Thursday 12 May 2011

ಆಕೆ ಈತ ಸೇರಿ ಅವರು..




















ಆಕೆ....
ಹೊಸ ಪುಸ್ತಕವಾಗುವ ಬಯಕೆ ಆಕೆಗೆ
ಮತ್ತೊಮ್ಮೆ ಶುರು ಮಾಡಲೇ ಮೊದಲಿನಿಂದ ಎಂದ ಮೊಗದಲ್ಲಿ ಹೊಸ ಚಿಗುರಿನ ಕಳೆ
ಹಳೆಯದನ್ನು ಮರೆತು ಬಿಡುವೆ ಎಂದವಳ ದನಿಯಲ್ಲಿ ಹೊಸ ರಾಗ
ಅವನಿಗಾಗಿ ನಾನು...ನನಗಾಗಿ ಅವನು ಎಂದವಳ ನಗುವಿನಲ್ಲಿ ನವೋಲ್ಲಾಸ...

ಈತ...
ಹೊಸ ಹೊತ್ತಗೆಯಾಗುವ ಮನ ಹೊತ್ತವ
ಮತ್ತೊಮ್ಮೆ ಹೊಸ ಬದುಕ ಕಟ್ಟುವೆ ಎಂದವನ ಮೊಗದ ತುಂಬಾ ಕಾಮನ ಬಿಲ್ಲು
ಕಳೆದದ್ದೆಲ್ಲ ನಮ್ಮದಲ್ಲ...ಬರುವುದೆಲ್ಲ ನಮಗಾಗಿ ಎಂದವನಲ್ಲಿ ಜೀವನೋತ್ಸಾಹ
ನಾವು ಕೊಟ್ಟು ಪಡೆದ ನೋವೆಲ್ಲ ಕಳೆದುಬಿಡು ಎಂದವನ ಕಣ್ಣಲ್ಲಿ ನಿನಗಾಗಿ ನಾನು ಎಂಬ ಛಲ

ನಾನು.....
ಮುಚ್ಚಿಬಿಡಿ ಬದುಕಿನ ನೋವಿನ ಪುಟಗಳನ್ನು.
ತೆಗೆದುಬಿಡಿ ಗೊಂದಲಗೊಳಿಸುವ ಬಂಧಗಳನ್ನು.
ಕಳಚಿಬಿಡಿ ನಾನು ನೀನು ಎಂಬ ಅಹಮನ್ನು
ಈ ಚಿಗುರು ಹೊಸ ಬಾಳಿನ ಹೂವಾಗಲಿ
ಈ ಕಾಮನ ಬಿಲ್ಲು ಮುಂಬರುವ ಪ್ರೀತಿ ಮಳೆಗೆ ಬಣ್ಣ ತುಂಬಲಿ...
ಒಲವಿನ ಹಣತೆ ಬೆಳಗಿಸಿ.

ಈಗ ಆಕೆ ಆಕೆಯಲ್ಲ...ಈತ ಈತನಲ್ಲ...
ಆಕೆ ಈತ ಸೇರಿ ಅವರು...
ಮನದ ತುಂಬಾ ಹಾರೈಕೆ ನನ್ನದು..

1 comment:

  1. ಜೀವ ಎರಡಾದರೂ ಆತ್ಮ ಒಂದು.

    ಸೊಗಸಾದ ಕವನ :)

    ಒಳಿತಾಗಲಿ

    ಗುರುದೇವ ದಯಾ ಕರೊ ದೀನ ಜನೆ

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...