ಅವನಿಗಾಗಿ, ಅವನಿಂದ ....:)))
ನೀನು Mr. Perfect ಅಲ್ಲ....ನಾನು Mrs. Perfect ಅಲ್ಲ....ನಾವು ಹಾಗೆ ಆಗುವುದೂ ಸಾಧ್ಯವೂ ಇಲ್ಲ...ಆದರೂ ನಾವಿಬ್ಬರು ಉತ್ತಮ ಮಾನವರು...ತಪ್ಪೇ ಮಾಡದವರೇನಲ್ಲ.. ಮಾಡಿದ ತಪ್ಪ ಒಪ್ಪಿ..ಕ್ಷಮೆ ಕೇಳುವ ಮನ ಇಬ್ಬರಲ್ಲೂ ಇದೆ...ಕಣ್ಣ ಹನಿ ಕೆಳ ಜಾರುವ ಮೊದಲೇ ಮೊಗದಲ್ಲಿ ನಗುವ ಅರಳಿಸಬಲ್ಲವ ನೀನಾದರೆ...ನಿನ್ನ ಮೊಗದ ರೇಖೆಗಳಿಂದಲೇ ನಿನ್ನ ಭಾವ ಅರಿತು ಅದಕ್ಕೆ ತಕ್ಕಂತೆ ನಡೆವ ಮನ ನನಗಿದೆ...ಕವಿತೆಗಳ ಜಪಿಸಿ ಒಪ್ಪಿಸಿ ನನಗಾಗಿ ನೀ ಹಾಡದೆ ಇದ್ದರೂ ...ನಿನ್ನ ಮನದಲ್ಲಿ ನಾನಿರುವೆ ಎಂದು ತಿಳಿದಿದ್ದೇನೆ ...ನನಗಾಗಿ ಸಮಯ ನೀಡದೆ ಇದ್ದರೂ..ನಾ ಕೇಳಿದರೆ ಇಲ್ಲ ಎನ್ನಲಾರೆ ಎಂದೂ ಗೊತ್ತಿದೆ...ಎಲ್ಲರ ನಡುವೆ ಕೂಡ ನಾ ನಿನ್ನ ನೆನೆವೆ ಎಂದು ನಿನಗೂ ತಿಳಿದಿದೆ.... ಅದಕ್ಕೆ....ನಿನ್ನ ನೋಯಿಸಲಾರೆ...ನಿನ್ನ ಬದಲಿಸ ಬಯಸಲಾರೆ...ನಿನ್ನಿಂದ ಸಾದ್ಯವಿರದ ಏನನ್ನು ಕೇಳಲಾರೆ...(ಸಮಯವನ್ನು ಕೂಡ) ಏನೇ ಆದರೂ...ಕೊನೆಗೆ ನೀನೇ ಬಂದು ನಗಿಸಿದಾಗ ನಗುವೇ....ನೀ ತಪ್ಪು ಮಾಡಿದಾಗ ಕಿರಚಿ ಪರಚಿ ಅಳುವೇ..(!!), ನೀನಿಲ್ಲದೆ ಇದ್ದಾಗ ನಿನ್ನ ಮಿಸ್ ಮಾಡಿಕೊಳ್ಳುವೆ.....ಯಾಕೆ ಅಂದ್ರೆ ನಾವಿಬ್ಬರು ಹುಲುಮಾನವರೇ ಹೊರತು ದೇವ ಮಾನವರಲ್ಲ...ಅಲ್ಲವೇ...ನಿನ್ನ ಜೊತೆಯಿಂದ ನಾನು ಬೆಳೆದಿದ್ದೇನೆ ಗೆಳೆಯ .....ಬದುಕು ಬರಿ ಅರ್ಥೈಸಿಕೊಳ್ಳುವಿಕೆ...ಹಂಚಿಕೊಳ್ಳು
ಕಣ್ಣ ಹನಿ ಕೆಳ ಜಾರುವ ಮೊದಲೇ...
ReplyDeleteಮೊಗದಲ್ಲಿ ನಗುವ ಅರಳಿಸಬಲ್ಲವ ನೀನಾದರೆ...
ಪರಸ್ಪರ ನಂಬಿಕೆಯ ಪರಾಕಾಷ್ಠೆ...
ಅರಿತು ಬಾಳುವ
ಸತಿ-ಪತಿಗೆ
ಜೀವನ ನವ-ನವೀನ....