ಕೆಲವೊಮ್ಮೆ ಹೀಗೂ ಅನಿಸುತ್ತದೆ ಗೆಳೆಯ...ಇಂತಹ ಒಂದು ಸಮಯದಲ್ಲಿ ನೀನು ನನ್ನ ಬಳಿ ಇರಬೇಕೆಂದು...ಕೆಲವೇ ಕ್ಷಣಗಳಾದರೂ ನನ್ನ ತಲೆ ನಿನ್ನ ಎದೆಯ ಮೇಲಾನಿಸಬೇಕೆಂದು ..ನಿನ್ನ ಬಾಹುಗಳು ನನ್ನ ಸುತ್ತುವರಿದಿರಬೇಕೆಂದು...ನಿನ್ನ ಕೈಗಳು ನನ್ನ ಬಿಚ್ಚ್ಚಿ ಬಿದ್ದ ಮುಡಿಯ ಸವರುತ್ತಿರಬೇಕೆಂದು...ನಿನ್ನ ಉಸಿರು ನನ್ನ ನೆತ್ತಿಯ ಸೋಕುತ್ತಿರಬೇಕೆಂದು ..ನಿರಾಳ ನಿಶಬ್ದದ ನಡುವೆ....ಹೇಳದೆಯೂ...ಕೇಳದೆಯೂ ಎಲ್ಲಾ ಮಾತು ಆಡಿದಂತೆ... ಅರಿತಂತೆ ಅನಿಸಿ...ಮನದ ಭಾರವೆಲ್ಲ ಇಳಿದು ಹೋದಂತೆನಿಸಿ...ಮತ್ತೀನು ಬೇಡ ಎಂಬಂತೆ...ಅನಂತದಲ್ಲಿ...ಅನಂತವಾಗಿ...
))))

No comments:
Post a Comment