Wednesday, 1 June 2011

ಪಳಿಯುಳಿಕೆ



























ಬಾಗಿಲ ಬಳಿ ಕುಳಿತು ಕಾಯುತ್ತಿದ್ದೇನೆ 
ಪ್ರಿಯಾತಿಪ್ರಿಯರು ಬರುವರೆಂದು...
ನಸುನಕ್ಕು ಮಾತಾಡುವರೆಂದು
ದಿನವೊಂದು ಯುಗದಂತಾಗಿ 
ಕ್ಷಣವೊಂದು ತಾಸಾಗಿ ..
ನಗುವೇ ಮರೆತು ಹೋಗಿ...
ಹೊತ್ತು ಕಳೆಯುತಿಲ್ಲ ನನಗೆ...

ಆ ಕಾಲವೊಂದಿತ್ತು...
ಯುಗಗಳೇ ದಿನಗಳಾಗಿ...
ದಿನವೊಂದು ಕ್ಷಣವಾಗಿ...
ಬದುಕೊಂದು ಬನವಾಗಿ ...
ಇಹ ಪರಗಳ ಸುಖವೆಲ್ಲಾ ಸೂರೆಹೋಗಿ..
ಜಗವೆಲ್ಲ ನಾಕವಾಗಿ...

ಈಗ 
ಕಾಯುತ್ತಲಿದ್ದೇನೆ...
ನಾನು ಬಣ್ಣ ತುಂಬಿದ ಜನರಿಗಾಗಿ...
ನನ್ನಿಂದ ಬೆಳಕ ಪಡೆದವರಿಗಾಗಿ..

ಬರುವರೋ ಬಾರದಿರುವರೋ...

ಬಂದರೂ ಬಾರದಿದ್ದರೂ...
ಕಾಯುತ್ತಲೇ ಇರುವೆ ..

ಏಕೆಂದರೆ..
ಇಂದಲ್ಲ ನಾಳೆ ಅವರೇ ಬರುವರೆಂದು ..

ನನಗಾಗಿಯಲ್ಲ....
ನನ್ನಂತೆ.
ನಸುಕು ಸಂಜೆಯಾದಂತೆ...
ವಯಸ್ಸು ಜಾರಿದಂತೆ...
ಬೆನ್ನು ಬಾಗಿದಂತೆ ...
ವೃದ್ಧಾಶ್ರಮಕ್ಕೆ ...
ನನ್ನಂತೆ....ಪಳಿಯುಳಿಕೆಯಾಗಿ......!!

1 comment:

  1. ಕಾಯುವುದು ಶಬರಿಗೆ ಅನಿವಾರ್ಯ ಕರ್ಮ! ಹಾಗಿದೆ ಇಲ್ಲಿ.

    ಮತ್ತೊಂದು ಉತ್ತಮವಾದ ಕವನ ಮೇಡಮ್. ಭಾಷೆಯನ್ನು ಲಾಲನೆಯಿಂದ ಬಳಸಿದ್ದೀರಿ, ಕೃತಿಮತೆ ಇಲ್ಲ ಅಥವಾ ಯಾರನ್ನಾದರೂ ಒಪ್ಪಿಸುವ ಉಮೇದಿಯೂ ಇಲ್ಲ! ಪೂರ್ಣ ಸ್ವಗತ ಶೈಲಿ.. ಶಬಾಷ್...

    ಅಂದ ಹಾಗೆ, ಹೀಗೆ ಕಾಯುವವರೂ ಇದಾರ ಇಂದಿನ ಜಟ್ ವೇಗದಲ್ಲಿ?

    Pl. visit my blogs:
    www.badaripoems.wordpress.com
    www.badari-poems.blogspot.com
    www.badari-notes.blogspot.com
    Ur comments are pathfinder to me.

    Pl. catch me at Facebook:
    Profile : Badarinath Palavalli

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...