂಡಿತು...
ಅಂದು ಅಂಬೆಯಾಗಿ ....
ಹಕ್ಕಿಯ ಹಾಗೆ ಹಾರಿಕೊಂಡು
ಸಾಳ್ವನ ಮನದ ಅರಗಿಣಿಯಾಗಿದ್ದ ನನ್ನ ನೀ ಹೊತ್ತುಕೊಂಡು ಹೋದಾಗ
ನಾ ಹಾಗೆ ಅಂದುಕೊಂಡಿದ್ದೆ ಭೀಷ್ಮ....
ನೀ ಹೊತ್ತೊಯ್ದ ನಾನು
ಇತ್ತ ವಿಚಿತ್ರವೀರ್ಯನ ಪತ್ನಿಯು ಆಗದೆ
ಅತ್ತ ಸಾಳ್ವನ ರಾಣಿಯು ಆಗದೆ ಬಂದು ನಿನ್ನ ಅಂಗಲಾಚಿದಾಗ....
ನೀ ನನ್ನ ವರಿಸೇ ಬಿಡುವೆ ಎಂದಿದ್ದೆ ಭೀಷ್ಮ......
ನೀ ಕರಗಲೇ ಇಲ್ಲ ಭೀಷ್ಮ...
ನಿನಗೆ ನಿನ್ನ ಶಪಥದ್ದೆ ಚಿಂತೆ....
ನಿನಗೆ ನಿನ್ನ ಅಭಿಮಾನದ್ದೆ ಹಠ.....
ನಾನಾದರೂ ಏನು ಮಾಡಲಿ...
ಅಗ್ನಿಯಂತೆ ಅಗ್ನಿಯೊಳಗೇ ಬೆಂದೆ ನೊಂದೆ....
ನಾನು ಕಾದೇಕಾದೆ ಭೀಷ್ಮ..
ನಿನ್ನನ್ನು ಪ್ರಶ್ನಿಸಲು....
ನೀನೆಂದಾದರು ನನ್ನ ಪ್ರೀತಿಸಿದ್ದೆಯಾ ಎಂದು ಕೇಳಲು ....
ಕುರುಕ್ಷೇತ್ರದ ಒಂದೊಂದು ದಿನವು ನಿನ್ನ ನೋಡ ಹಂಬಲಿಸಿದ್ದೆ....
ನೀನು ನನ್ನ ನೋಡುವ ಸಾಹಸವನ್ನ ಮಾಡಲಿಲ್ಲ...
ತಪ್ಪಿತಸ್ತ ಭಾವವೇ...!!???
ನೋಡಿದರೆ ಏನೆನ್ನುವಳೆಂಬ ಅಂಜಿಕೆಯೇ.....!!?
ಪಾರ್ಥನ ಸಾರಥಿ ನಾನಾಗಲೆಂದು
ನೀ ಕೃಷ್ಣನ ಬಳಿ ಹೇಳಿದಾಗಲೇ
ನನಗೆ ಅರಿವಾಗಿತ್ತು ಭೀಷ್ಮ ...
ಇದು ನಿನಗೆ ನೀನೇ ಕೊಟ್ಟುಕೊಳ್ಳುತ್ತಿರುವ ಶಿಕ್ಷೆ ಎಂದು...
ನನಗೆ ನಿನ್ನ ಮೇಲೆ ಕೋಪವಿಲ್ಲ ಭೀಷ್ಮ...
ಆದರೆ ನನ್ನ ಹೆಣ್ತನಕ್ಕೆ ನೀ ಮಾಡಿದ ಅಪಮಾನಕ್ಕೆ ಕೋಪವಿದೆ...
ಹೆಣ್ಣಿನ ಮನವ ಅರಿಯದೆ ಒಂದು ತುಂಬು ಪ್ರೀತಿಯ
ಅರಿತೋ ಅರಿಯದೆಯೋ ನಾಶ ಮಾಡಿದ್ದಕ್ಕೆ ಕೋಪವಿದೆ...
ಅರ್ಜುನನ ಬಾಣಕ್ಕೆ ನೀನು ಹೆದೆಯೇರಿಸದೆ...
ಬಿಲ್ಲನ್ನು ಪಕ್ಕಕ್ಕೆ ಇಟ್ಟಾಗ ........
ನಿನ್ನ ಕಣ್ಣಲಿ ನನಗೆ ಕಂಡಿದ್ದು ಪ್ರೀತಿಯೇ....???
ಈಗ ನೀನು ಶರಶಯ್ಯಯಲ್ಲಿರುವಾಗ
ನಿನ್ನ ಮುಂದೆ ಸುಳಿದ ನನ್ನ ನೀನು
ಕಣ್ಣಲ್ಲೇ ಕ್ಷಮೆ ಕೇಳಿದಂತೆ ಅನಿಸಿದ್ದು ಸುಳ್ಳಲ್ಲ ಭೀಷ್ಮ......
ನೀ ನನ್ನ ಪ್ರೀತಿಸಿದ್ದೆಯೋ ಇಲ್ಲವೋ
ನಾ ಅರಿಯೆ ಭೀಷ್ಮ....
