Tuesday, 14 February 2017

ಆ ಮರದ ಕೆಳಗಿನ 
ಆ ದೇವರ ನೋಡಿದೆಯ ಗೆಳೆಯ 
ಅದ್ಯಾರ ಮನೆಯಲ್ಲಿ 
ಅದೆಷ್ಟು ದಿನ 
ಅದೆಷ್ಟು ವಿಜೃಂಭಣೆಯಿಂದ 
ಪೂಜೆಗೊಳಗಾಗಿದ್ದನೋ
ಅದೆಷ್ಟು ವರ ನೀಡಿದ್ದನೋ
ಅದೆಷ್ಟು ನೈವೇದ್ಯ ತಿಂದಿದ್ದನೋ ಏನೋ
ಭಿನ್ನಗೊಂಡಿದ್ದಾನೆ ಎಂದು
ತಂದು ಇಲ್ಲಿ ಬಿಟ್ಟಿದ್ದಾರೆ ನೋಡು
ನಾವು ಜೋಪಾನವಾಗಿರಬೇಕೆನಿಸುತ್ತಿದೆ ಗೆಳೆಯ
ಭಿನ್ನವಾಗಿ ಬಿಟ್ರೆ
ನಮ್ಮ ಗತಿಯೂ ದೇವರದೇ ಗತಿ ಅಲ್ವೇ :)))))))

No comments:

Post a Comment

ೆಯಲ್ಲಿ ಒಂದು ಪುಟ್ಟ ಹುಡುಗಿ, ಕಾರ್ತಿಗಿಂತ ಒಂದ್ಮೂರು ವರ್ಷ ದೊಡ್ಡವಳೇನೋ, ಶಾಲೆಗೆ ಹೋಗುವಾಗ ದಿನಾ ಮಾತನಾಡಿಸ್ತಾ ಇದ್ದೆ. ಒಂದೆರಡು ತಿಂಗಳುಗಳ ನಂತರ ಗಾಡಿಯಲ್ಲಿ ನ...