ೆಯಲ್ಲಿ ಒಂದು ಪುಟ್ಟ ಹುಡುಗಿ, ಕಾರ್ತಿಗಿಂತ ಒಂದ್ಮೂರು ವರ್ಷ ದೊಡ್ಡವಳೇನೋ, ಶಾಲೆಗೆ ಹೋಗುವಾಗ ದಿನಾ ಮಾತನಾಡಿಸ್ತಾ ಇದ್ದೆ. ಒಂದೆರಡು ತಿಂಗಳುಗಳ ನಂತರ ಗಾಡಿಯಲ್ಲಿ ನಾನು ಮಂಜು ಹೋಗುವಾಗ ಆ ಹುಡುಗಿ ತನಗಿಂತ ಒಂದಾರೇಳು ವರ್ಷದ ಹುಡುಗಿ ಜೊತೆ ಆಗಾಗ ಕಾಣಿಸ್ತಾ ಇತ್ತು. ಆ ದೊಡ್ಡ ಹುಡುಗಿ ಫೋನ್ ಅಲ್ಲಿ ಯಾರ ಜೊತೆಗೆ ಮಾತಾಡ್ತಾ ಇದ್ರೆ ಇದು ಪಕ್ಕದಲ್ಲಿ ನಿಂತಿರ್ತಾ ಇತ್ತು. ಆ ದೊಡ್ಡ ಹುಡುಗಿ ತನ್ನ safetyಗಾಗಿ ಇವಳನ್ನ ಜೊತೆಗೆ ಕರ್ಕೊಂಡು ಬಂದು ಜೊತೆ ನಿಲ್ಲಿಸಿಕೊಂಡು ಗಂಟಿಗಟ್ಟಲೆ ಮಾತಾಡ್ತಾ ಇತ್ತು ಅನಿಸುತ್ತೆ (ಯಾರ ಜೊತೆ, ಏನು ಮಾತಾಡ್ತಾ ಇದ್ದಳೋ ನನಗೆ ಅಪ್ರಸ್ತುತ .. ಆದರೆ ಹೋಗ್ತಾ ಬರ್ತಾ ಇದ್ದವರು ಆಕೆಯನ್ನ ನೋಡೋ ರೀತಿ ಇಷ್ಟ ಆಗ್ತಾ ಇರ್ಲಿಲ್ಲ ). ಈ ಹುಡುಗಿ ಪಕ್ಕದಲ್ಲೇ ಸುಮ್ನೆ ನಿಂತಿರ್ತಾ ಇತ್ತು . ಒಂದೆರಡ್ಮೂರು ಬಾರಿ ನೋಡಿದ ನಂತರ ಒಂದ್ ದಿನ ಎಂದಿನಂತೆ ಮಾತನಾಡಿಸಿದ ಹುಡುಗಿಯನ್ನ 'ಪುಟ್ಟ, ನಿನ್ನ ಅಲ್ಲಿ ನೋಡ್ದೆ , ಯಾಕ್ ಅಲ್ಲಿ ಇಲ್ಲಿ ನಿಂತ್ಕೊಳ್ತೀಯಪ್ಪ? ಅಪ್ಪ ಅಮ್ಮ ನೋಡಿದ್ರೆ ಬೇಜಾರ್ ಮಾಡ್ಕೊಳ್ತಾರೆ. ನಿನ್ ಫ್ರೆಂಡ್ಸ್ ಜೊತೇನೆ ಹೋಗು, ದೊಡ್ಡೋರ ಜೊತೆ ಯಾಕಪ್ಪ 'ಅಂದೆ . ಮನೆಯ ಹೊರಗೆ ಕಾಂಪೌಂಡ್ ಅಲ್ಲೇ ಇದ್ದ ಅವರಮ್ಮ "ಏನ್ ಸುನೀತಾ "ಅಂದ್ರು . 'ಏನಿಲ್ಲ ಟೆಸ್ಟ್ ಆಯ್ತಾ ಅಂತ ಕೇಳ್ತಾ ಇದ್ದೆ ಅಷ್ಟೇ' ಅಂದೆ.
ಅದೇ ಕೊನೆ ನಾ ಆ ಮಗುವನ್ನ ರಸ್ತೆ ಬದಿಯಲ್ಲಿ ನೋಡಿದ್ದು. ಮನೆಯ ಮುಂದೆ ತನ್ನ ಸಮಾನ ವಯಸ್ಸಿನ ಮಕ್ಕಳ ಜೊತೆ ಆಡ್ಕೊಂಡು, ಚೆಂದ ಅಂಕಗಳನ್ನ ತೆಗೆದು ಇಂಜಿನಿಯರಿಂಗ್ ಮುಗಿಸಿದ್ಳು. ಅಲ್ಲೆಲ್ಲೋ ಒಂದು ಕಡೆ ಕೆಲ್ಸಕ್ಕೆ ಕೂಡ ಹೋದ್ಳು . ಮೊನ್ನೆಮೊನ್ನೆ ಅವರಮ್ಮ 'ಮಗಳಿಗೆ ಮದ್ವೆ ಫಿಕ್ಸ್ ಆಯ್ತು ಸುನೀತಾ ' ಅಂತ ಸಂತಸ ಹಂಚಿಕೊಂಡ್ರು . ಪುಟ್ಟ ಹುಡುಗಿ ಈಗಿನ್ನು ಕಣ್ಣ ತುಂಬಿ ನಿಂತು 'ಇನ್ ಮೇಲೆ ಹೋಗೋಲ್ಲ ಆಂಟಿ' ಅಂದ ನೆನಪು . ಆಗಲೇ ಅದಕ್ಕೆ ಮದುವೆ ಮತ್ತೊಂದು ನಾಲ್ಕುವರ್ಷಕ್ಕೆ ಅದರ ಮಗು ನನ್ನ 'ಅಜ್ಜಿ ' ಅನ್ನುವುದೇನೋ
ಮನಸ್ಸು ನೀಲಿನೀಲಿ ))
ಬದುಕು ತುಂಬಾ ಸುಂದರ, ನಾವು ಆರಿಸಿಕೊಳ್ಳುವ ಹಾಗೆ ....

No comments:
Post a Comment