ಆದರೆ ನಾ ನಿನ್ನ ಎಂದೂ ಪ್ರೀತಿಸಲಾರೆ...ದ್ವೇಷಿಸಲಾರೆ......
ಏಕೆಂದರೆ...
ನೀ ಜಗಕ್ಕೆಲ್ಲಾ ಪುರುಷೋತ್ತಮ .....
ನನಗೆ .....
ಹೆಣ್ಣಿನ ಮನವ ಅರಿಯದ ನೀನು ಪುರುಷ ಮಾತ್ರಾ.......
ನಾ ನಿನ್ನ ಪ್ರೀತಿಸಲಾರೆ....:))))))
ಇತಿ.....ಅಂಬೆ....:))
ಇದನ್ನೊಮ್ಮೆ ಓದಿಬಿಡಿ....:)))
ಒಮ್ಮೆ ಒಬ್ಬ ವ್ಯಕ್ತಿ ಒಂದು ಪತ್ರಿಕೆಯ ಓದುಗರ columnಗೆ ಒಂದು ಪತ್ರ ಬರೆದ...."ನಾನು ಸುಮಾರು ೩೦ ವರ್ಷಗಳಿಂದ ದೇವಾಲಯಗಳ ಸುತ್ತುತ್ತ ಇದ್ದೇನೆ....ಸುಮಾರು 10,000 ಮಂತ್ರಗಳ ಕೇಳಿರಬಹುದೇನೋ...ಆದ್ರು ಒಂದೂ ನೆನಪಲ್ಲಿ ಇಲ್ಲಾ...ಯಾಕೋ ಇತ್ತೀಚಿಗೆ ಇದೆಲ್ಲ ಡಂಬಾಚಾರ ಎನಿಸುತ್ತಾ ಇದೆ.....ಏನೂ ಉಪಯೋಗವಿಲ್ಲವೇನೋ ಅನಿಸುತ್ತಾ ಇದೆ...etc etc..."ಅಂತ ಬರೆದ...
ಗೊತ್ತೇ ಇದೆಯಲ್ಲ...ಒಂದೂ ಚರ್ಚೆ ಶುರು ಆಯಿತು....ಆಸ್ತಿಕರಿಗೂ ನಾಸ್ತಿಕರಿಗೂ ಸಂವಾದಗಳೇ ನಡೆದು ಹೋಯ್ತು....
ಪತ್ರಿಕೆಯವರಿಗೂ ಒಂದ ತರ ಖುಷಿ....ಪ್ರಚಾರ ಸಿಕ್ತಲ್ಲ ಅಂತ.....
ಎಲ್ಲವ ಓದುತ್ತಾ ನೋಡುತ್ತಾ ಇದ್ದ ಒಬ್ಬ ಹಿರಿಯರು ಒಂದು ಪತ್ರ ಬರೆದರು "ಅಣ್ಣ ತಮ್ಮಂದಿರೆ....ನಾನು ಸುಮಾರು ೩೦ ವರ್ಷಗಳಿಂದ ನನ್ನ ಹೆಂಡತಿ ಮಾಡಿದ ಅಡುಗೆ ತಿನ್ತಾ ಇದ್ದೀನಿ....ಅವಳು ಇಂತ ದಿನ ಇಂತದೆ ಅಡುಗೆ ಮಾಡಿದ್ಲು ಅಂತ ನನಗೆ ನೆನಪಿಲ್ಲ ...ಆದ್ರೂ ಅವಳು ಮಾಡಿ ಹಾಕಿದ್ದನ್ನ ತಿಂದು ನಾನು ನನ್ನ ದೈಹಿಕ ಆರೋಗ್ಯವ ಕಾಪಾಡಿಕೊಂಡಿದ್ದೀನಿ............ಹಾಗೆ ಈ ದೇಗುಲಗಳ ವಿಸಿಟ್ ಕೂಡ ...ಇಂತಹ ದಿನ ಇಂತಹ ದೇವಸ್ತಾನಕ್ಕೆ ಹೋದೆ...ಇದ ಕೇಳಿದೆ ಅನ್ನೋದು ಮುಖ್ಯ ಅಲ್ಲ...ನಿಮ್ಮ ಮಾನಸಿಕ ಆರೋಗ್ಯವ ..ನಿಮ್ಮ ಸನ್ನಡತೆಯ ಕಾಪಡಿದ್ದೆ ಅಂತಹ ವಿಸಿಟ್ಗಳು ಅನ್ನೋದು ನನ್ನ ಅನಿಸಿಕೆ ...ಸುಮ್ಮನೆ ವೃಥಾ ಬೇಸರ ಬೇಡ....etc etc..." ಅಂತ ಬರೆದರು......ಆಮೇಲೆ ಕಥೆ ಏನ್ ಆಯಿತೋ ಗೊತ್ತಿಲ್ಲ.....ಆದ್ರೆ ಆ ಹಿರಿಯರ ಮಾತು ಯಾಕೋ ಸತ್ಯ ಅನಿಸಿತು....:))))Felt like sharing aftr reading...
