ಕುರುಕ್ಷೇತ್ರ ಯುದ್ದ ಮುಗಿದು ಅದೆಷ್ಟೋ ವರ್ಷಗಳ ನಂತರ, ಎಲ್ಲಾ ತಣ್ಣಗಾಗಿ ಅವರವರ ಕೆಲಸದಲ್ಲಿ ಇದ್ದಾಗ , ಕೃಷ್ಣ ಏಕಾಂತದಲ್ಲಿದ್ದಾಗ ಒಂದು ದಿನ ಅರ್ಜುನ ಬರ್ತಾನೆ.
'ಬಾ ಅರ್ಜುನ ಏನ್ ವಿಷ್ಯ ' ಅಂತಾನೆ ಕೃಷ್ಣ.
ಅರ್ಜುನ "ದೇವ ನಿನ್ನ ಹತ್ತಿರ ಕೇಳಬೇಕು ಅಂತ ಅದೆಷ್ಟೋ ಪ್ರಶ್ನೆಗಳು ವರುಷಗಳಿಂದ ಹಾಗೆ ಇದೆ. ಈವತ್ತು ನನಗೆ ಉತ್ತರ ಬೇಕು " ಅಂತಾನೆ .
ಕೃಷ್ಣ 'ಅದೇನು ಕೇಳು ಪಾರ್ಥ ' ಅಂತಾನೆ .
ಅರ್ಜುನ ಶುರು ಮಾಡ್ತಾನೆ "ಪರಮಾತ್ಮ,, ನೀನು ನಮಗೆ ಅತ್ಯಂತ ಆಪ್ತನಾಗಿದ್ದೆ.ನಾವೂ ನಿನ್ನನ್ನು ತುಂಬಾ ನಂಬಿದ್ದೆವು. ಆದರೆ ಬಹಳಷ್ಟು ಸಾರಿ ಬೇಕೆಂದಾಗ ನೀನು ನಮ್ಮ ಕೈ ಹಿಡಿಯಲಿಲ್ಲ . ಧರ್ಮರಾಯ ಜೂಜಾಡುವುದ ತಪ್ಪಿಸಬಹುದಿತ್ತು , ನೀ ತಪ್ಪಿಸಲಿಲ್ಲ. ದಾಳ ನಮ್ಮ ಕಡೆ ಉರುಳಿಸಲು ಯತ್ನಿಸಲೂ ಇಲ್ಲ.ಅಣ್ಣ ಸೋಲುತ್ತಾ ತಮ್ಮ೦ದಿರ , ಹೆಂಡತಿಯ ಪಣ ಇಡುವಾಗ ಕೂಡ ನೀ ಅಡ್ಡ ಬರಲಿಲ್ಲ. ದ್ರೌಪದಿ ನಿನ್ನ ಅಣ್ಣ ಅಂತ ಅದೆಷ್ಟು ಪ್ರೀತಿಸ್ತಾ ಇದ್ಲು; ಆದರು ನೀ ಅವಳ ವಸ್ತ್ರಾಪಹರಣ ಆಗೋವರೆಗೂ ನೀ ಸಹಾಯಕ್ಕೆ ಬರಲಿಲ್ಲ . ಸಭೆಯಲ್ಲಿ ಅವಳ ಎಳೆದಾಡಿದಾಗಲೂ ನಿನಗೆ ಕನಿಕರ ಬರಲಿಲ್ಲ ... ನಾವು ನಿನ್ನನ್ನ ಗೆಳೆಯ ಅಂತ ನಂಬುತ್ತಲೇ ಬಂದೆವು . ನೀನು ಯಾವ ಆಪತ್ಭಾಂಧವ?? ನಾವು ನಾಚಿ ತಲೆ ತಗ್ಗಿಸಿದಾಗ ಕೂಡ ಬರದವ !!!?"
