ಈ ಫೇಸ್ಬುಕ್ ಗೆ ಬಂದ ಹೊಸದರಲ್ಲಿ ಸುಮಾರು ಒಂದು ವರ್ಷ ನನ್ನ ಚಿತ್ರ ಹಾಕಿರಲಿಲ್ಲ . ನನ್ನ ಬಗ್ಗೆ ನನಗೆ ಎಷ್ಟೇ ಆತ್ಮ ವಿಶ್ವಾಸವಿದ್ದರೂ , ವೃತ್ತಿ ಪ್ರವೃತ್ತಿಯ ಬಗ್ಗೆ ಹೆಮ್ಮೆ ಇದ್ದರೂ ನನ್ನ ಕತ್ತಿನಲ್ಲಿರೋ ಆ ಕಲೆಯ ಬಗ್ಗೆ ಒಂದು ಕಾಂಪ್ಲೆಕ್ಸ್ ಇತ್ತು . ಮನೆಯವರೆಲ್ಲ, ನನ್ನವರೆಲ್ಲಾ, ನನ್ನ ಗೆಳೆಯ ಗೆಳತಿಯರೆಲ್ಲ, ನನ್ನ ಮಕ್ಕಳೆಲ್ಲಾ ನನ್ನನ್ನ accept ಮಾಡಿಕೊಂಡಿದ್ದರೂ ಈ ಫೇಸ್ಬುಕ್ ಅನ್ನೋ ಮಾಯಾಪ್ರಪಂಚ ನನ್ನನ್ನ ಹೇಗೆ ಕಾಣುತ್ತದೋ ಅನ್ನುವ "ಭಯ"ವಿತ್ತು . ಬಂದ ಹೊಸದರಲ್ಲಿ ಗೆಳತಿಯೊಬ್ಬಳು ನಿನ್ನ ಚಿತ್ರ ಕಳಿಸು ಆಗ್ಲೇ ನೀನು ಹುಡುಗಿ ಅಂತ ನಂಬೋದು ನಿನ್ನ ಬಳಿ ಏನಾದ್ರು ಹಂಚಿಕೊಳ್ಳೋದು ಅಂದಾಗ ಒಂದ್ ತರ ಅನಿಸಿತ್ತು ...ಕಡೆಗೊಂದು ದಿನ ನನ್ನನ್ನ ನಾನಿರುವ ಹಾಗೆ accept ಮಾಡಿಕೊಳ್ಳುವವರಿದ್ರೆ ಗೆಳೆತನ ಉಳಿಯಲಿ.. ಇಲ್ಲ ಅಂದ್ರೆ ಅವರರವರ ಭಾವಕ್ಕೆ ಸೇರಿದ್ದು ಅಂತ ಚಿತ್ರ ಹಾಕಿದೆ...
ಪ್ರಾಪಂಚಿಕವಾಗಿ ತುಂಬಾ ಕಡಿಮೆ ಜನ ಸ೦ಪರ್ಕ ಹೊಂದಿದ್ದ ನನಗೆ ಈ ಫೇಸ್ಬುಕ್ ಒಂದಷ್ಟು ಪ್ರಪಂಚ ಜ್ಞಾನ ಕಲಿಸಿತು .. ರೂಪ, ಅಂತಸ್ತು, ವಯಸ್ಸು, ಉದ್ಯೋಗಗಳ ಎಲ್ಲೇ ಮೀರಿ ಪ್ರೀತಿ ಗೆಳೆತನ ನೀಡಿದ ಫೇಸ್ಬುಕ್ ಬಗ್ಗೆ ಧನ್ಯತೆ ಇದೆ... ಗೆಳೆಯ ಗೆಳತಿಯರ ಬಗ್ಗೆ ಪ್ರೀತಿ ಇದೆ ಗೌರವ ಇದೆ
:))) ಅವರೂ ಕೂಡ ಅಷ್ಟೇ ವಿಶ್ವಾಸ ತೋರಿದ್ದಾರೆ ಪ್ರೀತಿಸಿದ್ದಾರೆ ...
ಗೆಳತಿಯೊಬ್ಬರು ನಿಮ್ಮ ಕತ್ತಿನಲ್ಲಿ ಕಲೆ ಕಾಣುವಂತೆ ಚಿತ್ರ ಹಾಕಬೇಡಿ ಅಂದ್ರು... ಅಂದಾಗಿದ್ರೆ ಏನೋ ಗೊತ್ತಿಲ್ಲ ... ಇಂದು ನಕ್ಕುಬಿಟ್ಟೆ ....
And I smile as ever....I am proud of myself for winning all what life gave me
:)))
ಪ್ರಾಪಂಚಿಕವಾಗಿ ತುಂಬಾ ಕಡಿಮೆ ಜನ ಸ೦ಪರ್ಕ ಹೊಂದಿದ್ದ ನನಗೆ ಈ ಫೇಸ್ಬುಕ್ ಒಂದಷ್ಟು ಪ್ರಪಂಚ ಜ್ಞಾನ ಕಲಿಸಿತು .. ರೂಪ, ಅಂತಸ್ತು, ವಯಸ್ಸು, ಉದ್ಯೋಗಗಳ ಎಲ್ಲೇ ಮೀರಿ ಪ್ರೀತಿ ಗೆಳೆತನ ನೀಡಿದ ಫೇಸ್ಬುಕ್ ಬಗ್ಗೆ ಧನ್ಯತೆ ಇದೆ... ಗೆಳೆಯ ಗೆಳತಿಯರ ಬಗ್ಗೆ ಪ್ರೀತಿ ಇದೆ ಗೌರವ ಇದೆ

ಗೆಳತಿಯೊಬ್ಬರು ನಿಮ್ಮ ಕತ್ತಿನಲ್ಲಿ ಕಲೆ ಕಾಣುವಂತೆ ಚಿತ್ರ ಹಾಕಬೇಡಿ ಅಂದ್ರು... ಅಂದಾಗಿದ್ರೆ ಏನೋ ಗೊತ್ತಿಲ್ಲ ... ಇಂದು ನಕ್ಕುಬಿಟ್ಟೆ ....
And I smile as ever....I am proud of myself for winning all what life gave me

No comments:
Post a Comment