ಆಗೋದೆಲ್ಲ ಒಳಿತಿಗೆ ತಾನೇ !!!!!!
ಒಂದು ಊರು....ಅದೊಂದು ದೇವಸ್ಥಾನ ...ಅಲ್ಲಿನ ದೇವರ ಮೇಲೆ ಜನರಿಗೆ ಬಹಳ ಭಕ್ತಿ...
ಆ ದೇವಸ್ಥಾನದಲ್ಲಿ ಒಬ್ಬ ಕಸಗುಡಿಸುವವ ಇದ್ದ....ದಿನಾಲು ದೇಗುಲ ಸ್ವಚ್ಛ ಮಾಡಿ ದೇವಸ್ಥಾನದಲ್ಲೇ ಕಾಲ ಕಳಿತಾ ಇದ್ದ...
ಒಮ್ಮೆ ಅವನಿಗೆ ಒಂದು ಯೋಚನೆ ಬಂತು....'ಅಲ್ಲ,.. ಈ ದೇವರು ದಿನ ಪೂರ್ತ ಇಷ್ಟು ವರ್ಷಗಳಿಂದ ನಿಂತಿದ್ದಾನಲ್ಲ,,,ಅವನಿಗೆ ಬೇಸರ ಆಗೋದಿಲ್ವ...ಕಾಲು ನೋವು ಬರೋದಿಲ್ವ" ಎನಿಸಿತು..
ಸರಿ ದೇವರನ್ನೇ ಕೇಳಿದ..."ಸ್ವಾಮಿ ನಿನಗೆ ಕಾಲು ನೋಯೋದಿಲ್ವ...ಬೇಜರಾಗೋಲ್ವ.."
ದೇವರು "ಇದು ಸೃಷ್ಟಿಯ ನಿಯಮ...ಇದು ನನಗೆ ಸಂತಸದ ಕೆಲಸ" ಅಂದ...
ಇವನು ಹೇಳಿದ.."ಒಂದ್ ಕೆಲಸ ಮಾಡೋಣ...ಒಂದು ದಿನ ನಾನು ನಿನ್ನ ಜಾಗದಲ್ಲಿ ನಿಂತ್ಕೊಳ್ತಿನಿ...ನೀನು ಸ್ವಲ್ಪ rest ತಗೊಂಡು ತಿರುಗಾಡ್ಕೊಂಡು ಬಾ "ಅಂದ...ಮೊದಲು ದೇವರು ಒಪ್ಪಲಿಲ್ಲ...
ಆಮೇಲೆ ."ನೀನು ಯಾವುದೇ ಕಾರಣಕ್ಕೂ ,..ಏನೇ ಆದರು ಮಾತಾಡೋದಿಲ್ಲ ಅಂತ ಮಾತು ಕೊಡಬೇಕು....ಆಗ ನಾನು ಒಪ್ಪುತ್ತೇನೆ..."ಅಂದ..
ಸರಿ ಈ ಕಸಗುಡಿಸುವವ ಒಪ್ಪಿದ...
ಬೆಳಗಾಗುವ ಮುನ್ನ ದೇವರ ಸ್ಥಾನದಲ್ಲಿ ಇವ ನಿಂತ...ದೇವರು ಖುಷಿಂದ ಹೊರ ಸುತ್ತಲು ಹೋದ...
ಭಕ್ತರು ಬರತೊಡಗಿದರು.....ಕೋರಿಕೆಗಳ ಇಟ್ಟು ಹೋಗತೊಡಗಿದರು...ಸಂಜೆವರೆಗೂ ಹಾಗೆ ನಿಂತಿದ್ದ ಇವನು...ಕೆಲಸ ಇಷ್ಟು ಸುಲಭ ಅನ್ಕೊಂಡಿರಲಿಲ್ಲ ಅವನು....