ಕೃಷ್ಣ ನಕ್ಕು ಬಿಡ್ತಾನೆ ... ಅರ್ಜುನ ಅವನನ್ನೇ ನೋಡ್ತಾನೆ ವಿಸ್ಮಯದಿಂದ .."ಪಾರ್ಥ, ದುರ್ಯೋಧನನಿಗೆ ಜೂಜು ಅಂದ್ರೆ ಏನು ಅಂತ ಕೂಡ ತಿಳಿದಿರಲಿಲ್ಲ. ಅದಕ್ಕೆ ಅವನು ತನ್ನ ಸೋದರಮಾವನನ್ನ ಕೂರಿಸಿಕೊಂಡ . ಆ ಕಾಲಕ್ಕೆ ಶಕುನಿ ದೊಡ್ಡ ಪಗಡೆ ಆಟಗಾರ . ನಿಮಗೆ ತಿಳಿದಂತೆ ನನಗೂ ಪಗಡೆ ಅಂದ್ರೆ ಪ್ರಾಣ , ಅವರು ಶಕುನಿಯನ್ನ ಕರೆದಂತೆ ನೀವೂ ನನ್ನನ್ನು ಕರೆಯಬಹುದಿತ್ತು, ಶಕುನಿ ನನ್ನ ಮುಂದೆ ಗೆಲ್ಲುತ್ತಲೇ ಇರಲಿಲ್ಲ!! ಆದರೆ ಧರ್ಮರಾಯ ದುರಭಿಮಾನಿ , ನಾನೇ ಗೆಲ್ಲಬಲ್ಲೆ ಅಂತ ಆಡುತ್ತಲೇ ಹೋದ . ಸೋಲುವಾಗ ಕೂಡ ಅವನು ಮನದಲ್ಲೇ 'ಇದು ಕೃಷ್ಣನಿಗೆ ತಿಳಿಯದೆ ಹೋಗಲಿ, ನಮ್ಮ ಬಗ್ಗೆ ಏನು ತಿಳಿದಾನು ನಾ ಹೀಗೆ ಸೋತಾಗ' ಅನ್ನುತ್ತಲೇ ಇದ್ದ, ನಾನಾದರು ಈಗ ಕರಿತಾನೆ ಆಗ ಕರಿತಾನೆ ಯಾರಾದ್ರೂ ಒಬ್ಬರು ಕರೆದರೂ ಸಾಕು ಅಂತ ಕಾಯುತ್ತಲೇ ಇದ್ದೆ. ಯಾರೂ ಕರೆಯಲಿಲ್ಲ. ಇನ್ನು ದ್ರೌಪದಿ ಕೂಡ ಕೋಪ ಅಹಂ ಇಂದ ನನ್ನನ್ನ ಕರೆಯಲೇ ಇಲ್ಲ , ನಿಮ್ಮೆಲ್ಲರಿಂದ ಸಹಾಯ ಬರದಿದ್ದಾಗ ಮಾತ್ರ 'ಅಣ್ಣ' ಅಂತ ನನ್ನ ಕರೆದಳು. ತಕ್ಷಣ ಬಂದು ವಸ್ತ್ರ ನೀಡಿದೆ . ಅರ್ಜುನ, ನಾ ಯಾವಾಗ್ಲೂ ಅಲ್ಲೇ ಇದ್ದೆ ನೀವೇ ನನ್ನ ಕರೆಯಲಿಲ್ಲ, ಕರೆದಾಗೆಲ್ಲ ಬಂದಿದ್ದೇನೆ " ಅಂದ
"ಹಾಗಾದ್ರೆ ಕರೆಯದೆ ಇದ್ರೆ ನಿನ್ನವರಿಗೆ ನೀನು ಸಹಾಯವನ್ನೇ ಮಾಡೋದಿಲ್ವ ಕೃಷ್ಣ!!!??"
"ಅರ್ಜುನ, ಮನುಷ್ಯ ಹಾಗು ಅವನಿಗೆ ಸಂಭವಿಸೋ ಎಲ್ಲಾ ಘಟನೆಗಳೂ ಅವನದೇ ಕ್ರಿಯೆಗಳ, ಒಳ್ಳೆತನ ಕೆಟ್ಟತನ , ದುರಭಿಮಾನ , ಹೊಂದಾಣಿಕೆ, ಪ್ರೀತಿ, ಸ್ವಾರ್ಥ, ಆಸೆ, ಹಾಗು ಅವನದೇ ಸ್ವಭಾವಗಳ ಪ್ರತಿಫಲ . ನನಗೆ ಯಾವುದನ್ನು ನಡೆಸೋ ಹಾಗು ನಿಲ್ಲಿಸೋ ಹಕ್ಕಿಲ್ಲ . ಎಲ್ಲಕ್ಕೂ ಸಾಕ್ಷಿಯಾಗಿರುತ್ತೇನೆ ಅಷ್ಟೇ" ಅಂದ
'ಅದರಿಂದ ನಮಗೇನು ಉಪಯೋಗ ಪರಮಾತ್ಮ , ನಾವು ನಮ್ಮದೇ ಕೆಟ್ಟ ಸ್ವಾರ್ಥ, ಮೋಸಗಳಿಂದ ಕಡೆಗೆ ಕುರುಕ್ಷೀತ್ರಗಳಿಗೆ ದಾರಿ ಮಾಡುತ್ತೀವಲ್ಲ , ಅದಕ್ಕೂ ನೀ ಮೂಕ ಸಾಕ್ಷಿ ಆಗಿರೋದಾದರೆ ಮತ್ತೆ ನೀ ಯಾಕೆ!!?"
ಕೃಷ್ಣ ನಕ್ಕ" ಅರ್ಜುನ, ನಾ ಇದ್ದೀನಿ ಅಂತ ಎಲ್ಲಾರಿಗೂ ಅರಿವಿದ್ದ ಮೇಲೆ ಯಾರೂ ಇಂತಹ ಕುಕೃತ್ಯಗಳ ಮಾಡೋದಿಲ್ಲ . ನನ್ನನ್ನ ಮರೆತಾಗಲೇ ಅಥವ ಮರೆತಂತೆ ನಟಿಸಿದಾಗಲೇ ಇವೆಲ್ಲಾ ಘಟಿಸೋದು' ಅಂದ !!!!!
ಹೌದೇನೋ ಅಲ್ವೇ

No comments:
Post a Comment