ಆ ರುದ್ರ ರಮಣೀಯ ಶರಧಿಯಲ್ಲಿ
ನಾನೊಂದು ಪುಟ್ಟ ಕಪ್ಪೆಚಿಪ್ಪಾಗ್ಗಿದ್ದೆ .
ಕಾಲ ಹಾಗು ಅಲೆಗಳ ಹೊಡೆತಕ್ಕೆ ತತ್ತರಿಸಿದ್ದೆ...
ಸಮುದ್ರ ರಾಜನ ಒಡಲಲ್ಲಿ ನನ್ನಂತಹ ಅಸಂಖ್ಯ ಚಿಪ್ಪುಗಳು...
ಅಲ್ಲೇ ಹುಟ್ಟಿ ..ಅಲ್ಲೇ ಇದ್ದು,.ಅಲ್ಲೇ ಅಂತ್ಯ ಕಾಣುವ
ನೂರಾರು ಜೀವಿಗಳು..
ನನ್ನೊಡಲ ಸೇರಿ ಬಿಟ್ಟಿತು..
ಏನೋ ರೋಮಾಂಚನ ...
ಏನೋ ಹಿತವಾದ ಭಾವ...
ನನ್ನ ಧೂಳು ಹಿಡಿದ ಮೇಲ್ಮೈಯನ್ನು ಕೊಡವಿತು..
ನನ್ನ ಮನದ ತುಕ್ಕನ್ನು ಒರೆಸಿಬಿಟ್ಟಿತು...
ಈಗ ನಾನು ಅಸಂಖ್ಯ ಚಿಪ್ಪುಗಳಲ್ಲಿ ಒಬ್ಬಳಲ್ಲ....
ರಾಗ ರಂಗು ತುಂಬಿರುವ ಸ್ವಾತಿಹನಿಯ ಚಿಪ್ಪು...
ಸಾಗರ ಗರ್ಭದಲ್ಲಿದ್ದರೂ ಸಾರ್ಥಕ್ಯ ಪಡೆದ ಮುತ್ತಿನ ಚಿಪ್ಪು...
ಎಂದಾದರೂ...ಎಲ್ಲಾದರೂ...ಹೇಗಾದರೂ...
ಚಿಪ್ಪಿನೊಳಗಣ ಮುತ್ತು
ಆ ಪ್ರೀತಿ ಹನಿ ಹಾಕಿದ ಒಡೆಯನಿಗೆ
ಸಮರ್ಪಿಸಿ ಋಣಮುಕ್ತಳಗುವ ಬಯಕೆ...
No comments:
Post a Comment