ಸಂಜೆ ಆಗ್ತಾ ಬಂತು...ಒಬ್ಬ ಶ್ರೀಮಂತ ಒಳಗೆ ಬಂದ...ದೇವರ ಮುಂದೆ ಬೇಡಿಕೆಗಳ ಬೆಟ್ಟವನ್ನೇ ಇಳಿಸಿದ...ತನ್ನ purse ತೆಗೆದು ಹುಂಡಿಗೆ ಹಣ ಹಾಕಿದ....ಹೊರ ಹೊರಟ...ಹೊರಡೋ ಭರದಲ್ಲಿ purse ಕೆಳಗೆ ಬಿತ್ತು..ಗಮನಿಸದ ಅವ ಹಾಗೆ ಹೊರಗೆ ಹೋದ...ದೇವರ ಸ್ಥಾನದಲ್ಲಿ ಇದ್ದ ಇವನು ಅವನ "purse ಎತ್ತಿಕೋ "ಅಂತ ನಾಲಿಗೆ ತುದಿಯವರೆಗೆ ಬಂದ ಮಾತನ್ನ ದೇವರ ಎಚ್ಚರಿಕೆ ನೆನಪಿಸಿಕೊಂಡು ಹೊರಹಾಕದೆ ಉಳಿದ...ಈಗ ಒಬ್ಬ ಬಡ ಮರ ಕಡಿಯುವವ ಬಂದ...ಜೇಬಲ್ಲಿ ಉಳಿದ ಒಂದು ಸಣ್ಣ ನಾಣ್ಯವ ಹುಂಡಿಗೆ ಹಾಕಿದ...ಅದನ್ನ ದೇವರು ಕೊಟ್ಟಿದ್ದಕ್ಕೆ ನಮಿಸಿದ...ಮಕ್ಕಳ ಆಸೆ ತೀರಿಸೋ ಶಕ್ತಿ ಕೊಡು ಅಂತ ಬೇಡಿದ...ಹೊರ ಹೊರಟ ಅವನಿಗೆ ಆ purse ಸಿಕ್ಕಿತು..ಎತ್ತಿಕೊಂಡು ಹೊರ ಹೋದ....ಈಗಲೂ ದೇವರ ಸ್ಥಾನದಲ್ಲಿ ಇದ್ದ ಕಸಗುಡಿಸುವವ 'ಅದು ಆ ಶ್ರೀಮಂತನ ಹಣ' ಎಂದು ಹೇಳಲು ಬಾಯಿ ತೆರೆದ...ದೇವರಿಗೆ ಕೊಟ್ಟ ಭಾಷೆ ನೆನಪಾಗಿ ಸುಮ್ಮನಾದ....ದೇಗುಲ ಮುಚ್ಚುವ ವೇಳೆಯಾಗುತ್ತಿತ್ತು ಈಗ ಒಬ್ಬ ನಾವಿಕ ಬಂದ....ಅವನು ಅಂದು ರಾತ್ರಿ ದೂರ ಪಯಣ ಹೊರಟಿದ್ದ...ದೇವರ ಬಳಿ ತನ್ನ ಪಯಣ ಹಿತವಾಗಿರಲಿ ಎಂದು ಕೇಳಿಕೊಂಡು ಹೊರಟ....ಇನ್ನೇನು ಹೊರ ಹೋಗಬೇಕೆನ್ನುವಾಗ ಆ ಶ್ರೀಮಂತ ಪೋಲಿಸರೊಡನೆ ಒಳ ಬಂದ...ಯಾರು ಕಾಣದೆ ನಾವಿಕನೆ ತನ್ನ purse ಕದ್ದಿರಬೇಕು ಅಂತ ಪೊಲೀಸರಿಗೆ ಹೇಳಿದ...ಪೊಲೀಸರು ನಾವಿಕನನ್ನ ಹಿಡಿದು ಹೊರಟರು...ಇನ್ನು ಈ ಕಸಗುಡಿಸುವವನಿಗೆ ತಡೆಯಲು ಆಗಲೇ ಇಲ್ಲ..."ಇವನು ಅದ ಕದ್ದಿಲ್ಲ ..ಕದ್ದವ ಆ ಮರಕಡಿಯುವವ"ಎಂದ....ದೇವರ ಮಾತಲ್ಲವೇ...ಆ ಮರ ಕಡಿಯುವವನನ್ನ ಹಿಡಿದು ತಂದರು ಅವನ ಬಳಿ purse ಸಿಕ್ಕಿತು ಅವನನ್ನ arrest ಮಾಡಿದ್ರು ....
ಆಯ್ತು...ಆ ದಿನ ಮುಗಿತು....ಊರೆಲ್ಲ ಸುತ್ತಿ ಖುಷಿಯಿಂದ ದೇವರು ಬಂದ, ಇವನಿಗೆ thanks ಹೇಳಿದ 'ವಿಶೇಷ ಏನು ಇಲ್ಲ ತಾನೇ ಎಲ್ಲ ಸರಿ ಇತ್ತು ತಾನೇ' ಅಂದ...ಇವನು ಹೇಳಿದ.."ಚೆನ್ನಾಗಿತ್ತು...ನಾನು ಮಾತೇ ಆಡಲಿಲ್ಲ , ಒಂದು ಸಾರಿ ಮಾತ್ರ ಆದ ಅನ್ಯಾಯ ನೋಡಲಾರದೆ ಮಾತಾಡಿದೆ" ಅಂದ...
ದೇವರು ತನ್ನ ದಿವ್ಯದೃಷ್ಟಿಯಿಂದ ನೋಡಿದ...ಆದ ವಿಷಯ ಅರಿತ...ಇವನು ಕೇಳಿದ.."ನಾನು ಮಾಡಿದ್ದು ಸರಿ ತಾನೇ?"
