ಅಹಲ್ಯೆ ಎಂದರೆ ರೂಪವತಿಯಂತೆ
ರೂಪ ಎಂದರೆ ಅಪೂರ್ವ ರೂಪ ರಾಶಿಯಂತೆ
ಹೆಸರಿಗೆ ತಕ್ಕಂತಿದ್ದಳು ಆಕೆ
ರೂಪ ಕಂಡು ಮೊಹಿಸಿದ ಎಲ್ಲರಿಗೂ ಆಕೆ ದಕ್ಕಲಿಲ್ಲ
ಆಕೆ ಪ್ರೀತಿಸಿದರವರಾರು ಆಕೆಯನ್ನು ದಕ್ಕಿಸಿಕೊಳಲಿಲ್ಲ
ಪತಿ ಗೌತಮನಂತೆ ...ಬುದ್ಧನಂತೆ...
ಅನ್ವರ್ಥವಾಗಿದ್ದ
ತಿಳಿಗೊಳದಂತೆ ಸಾಗಿದ್ದ ಬದುಕಿಗೆ
ಇಂದ್ರನ ಆಗಮನ....
ಆಕಸ್ಮಿಕವೋ...ಅನುರಾಗವೋ ...ಅವಗಡವೋ..
ಅಹಲ್ಯೆ ಅರಿಯದಾದಳೋ
ಅಥವ..
ಅರಿಯದಂತೆ ಇದ್ದಳೋ !!!!!!
ಗೌತಮ ಅಂದಿನ ಋಷಿಯಲ್ಲ ಅಹಲ್ಯೆಯನ್ನು ಕಲ್ಲಾಗು ಎನ್ನಲು...
ಇಂದ್ರನನ್ನು ಸಹಸ್ರಾಕ್ಷನಾಗು ಎನ್ನಲು ...
ಅವನೇ ಕಲ್ಲಾಗಿಬಿಟ್ಟ ...ಕುರುಡನಾಗಿಬಿಟ್ಟ....
ಈಗ ಅವನೇ ಕಾಯುತಿದ್ದಾನೆ ರಾಮನ ಪಾದಸ್ಪ್ರಷಕ್ಕಾಗಿ ...ಮುಕ್ತಿಗಾಗಿ..
ಆದರೆ ಅಹಲ್ಯೆ ಅದೇ ಮೋಹದ ಬಲೆಯಲ್ಲಿ....
ಎಲ್ಲ ಮರೆತು ಕಣ್ಣಿದ್ದು ಕುರುಡಿಯಾಗಿ
ಇಂದ್ರನೊಡನೆ...ಚಂದ್ರನೊಡನೆ...
ಕಾಲಾಯ ತಸ್ಮೆ ನಮಃ........!!!!!!!!!!
No comments:
Post a Comment