Saturday, 7 May 2011

ಹೇಳಿ ಹೋಗು ಕಾರಣವ ........













ನೀ ಹೊರಟ ಮೇಲೆ ....
ಹೃದಯದ  ಮೂಲೆಯಲ್ಲೆಲ್ಲೋ ಒಂದು ಸಣ್ಣ ಕಂಪನ...
ಮನ ಮಂಜುಗಟ್ಟಿದಂತೆ  
ನೆನಪು, ನೋವು, ಪ್ರೀತಿ ಎಲ್ಲ ಒಟ್ಟಿಗೆ ಉಮ್ಮಳಿಸಿ ಬಂದಂತೆ... 

ಮೌನಿಯಾಗಿ ಹೋಗಲೇ...
ನೂರೊಂದು ನೆನಪುಗಳ ಒಡಲೊಳಗೆ ಬಚ್ಚಿಟ್ಟು..
ಬೆಟ್ಟದಷ್ಟು ನೋವನ್ನು ಹೃದಯದಲಿ ಅಡಗಿಸಿಟ್ಟು ... 
ಸಾಗರದಷ್ಟು ಪ್ರೀತಿಯನು ಮನದಲ್ಲೇ ಕೂಡಿಟ್ಟು..

ನನ್ನ ಮೌನ ನಿನಗೆ ನೋವ ತರದಿದ್ದರೆ...
ನನ್ನ ಪ್ರೇಮ ನಿನಗೆ ಹೊರೆ ಎನಿಸಿದ್ದರೆ..
ನನ್ನಿರವು ನಿನಗೆ ಬೇಡವಾಗಿದ್ದರೆ...
ನಾನು ಚಿರ ಮೌನಿಯಾಗಿ ಬಿಡುವೆ .....

ಆದರೆ....
ಹೇಳಿ ಹೋಗು ಕಾರಣವ ಗೆಳೆಯ....

2 comments:

  1. ಆಹಾ ಅತೀ ಮಧುರ ಪ್ರೀತಿಯ ಭಾವ .. ಒಂದೊಂದು ಪ್ರಶ್ನೆಗೂ ಒಂದೊಂದು ಕಾರಣದ ಉತ್ತರ ಅತ್ಯಗತ್ಯ.. ಪ್ರತೀ ಸಾಲುಗಳೂ ಅರ್ಥಗರ್ಭಿತ ನುಡಿಗಳು.. ನಿಮ್ಮೆಲ್ಲಾ ಮಾತುಗಳಿಗೆ ಆ ನಿಮ್ಮ ಗೆಳಯ ಕಾರಣ ಹೇಳಲೇಬೇಕು... ಅಥವಾ ಉತ್ತರಿಸಲು ಸಾಧ್ಯವಾಗದೆ ಮೌನಿಯಾಗಿ ಎಲ್ಲೂ ಹೋಗದೆಯೇ ನಿಮ್ಮೊಡನೆ ಇದ್ದುಬಿಡಬೇಕು.. ಮನಸ್ಸಿನ ಮಾತು ಮೌನವಾದರೂ ಹೃದಯದ ಪ್ರೀತಿಯ ಶಬ್ಧವಿದ್ದಂತೆ ಸದಾ ತನ್ನ ಕೆಲಸವ ಮಾಡುತ್ತಲೇ ಇರುತ್ತದೆ.. ಭಾವನೆಗಳ ಬಿಚ್ಚಿಟ್ಟ ಪರಿಯು ತುಂಬಾ ಸೊಗಸಾಗಿದೆ.. ಕವನ ಬಹಳಾ ಇಷ್ಟವಾಯಿತು.. :)

    ReplyDelete
  2. ಕವನದ ಜತೆಗೇ ನಮ್ಮನ್ನೂ ಅದರದ್ದೇ ಆದ ಸೀಂಚನದಲ್ಲಿ ಮುಳುಗಿಸಿ ಬಸಿಯುವ ಶಕ್ತಿ ಈ ಕವನದ ಮನದಾಳದ ಅನಿಸಿಕೆಗಳಿಗಿವೆ. ಅದಕ್ಕೇ................... ತುಂಬಾ ಆಪ್ತವಾದಂತಹ ಕವನ

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...