ದೇವರು ಹೇಳಿದ..."ಅಯ್ಯೋ ಮೂರ್ಖ!!.ತಪ್ಪು ಮಾಡಿದೆ...ಆ ಶ್ರೀಮಂತ ದೊಡ್ಡ ಮೋಸಗಾರ ಬಂದ ಹಣವೆಲ್ಲ ಮೋಸದ್ದು..ಅವನು ಅದ ಕಳೆದುಕೊಳ್ಳಬೇಕೆಂದು ಅವನ ವಿಧಿ ಬರಹ ಆಗಿತ್ತು...ಆ ಮರಕಡಿಯುವವ ತುಂಬಾನೇ ಒಳ್ಳೆಯವ...ಅವನಿಗೆ ಉಪಕಾರ ಆಗಲಿ ಎಂದೇ ಆ purse ಅವನಿಗೆ ಸಿಗೋ ಹಾಗೆ ಬರೆದಿತ್ತು...ಇನ್ನು ಆ ನಾವಿಕ...ಅವನು ಹೋಗೋ ಹಡಗು ಇವತ್ತು ರಾತ್ರಿ ಮುಳುಗಿ ಹೋಗುತ್ತದೆ...ಅದರಿಂದ ಅವನು ತಪ್ಪಿಸಿಕೊಳ್ಳಲಿ ಅಂತನೇ ಅವ arrestಆಗಿದ್ದು..ನಿನ್ನ ಒಂದು ಮಾತು ಎಲ್ಲವ ಹಾಳು ಮಾಡಿತು ನೋಡಿದ್ಯ "ಅಂದ...."ಎಲ್ಲದಕ್ಕೂ ಕಾರಣ ಇರುತ್ತೆ...ಆಗೋದೆಲ್ಲ ಒಳ್ಳೇದಕ್ಕೆ ಅಂತ ಅರಿತರೆ ಸಾಕು " ಅಂದ ....!!!!!
ಹೌದಲ್ಲವೇ......ಏನೇ ಅದ್ರೂ ಒಂದು ಕಾರಣ ...ಒಂದು ಒಳಿತು ಇದೆ ಅಂತ ತಾಳ್ಮೆಯಿಂದ ಇದ್ರೆ ಸಾಕಲ್ಲವೇ...:)))))


ಇದು ಪ್ರಕೃತಿ ಪುರುಷನ ಕಥೆ.....!!!!!!!!!!


ಅವಳಿಗೆ ಸಾಗರ ತಟ ಅಂದ್ರೆ ಅದಮ್ಯ ಪ್ರೀತಿ....
ಘಳಿಗೆಗೊಮ್ಮೆ ಬಂದು ಅವನ ಸೋಕುವ ಹಂಬಲ..."ಹೇಗಿದ್ದೀಯ ಗೆಳೆಯ" ಎನ್ನುವ ಬಯಕೆ...
ಬಂದೇ ಬರುತ್ತಿದ್ದಳು....ಕೇಳೇ ಕೇಳುತ್ತಿದ್ದಳು...
ಅಲ್ಲೊಂದು ಬಂಡೆರಾಯ ..ಅವನಿಗೆ ಇವಳ ಕೆಣಕುವ ಆಸೆ.....ಅವಳ ಕಂಡು ಹೇಳಿದ.."ನಿನ್ನ ನಾ ತಡೆಯುತ್ತೇನೆ...ನಿನ್ನ ಹೋಗಗೊಡುವುದಿಲ್ಲ"...
ಅವಳದು ಅದೇ ಸ್ಥಿರ ನಗು.."ನಾ ನಿನ್ನ ದಾಟಿ ಹೋಗಬಲ್ಲೆ...ನನಗೆ ಅವನೆಂದರೆ ಪ್ರಾಣ.."
ಅವನ ರೊಚ್ಚಿಗೇಳಿಸುವಂತ ನಗು......ಅವನೂ ಗಟ್ಟಿಯಾಗಿ ನಿಂತ.....
ಇವಳು ಅಷ್ಟು ದೂರದಿಂದಲೇ ನಗುತ್ತಾ ಆದರೆ ರಭಸವಾಗಿ....ಅವನ ತಲುಪುವ ಹುರುಪಿನಿಂದ...ಬಂದೇ ಬಂದಳು...
ಬಂಡೆ ಸ್ವಲ್ಪವು ಅಲುಗಾಡಲಿಲ್ಲ.....ಅಷ್ಟೇ ರಭಸದಿಂದ ಹಿಂದೆ ಹೋದಳು ಅವಳು......
ಬಂಡೆರಾಯ ನಕ್ಕ...ಸೋತೆಯಲ್ಲ ಎಂಬಂತೆ ನಕ್ಕ....
