Sunday 24 July 2011

ಮುಂಜಾವು


ನಸುಬೆಳಕಿನ
ತುಸುಕತ್ತಲ ...
ಇಳೆಗೆ ರವಿಯ ಉಸಿರು ಸೋಕೋ ವೇಳೆ

ಮನೆಯ ಮುಂದಿನ ಮರದ ಮೇಲೆ ..
ಪುಟ್ಟ ಹಕ್ಕಿಗಳ ಪ್ರಣಯ ಲೀಲೆ...

ಒಲವಿನ ಅದು..ಚೆಲುವಿನ ಇದು...
ಪಿಸು ಮಾತು...ಒರೆ ನೋಟ
ನಲಿವು, ಆಸೆ, ನಂಬಿಕೆ....
ಉಲ್ಲಾಸದ ಲಹರಿ...
ಪ್ರೇಮದ ಪ್ರತಾಪ...

ಯಾವುದೊ ಕಾಣದ ಸೂತ್ರಕ್ಕೆ ಸಿಕ್ಕಂತೆ
ನಗುತ್ತ ಎದ್ದು ಹೂಯ್ತೊಂದು ಹಕ್ಕಿ...

ಒಡಲೊಳಗೆ ಕದಲುತ್ತ...
ಮನದೊಳಗೆ ಕರಗುತ್ತಾ...
ನಭದಿಂದ ಧರೆಗಿಳಿದ
ಇನ್ನೊಂದು ಹಕ್ಕಿ..
ಕಾಯುತ್ತಿದೆ..
ಮತ್ತೊಂದು ಬೆಳಗಿಗಾಗಿ...
ಅದೇ ಬೆಳಕಿಗಾಗಿ...

ನಾನೂ ಕಾಯುತ್ತಿದ್ದೇನೆ ನಾಳಿನ ಬೆಳಗಿಗಾಗಿ..
ಪುಟ್ಟ ಹಕ್ಕಿಗಳ ಮಿಲನಕ್ಕಾಗಿ..
ಮಧುರ ಚಿಲಿಪಿಲಿಗಾಗಿ..

1 comment:

  1. ಸುನೀತಕ್ಕ, ನಿಮ್ಮ ಭಾವ ಪ್ರಪಂಚದಲ್ಲಿ ಸಾಲುಗಳು ಚೆನ್ನಾಗಿದೆ. ಸುಂದರ ಭಾವ ಪ್ರತಿಮೆಗಳು ಖುಷಿಯಾಯಿತು.

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...