Saturday, 5 December 2015

ಬಹಳಷ್ಟು ಸಾರಿ ಹೀಗಾಗುತ್ತೆ . ನಾವು ತುಂಬಾ ಪ್ರೀತಿಸೋರು ಏನೋ ಕೇಳ್ತಾರೆ , ನಾವು ಅದನ್ನ ಒಪ್ಪಿಕೊಳ್ಳೋದಿಲ್ಲ , ಹೋಗ್ಲಿ ಬಿಡಮ್ಮ ನಿನಗೆ ಇಷ್ಟ ಇಲ್ದೆ ಇದ್ರೆ ಬೇಡ ಬಿಡು ಅಂತ 'ಒಂದ್ ತರಾ ' ಹೇಳ್ತಾರೆ, ನಾವು ಅದಕ್ಕೆ ಕರಗಿ ಹೋಗಿ 'ಹೋಗ್ಲಿ ಬಿಡು ಮಾಡ್ತೀನಿ, ಹೋಗ್ಲಿ ಬಿಡು ಬರ್ತೀನಿ , ಬೇಡ ಬಿಡು ನೀ ಹೇಳಿದ್ದೆ ಆಗ್ಲಿ' ಅಂತೆಲ್ಲಾ ಅವರು ಹೇಳಿದಕ್ಕೆ ಒಪ್ಪಿಬಿಡ್ತಿವಿ ಕೆಲವೊಮ್ಮೆ ಅಭಿಮಾನಕ್ಕೆ ನೋವಾದ್ರು ಹಾಗೆ 'ಸಾವರಿಸಿಕೊಂಡು' ಬಿಡ್ತೀವಿ . 'ಪ್ರೀತಿಗಾಗಿ , ಪ್ರೀತಿಸುವವರಿಗಾಗಿ ತಾನೇ ಬಿಡು, ಖುಷಿ ಇದ್ರೆ ಸರಿ ' ಅಂತ ಅಂದ್ಕೊಳ್ತಾ ಹೋಗ್ತೀವಿ. ನಾನಂತೂ ಬಹಳ ಸಾರಿ ಹೀಗೆ ಮನೆಯವರಿಗಾಗಿ ಅಂತಲೋ , ಪ್ರೀತಿಸುವವರಿಗಾಗಿ ಅಂತಲೋ , ಅವರೇನು ಬೇರೆಯವರ ಬಿಡು ಅಂತಲೋ , ಸುಮ್ಸುಮ್ನೆ ಯಾಕೆ ಅನಗತ್ಯ ಕಿರಿಕಿರಿ ಅಂತಲೋ , ಕಟ್ಟು ಬೀಳ್ತೀನಿ.
ಮೊನ್ನೆ ಹೀಗೆ ಒಂದ್ functionge ಹೋಗಬೇಕಿತ್ತು . ನನಗೆ ಇಷ್ಟ ಇರಲಿಲ್ಲ ಸರಿ ಮಂಜುಗೆ ಹೇಳ್ದೆ 'ನೀ ಹೋಗ್ಬಾ ಪ್ಲೀಸ್'. ಮಂಜು ಎಂದಿನಂತೆ 'ನೀ ಬರದೆ ಇದ್ರೆ ನಾನೂ ಹೋಗೋದಿಲ್ಲ ಬಿಡಮ್ಮ ' ಅಂತ ಅಂದ್ರು ಸಪ್ಪಗೆ . ತುಂಬಾ ಇಕ್ಕಟಿನ ಹಿಂಸೆ . ಪುಟ್ಟಿ ಪಕ್ಕದಲ್ಲೇ ಇದ್ಲು . ಥಟ್ ಅಂತ 'ಬೇಡ ಬಿಡಪ್ಪ ಯಾರೂ ಹೋಗೋದು , ಅವರು ಮಾಡಿರೋದು ಅಷ್ಟರಲ್ಲೇ ಇದೆ. ಅಮ್ಮನಿಗೆ ಮನಸ್ಸಿಗೆ ಹಿಂಸೆ ಅಂದ್ರೆ ಯಾಕೆ ಹೋಗೋದು' ಅಂದ್ಲು . ಮಂಜು ಮುಖ ಒಮ್ಮೆಲೇ ಒಂದ್ ತರ ಆಗಿಹೋಯ್ತು . ಹೋಗದೆ ಇರುವಂತಿಲ್ಲ ಬಿಡುವಂತಿಲ್ಲ ಅನ್ನೋ ಹಾಗೆ 'ಅಲ್ಲ ಕಣಪ್ಪ ನಿನಗೆ ಇಷ್ಟ ಇದ್ರೆ ಹೋಗಿ ಬಾ , ಯಾವಾಗ್ಲೂ ಹಿಂಗೆ ಅಮ್ಮನ್ನ ಯಾಕೆ ಸೆಂಟರ್ ಅಲ್ಲಿ ತರ್ತೀಯ' ... ಪರಿಸ್ಥಿತಿಯ ತುಂಬಾ ಜಟಿಲವಾಗೋದು ಬೇಡ ಅಂತ ನಾನೇ 'ಬಿಡು ಪುಟ್ಟಿ ಹೋಗ್ಬರ್ತೀನಿ 'ಅಂದೆ. ಪುಟ್ಟಿ 'ನೀ ಉದ್ದಾರ ಆಗೋದಿಲ್ಲ ಬಿಡು ನೀನು ನಿನ್ ಗಂಡನ ಕಡೆನೇ ಯಾವಾಗ್ಲು , ನಾವ್ ಹಿಂಗೆಲ್ಲ ಆಗೋದಿಲ್ಲ ಬಿಡು' ಅಂದ್ಲು
ತಪ್ಪೋ ಸರಿಯೋ ಗೊತ್ತಿಲ್ಲ .... ಆದ್ರೂ ಕೆಲವೊಮ್ಮೆ, ಕೆಲವೊಂದು ಬಂಧುತ್ವ ಉಳಿಸಿಕೊಳ್ಳಲು ನಾವೇ (ಮಂಜು ಮತ್ತು ನಾನು)ಕಮಿಟ್ ಆಗ್ತಾ ಹೋಗ್ತೀವಿ . ಇಷ್ಟವಿರಲಿ ಬಿಡಲಿ ಹೊಂದಿಕೊಂಡು ಹೋಗ್ತೀವಿ.... ಅಭಿಮಾನಕ್ಕೆ ಪೆಟ್ಟಾಗೋವರೆಗೂ ...ಪೆಟ್ಟಾದರೆ ಹಗ್ಗ ಕಿತ್ತು ಬೀಸಡೋದೇ
ಬದುಕೇ ಹಾಗೆ ಬಿಸಿಲು ಮಳೆಯ ಹಾಗೆ................

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...