ಈಕೆಯ ಮೊಗದಲ್ಲಿ ಅದೇ ನಗು....ಅವನ ರೊಚ್ಚಿಗೇಳಿಸುವ ಮುಗ್ಧ..ಸುಂದರ ನಗು...."ಗೆಳೆಯ...ಒಂದೊಮ್ಮೆ ನೀನಿರುವ ಆ ಇಡಿ ಸಾಗರ ತಟ ನಿನ್ನ ಹಾಗೆ ಬಂಡೆಯಾಗಿತ್ತು...ನಿನ್ನ ನಾ ಸೋಕಿ ಹಿಂದೆ ಬಂದಾಗ...ನಿನ್ನ ಅಣುಗಳು ನನ್ನೊಡನೆ ನನ್ನೊಡಲ ಸೇರಿಕೊಂಡವು.. ಪ್ರತಿ ಬಾರಿ ನಿನ್ನ ನಾ ಸೋಕಿದಾಗ ಇದೇ ಆಗುತ್ತದೆ...ಎಲ್ಲಿಯವರೆಗೆ ನೀನು ಇಡಿಯಾಗಿ ತಟದೊಡನೆ ತಟವಾಗಿ ಸೇರಿಕೊಳ್ವೆಯೋ ಅಲ್ಲಿಯವರೆಗೂ ಹೀಗೆ ಬರುತ್ತೇನೆ...ಆಮೇಲೆ ನೀನೂ ನನ್ನ ಪ್ರೀತಿಸುತ್ತೀಯ ...ತಟದೊಡನೆ ತಟವಾಗಿ...ನಾನು ಬಂದೇ ಬರುತ್ತೇನೆ ನಿನ್ನ ಪ್ರೇಮ ಕನ್ನಿಕೆಯಾಗಿ" ಅಂದ್ಲು.....
ಪ್ರಕೃತಿ ತನ್ನ ಸೌಂದರ್ಯ..ಸ್ನೇಹ, ಪ್ರೀತಿ, determination ತ್ಯಾಗದಿಂದ ಪುರುಷನನ್ನ ಗೆಲ್ಲುತಲೇ ಹೋಗುತ್ತಾಳೆ...ಇವರ ಮಿಲನಕ್ಕೆ ಇವರ ಮಿಲನಕ್ಕೆ ಭೂಮಿ ಸುಂದರವಾಗುತ್ತಾ ರೂಪಾಂತರಗೊಳ್ಳುತ್ತಾ ನಗುತ್ತಾಳೆ ...ಬದುಕುತ್ತಾಳೆ ...ಉಳಿಯುತ್ತಾಳೆ ....
ಹೀಗೊಂದು ಕಥೆ...:))))
ಒಂದೂರು..
ಒಬ್ಬ ರಾಜಾ..
ರಾಜನ ಬಳಿ ಒಬ್ಬ ಮೂರ್ಖ ಸೇವಕನಿದ್ದ......
ಇವನ ಮೂರ್ಖತನಕ್ಕೆ ಬೇಸತ್ತ ರಾಜ ಒಮ್ಮೆ ಒಂದು ದೊಣ್ಣೆ ಕೊಟ್ಟು ಹೇಳಿದ...
"ನಿನಗಿಂತ ಮೂರ್ಖರು ಯಾರಾದ್ರೂ ಸಿಕ್ಕಿದ್ರೆ ಇದನ್ನು ಕೊಟ್ಟು ಬಿಡು ಅಲ್ಲಿಯವರೆಗೂ ನನ್ನ ಮುಂದೆ ಬರಬೇಡ" ಅಂತ......
ಕೆಲ ವರ್ಷಗಳ ನಂತರ ರಾಜ ಖಾಯಿಲೆ ಬಿದ್ದ.....
ಸಾವು ಖಚಿತ ಅನ್ನೋ ಹಾಗೆ ಆದ...
ಅವನ ಮೂರ್ಖ ಸೇವಕ ಬಂದ..."ನೀವು ಎಲ್ಲೋ ಹೋಗುತ್ತಿರಂತೆ?" ಅಂದ..
'ಹೌದು' ಎಂದ ರಾಜ..'ಎಲ್ಲಿಗೆ' ಅಂದ...
'ಬಹಳ ದೂರ ಪ್ರಯಾಣ" ಅಂದ ರಾಜ.....
"ಎಷ್ಟು ದಿನಗಳು ?ಒಂದು ವಾರ??" ಕೇಳಿದ ಸೇವಕ..'ಇಲ್ಲ' ಅಂದ ರಾಜ
"ಒಂದು ತಿಂಗಳು??'.ಕೇಳಿದ ಸೇವಕ..'ಇಲ್ಲ' ಅಂದ ರಾಜ
'ಒಂದು ವರ್ಷ' .ಕೇಳಿದ ಸೇವಕ 'ಇಲ್ಲ ಇನ್ನು ಬರುವುದು ಸಾದ್ಯವೇ ಆಗದೇನೋ ' ಅಂದ ರಾಜ
'ಏನು ವ್ಯವಸ್ಥೆ ಮಾಡಿಕೊಂಡಿರುವಿರಿ ನಿಮ್ಮ ಪ್ರಯಾಣಕ್ಕೆ, ನಿಮ್ಮ 'ಅಲ್ಲಿನ' ಇರುವಿಕೆಗೆ'? ಅಂದ ಸೇವಕ......
ಈಗ ರಾಜ ದಂಗು ಬಡಿದು ಹೋದ...ಮೂರ್ಖ ಎನಿಸಿಕೊಂಡ ಸೇವಕನ ಪ್ರಶ್ನೆಗೆ.......
