ಮಳೆಯಾಗುತ್ತಿದೆ.....
ನಾ ಬೆಳೆಸಿದ ಗಿಡಗಳು ನಗುತ್ತಿವೆ
ಹನಿಹನಿಯನ್ನು ಆಸ್ವಾದಿಸುತ್ತಿವೆ
ಹೊಸ ಮದುಮಗಳಂತೆ ಸಂಭ್ರಮಿಸುತ್ತಿವೆ ...
ಕೇಳಿಬಿಡಲೇ ನನ್ನ ಪ್ರಿಯ ಗಿಡಗಳೇ
ಮನದೊಳಗೆ ಮೂಡಿದ ಪ್ರಶ್ನೆಯನ್ನು
ಹೇಳುವಿರೆ ನಿಮ್ಮ ಉತ್ತರವನ್ನು..
ನಾ ನಿಮ್ಮ ಬೆಳೆಸಿದೆ
ನೀರುಣಿಸಿದೆ
ಕಾಪಾಡಿದೆ
ಈ ಮಳೆರಾಯನ ಆಗಮನವಾದೋಡೆ
ಏನು ಉತ್ಸಾಹ
ಏಕಿ ಉಲ್ಲಾಸ
ನನಗಿಂತ ಅವನೇ ಪ್ರಿಯನೇ....
ಸಸಿಗಳು ನಕ್ಕವು...ನಗುತ್ತಲೇ ಇದ್ದವು...
ಎಲ್ಲರ ನಡುವೆಯೂ ಅವನ ನೆನಪಲ್ಲೇ ಮಿಂದೇಳುವ
ನೂರು ದನಿಗಳಿದ್ದರು ಅವನ ಪಿಸುನುಡಿಗೆ ಕಾತರಿಸುವ
ಗಳಿಗೊಮ್ಮೆ ಮನದಲ್ಲಿ ಅವನ ಹೆಸರೇಳಿ ನಗುವ
ತಂಗಾಳಿಗೆ ಹಾರಿದ ಸೆರಗಿನಲ್ಲೂ ಅವನ ಅರಸುವ
ನಿನ್ನ ನೀನು ಕೇಳಿಕೋ ಎಂಬಂತೆ ನಕ್ಕವು ನಗುತ್ತಲೇ ಇದ್ದವು..
ಹನಿಗಿಂತಲೂ ಮಿಗಿಲು ಧಾರೆಯಲ್ಲವೇ.
ReplyDeleteಪದೆ ಪದೆ ಓದಿಗೂ ಹೊಸ ಅರ್ಥಗಳ ಹೊಮ್ಮಿಸುವ ಕವನ ಮೇಡಂ, ಸೂಪರ್