ಚಿಕ್ಕವಳಿದ್ದಾಗ ಅಮ್ಮ ಕಥೆ ಹೇಳ್ತಾ ಇದ್ರು . ಒಂದು ಪಕ್ಕ ನಾನು ಒಂದು ಪಕ್ಕ ತಮ್ಮ ಮಲಗಿ ಕಥೆ ಕೇಳ್ತಾ ಇದ್ವಿ. ಏನೇನೋ ಕಥೆಗಳು ಮಹಾಭಾರತ, ರಾಮಾಯಣ ಗಳಿಂದ ಹಿಡಿದು, ಸಾಲೊಮನ್ ಕಥೆಗಳು, ಶಕುಂತಲೆಯ ಕಥೆ, ಈಸೋಪನ ನೀತಿಕಥೆ, ಅಕ್ಬರ್ ಬೀರಬಲ್ ಕಥೆ, ತೆನಾಲಿರಾಮನ ಕಥೆ ಇನ್ನು ಅದೆಷ್ಟೋ ..ನಮ್ಮ ವಯಸ್ಸಿಗೆ ಅನುಗುಣವಾಗಿ ಕಥೆಯನ್ನ ಒಂದಷ್ಟು modify ಮಾಡಿ ಹೇಳ್ತಾ ಇದ್ಲು ಅಮ್ಮ. ದಿನಕೊಂದು ಕಥೆ, ಅಮರಚಿತ್ರ ಕಥೆ, ಬಹದ್ದೂರ್, ಪ್ಯಾಂಟಮ್ , ಹೀಗೆ ಒಂದಷ್ಟು ಚಿತ್ರಕಥೆಗಳ ಪುಸ್ತಕಗಳು . ಓದೋ ಹುಚ್ಚು ಬೆಳೆದಿದ್ದೆ ಆಗ ..ಅದೆಷ್ಟೋ ಕಥೆಗಳ ಪಾತ್ರಗಳಲ್ಲಿ ನಮ್ಮನ್ನೇ ಪಾತ್ರಧಾರಿಗಳಾಗಿಸಿಕೊಂಡು ನಾನು ತಮ್ಮ ಆಟ(ಜಗಳ )ವಾಡಿದ್ದೂ ಉಂಟು
ಅದರಲ್ಲಿ ಒಂದು ಕಥೆ ಇದು. ಒಂದೂರಲ್ಲಿ ಒಬ್ಬ ಗಂಡ ಹೆಂಡತಿ. ಒಬ್ಬರನ್ನ ಕಂಡ್ರೆ ಒಬ್ಬರಿಗೆ ಪ್ರಾಣ. ಇಬ್ಬರು ದಿನ ದುಡಿದು ಬಂದ ಹಣದಲ್ಲಿ ಚೆನ್ನಾಗಿ ಇರ್ತಾರೆ. ಒಂದ್ ಸಾರಿ ಅವ್ರ ಮದ್ವೆ ವಾರ್ಷಿಕೋತ್ಸವ ಬರುತ್ತೆ . ಆಗ ಗಂಡ ಅವನ ಹೆಂಡತಿಯ ಉದ್ದನೆಯ ಜಡೆಗೆ ಒಂದು ಚೆಂದನೆಯ ಮುತ್ತಿನ ಕ್ಲಿಪ್ ತರ್ತಾನೆ . ಇವಳು ಗಂಡನ ಗಡಿಯಾರಕ್ಕೆ ಸ್ಟ್ರಾಪ್ ತರ್ತಾಳೆ . ಇಬ್ಬರು ಬಂದು ಅವರ ಉಡುಗೊರೆಗಳ ತೋರಿಸ್ತಾರೆ. ಹೆಂಡತಿ ತಂದ ಉಡುಗೊರೆ ನೋಡಿ ಗಂಡ ಪೆಚ್ಚದರೆ ಇವನ ಉಡುಗೊರೆ ನೋಡಿ ಇವಳು ಪೆಚ್ಚಾಗುತ್ತಾಳೆ. ಇವಳು ತನ್ನ ಉದ್ದನೆಯ ಜಡೆಯನ್ನ ಮಾರಿ ಗಂಡನಿಗೆ ಗಡಿಯಾರದ ಸ್ಟ್ರಾಪ್ ತಂದಿದ್ದರೆ , ಇವನು ತನ್ನ ಗಡಿಯಾರ ಮಾರಿ ಹೆಂಡತಿ ಎಂದೋ ಆಸೆ ಪಟ್ಟ ಮುತ್ತಿನ ಕ್ಲಿಪ್ ತಂದಿರ್ತಾನೆ .. ಮತ್ತೆ ಇಬ್ಬರು ನಕ್ಕುಬಿಡ್ತಾರೆ .. ಹೀಗೆ ಇನ್ನು ಜಾಸ್ತಿ ಪ್ರೀತಿಯಲ್ಲಿ ಸುಖವಾಗಿ ಇರ್ತಾರೆ ..( ಇದು The Gift of the Magi by O. Henry ಕಥೆ) . ಅಮ್ಮನ ಬಾಯಲ್ಲಿ ಅದೆಷ್ಟೋ ಸಾರಿ ಕೇಳಿದ್ದಿನೋ ಗೊತ್ತಿಲ್ಲ . ಮನಸಲ್ಲೇ ಉಳಿದು ಬಿಟ್ಟಿದೆ .. ಸಂಜೆ ಈ ಹಾಡು ಕೇಳ್ತಾ ಇದ್ದೆ .. ಅಮ್ಮ ಹೇಳಿದ ಕಥೆ ನೆನಪಿಗೆ ಬಂತು Some memories dont die:))))https://www.youtube.com/watch?v=ty55I66-Mrk

No comments:
Post a Comment