'ಹೌದಲ್ಲವೇ ಏನು ಮಾಡಿದ್ದೇನೆ ನಾನು..
ಸ್ವಾರ್ಥಕ್ಕೆ ಯುದ್ಧಗಳು, ವಂಶ ಬೆಳೆಸಲಿಕ್ಕಾಗಿ ಪತ್ನಿಯರು..ಜನಕ್ಕಾಗಿ ಏನು ಮಾಡಿದೆ ನಾನು ??"....
ಈಗ ಸೇವಕ ಹೇಳಿದ..."ನೀವು ಕೊಟ್ಟ ಈ ಕೋಲು ಈಗ ನಿಮಗೆ ಬೇಕಾಗುತ್ತದೆ ತಗೋಳಿ ...ನನಗೆ ಇದರ ಉಪಯೋಗ ಸಾಕು "ಅಂದ...!!!!!!!!!!!!!
ಹೌದಲ್ಲವೇ...ಜೀವನದ ತುತ್ತತುದಿ ಮುಟ್ಟಿದಾಗ ನಾವು ತೆಗೆದುಕೊಂಡು ಹೋಗೋದು ಬರಿ ನಾವು ಮಾಡೋ ಕೆಲಸ (ಕರ್ಮ!!) ಫಲ ಮಾತ್ರ ಅಲ್ಲವೇ...ಅದಕ್ಕಾಗಿ ವ್ಯವಸ್ಥೆ ಮಾಡಿಕೊಳ್ಳದೆ ಹೋದರೆ ನಾವು ಶತಮೂರ್ಖರೆ ಹೌದಲ್ಲವೇ...!!!!

ಅವನು ಮತ್ತು ನಾನು  ....


ನೆನ್ನೆ ಸಂಜೆ...ಅವನ ನೋಡಲೇ ಬೇಕೆನಿಸಿತು..ಮಾತನಾಡಲೇ ಬೇಕೆನಿಸಿತು..ಅವನ ಮೆಚ್ಚಿನ ನಸುಗೆಂಪು ಬಣ್ಣದ ಸೀರೆ ಉಟ್ಟು ಹೊರಟೆ...ಅವನಿಗೆ ಸ್ವಲ್ಪ ದೂರದಲ್ಲಿ ಅವನ ಮುಂದೆ ಕುಳಿತೆ...ಸಂಜೆಗೆಂಪಿನ ನಡುವೆ...ಮೌನದ ಮಧ್ಯೆ ನಾ ಅವನೆದುರು ಕುಳಿತಾಗ..ಅವನೆಷ್ಟು ಬಾರಿ ನನ್ನ ಕೈ ಸ್ಪರ್ಶಿಸಲು ಹವಣಿಸಿದನೋ..ಅದೆಷ್ಟು ಬಾರಿ ಹಿಂದೆಗೆದುಕೊಂಡನೋ ಗೊತ್ತಿಲ್ಲ....ಗಂಟೆಯೇ ಉರುಳಿತೇನೋ..ಇನ್ನೇನು "ಹೊರಟೆ "ಎನ್ನುವಾಗ...ಅವನ ಅಲೆಗಳು ನನ್ನ ಪಾದ ಸೋಕಿದವು...ಆಹ್...ಕಾದಿದ್ದು ಸಾರ್ಥಕ ಆಯಿತು ಅನಿಸಿತು....ದೂರದ ಊರಿನಲ್ಲಿರುವ ನನ್ನವನು..."ಇಲ್ಲಿ ಮಳೆ ಗೆಳತಿ"ಅಂತ ಸಂದೇಶ ಕಳುಹಿಸಿದ....:)))
ಅವನೊಬ್ಬ ನುರಿತ ಮಕ್ಕಳ ವೈದ್ಯ. ಅಂದು ಎಂದಿಗಿಂತಲೂ ಹೆಚ್ಚು ಜನ..ಸಾಕಾಗಿ ಹೋಗಿತ್ತು ಅವನಿಗೂ....ಅಷ್ಟರಲ್ಲಿ ಬಾಗಿಲ ಬಳಿ ಸದ್ದಾಗಿತ್ತು...ತಲೆ ಎತ್ತಿ ನೋಡಿದ...ಅರೆ ಕ್ಷಣ ಮನದ ತುಂಬಾ ಮಧುರ ಭಾವನೆಗಳು...ವರ್ಷಗಳ ಹಿಂದಿನ ಅವನ ಸ್ಫೂರ್ತಿ..ಅವನ ಒಲವು...ಅವನ ಮನದ ಗೆಳತಿ..ಈಗ ಪುಟ್ಟ ಕಂದನ ಮಡಿಲಲ್ಲಿ ಹಿಡಿದು ಸೋತ ಮುಖದೊಡನೆ ನಿಂತ ತಾಯಿ...ಆ ಹೆಣ್ಣಿನ ಮೊಗದಲ್ಲಿ ನೋವು ಭಯ....ತಟ್ಟನೆ ಎಚ್ಚೆತ್ತ...ಅವನಿಗೆ ಅವನು ಮಾಡಿದ ಪ್ರಮಾಣ ನೆನಪೈತು Hippocratic oath (Hippocratic Oath: One of the oldest binding documents in history, the Oath written by Hippocrates is still held sacred by physicians: to treat the ill to the best of one's ability, to preserve a patient's privacy, to teach the secrets of medicine to the next generation, and so on. )
ಮಗುವಿನ ಬಗೆ ಕೇಳಿದ ...ನೋಡಿದ...ಟ್ರೀಟ್ ಮಾಡಿದ..."ಭಯದ ಅಗತ್ಯ ಇಲ್ಲ...ಎಲ್ಲ ಸರಿ ಹೋಗುತ್ತದೆ" ಅಂದ...ಹೆಣ್ಣು ಮಗಳ ಕಣ್ಣಲ್ಲಿ ಕೃತಜ್ಞತೆ...ಮಾತಿನ ಅಗತ್ಯವೇ ಕಾಣಲಿಲ್ಲ ಮುಂದೆ.........ಅವನ ಕರ್ತವ್ಯ...ಅವಳ ತಾಯ್ತನ ಎಲ್ಲಾ ಹೇಳಿತ್ತು....ಬದುಕು ಅಲ್ಲಿ ಮಾನವೀಯತೆಯ ಮೆರೆದಿತ್ತು....:))))
????

ಒಂದು ಆಫೀಸು ..ಅಲ್ಲಿ ಒಬ್ಬ ಬಾಸ್....ಒಳ್ಳೆಯ ಮನುಷ್ಯ ...ಆದ್ರೆ ನೋಡಲು ಒರಟ...ಕುರೂಪಿ....ಅವನ ಕೈ ಕೆಳಗೆ ಕೆಲಸ ಮಾಡುವವರೆಲ್ಲ ಅವನ ರೂಪದ ಬಗೆ ವ್ಯಂಗ್ಯವಾಡುತ್ತಿದ್ದರು....ಮನ ನೊಂದರೂ ಅವನು ಸಾವರಿಸಿಕೊಳ್ತಾ ಇದ್ದ....ಒಮ್ಮೆ ಒಂದು ಆಫೀಸ್ ಪಾರ್ಟಿ...ಬಾಸ್ ಹೆಂಡತಿ ಕೂಡ ಬಂದಿದ್ರು...ಆಕೆ ತುಂಬಾ ಪ್ರಕ್ಟಿಕಾಲ್ ಹೆಣ್ಣು ಮಗಳು...ಆಕೆಗೂ ಇವರೆಲ್ಲರ ಕೊಂಕು ತಿಳಿದಿತ್ತು.....ಮಾತಾಡ್ತಾ ಮಾತಾಡ್ತಾ ಯಾರೋ ಕೇಳಿದರು...'ಅಲ್ಲ ಸರ್ ದೇವರು ನಿಮ್ಮನ್ನ ತಯಾರು ಮಾಡುವಾಗ ನೀವು ದೇವರ ಹತ್ತಿರ ಸೌಂದರ್ಯದ ವರ ಕೇಳಲಿಲ್ಲ ಅನಿಸುತ್ತೆ" ಅಂದ್ರು...ಬಾಸ್ ದು ಅದೇ ಸ್ತಿತಪ್ರಜ್ಞೆ...ಆದ್ರೆ ಬಾಸ್ ಹೆಂಡತಿಗೆ ಸಹಿಸಲಾಗಲಿಲ್ಲ...ಆ ಹೆಣ್ಣು ಮಗಳು ಹೇಳಿದ್ಲು...' ನೀವೆಲ್ಲ ನಿಮ್ಮ ರೂಪದ ವರ ಪಡಿತಾ ಇರುವಾಗ ನನ್ನ ಗಂಡ ವಿದ್ಯೆಯ ..ಸಂಸ್ಕಾರದ ವರ ಬೇಡ್ತ ಇದ್ರೂ ಅನಿಸುತ್ತೆ....ಅದಕ್ಕೆ ಅವರು ಹೀಗೆ ಈ ಜಾಗದಲ್ಲಿ...ಈ ಸಂಯಮದಲ್ಲಿ ,...ನೀವು ಆ ಜಾಗದಲ್ಲಿ.....' ಅಂದ್ಲು....ಎಳೆದು ಬಾರಿಸಿದನ್ತಾಯ್ತು ಅವರಿಗೆ....ಎಷ್ಟು ನಿಜ ಎಷ್ಟು ಸುಳ್ಳು ಅನ್ನೋದಕಿಂತ.....ಒಬ್ಬರನ್ನ ನೋಯಿಸಿ ಸುಖ ಪಡೆವ ಜನರಿಗೆ ಬುದ್ದಿ ಕಲಿಸಲು ಆ ಬಾಸ್ ಹಾಗೆ ಇರಬೇಕಾ...ಇಲ್ಲ ಅವನ ಹೆಂಡತಿ ಹಾಗೆ ಇರಬೇಕಾ ...??!!

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...