Saturday, 5 December 2015

 ಹೀಗೊಂದಷ್ಟು ಸಣ್ಣ ಕಥೆಗಳು 
1.'ಪ್ರೀತಿಗೆ ನಾಳೆಗಳಿಲ್ಲ ' ಅಂದ್ಲು ಅವಳು .. 
'ಆದರೂ ನಾಳೆಗಳಿಲ್ಲದ ಪ್ರೀತಿಯೂ ಇದೆ , ನಮ್ಮದರಂತೆ ' ಅಂದ್ಲು ಇವಳು...
ನಿಜವೇನೋ !!!!!

2.'ನಿನ್ನ ಭುಜದ ಮೇಲೆ ತಲೆಯಿಟ್ಟು ಒಂದಷ್ಟು ಹೊತ್ತು ಕೂರಬೇಕು '
'ಅಷ್ಟೇನಾ ' ಕಣ್ಣಲ್ಲಿ ಅದೇ ತುಂಟತನ 
'ಹೂಂ, ಅಷ್ಟೇ .. ಅದೆಷ್ಟೋ ವರ್ಷಗಳಾಗಿತ್ತು ಅಲ್ವ ನಾವಿಬ್ಬರೇ ಹೀಗೆ ಏಕಾಂತವಾಗಿ ಇದ್ದು '
'ಮದ್ವೆಗೆ ಮೊದಲೇನೋ ....."
ಮಕ್ಕಳ ಜವಾಬ್ದಾರಿ ಮುಗಿಸಿ ನಿರಾಳವಾಗಿ ಕುಳಿತ ಇಬ್ಬರ ಮೊಗದಲ್ಲೂ ನಗು...

3. 'ಈಗ ನಾ ಸರಿ ಇದ್ದೀನಿ ಕಣೆ , ಎಲ್ಲಾ ಮರೆತು .....' ಅಂದ್ಲು ಅವಳು
'ಒಳ್ಳೆಯದಾಯ್ತು ಬಿಡು , ನಿನ್ನ ಬದುಕು ನೀ ನೋಡಿಕೋ ಇನ್ನು ...' ಅಂದೆ
'ಟೀ ಮಾಡ್ತೀನಿ ನಿನಗೆ ...' ಅಂದ್ಲು ಅವಳು
'ಸ್ವಲ್ಪ ಶುಂಠಿ ಹಾಕು, ...... ' ಅಂದೆ
'ಅವನಿಗೂ ಶುಂಠಿ ಟೀ ಅಂದ್ರೆ ಇಷ್ಟ !!!!!!!!!!!!!"
ಅಂದ್ಲು
ಅವಳು ಅಂದ್ರೆ ಅವಳು ಅಷ್ಟೇ .........

4. 
'ಬದುಕಲ್ಲಿ ಮಾಡಿದ ಅತೀ ದೊಡ್ಡ ತಪ್ಪೊಂದಿದೆ ಕಣೋ '
'ಅದೇನ್ ಹೇಳು ಮತ್ತೆ ..'
'ಬೇಡ ಬಿಡು ... '
'ಹೇಳು ಪ್ಲೀಸ್ '
'ಏನಿಲ್ಲ ಬಿಡು , ಆದ್ರೆ ಬದುಕಲ್ಲಿ ಯಾವತ್ತು ನನ್ನ ಮುಂದೆ ಬರಬೇಡ , ಬಂದ್ರೆ ನಿನ್ನ ಕಾಲರ್ ನನ್ನ ಕೈಲಿರುತ್ತೆ '
'ಓಯ್ , ಟೀ ಶರ್ಟ್ ಹಾಕೊಂಡ್ ಬರ್ತೀನಿ ಬಿಡು .. !!!'
'ಏನ್ ಮಹರಾಯ ಬೈದ್ರೂ ನಗ್ತೀಯ ...'
'ಕೋಪದ ಹಿಂದಿರೋ ಅಗಾಧ ಪ್ರೀತಿಯ ಅರಿವಿದೆ , ಪರಿಸ್ಥಿತಿಗಳ ಅರಿವಿದೆ ಅದಕ್ಕೆ ನಗ್ತೀನಿ ... ಲವ್ ಯು ಎಂದಿನಂತೆ ...ಅಂದ ಹಾಗೆ ನಿನ್ನೆದುರು ಬರೋದಿಲ್ಲ ಬಿಡು, ಬಂದ್ರೆ ಕರಡಿ ಕೈ ಸಿಕ್ಕಂತೆ .!!!!!'
ಅದೆಷ್ಟೋ ವರುಷಗಳ ಗೆಳೆತನ ಪ್ರೀತಿ ... ಬಂಧನವಿಲ್ಲ ಅಷ್ಟೇ !!!!

5.ಈವತ್ತು ನಮ್ಮ ಗೆಳೆತನದ ವಾರ್ಷಿಕೋತ್ಸವ,ನನಗೆ ಏನ್ ಕೊಡ್ತೀಯ ಅಂದ್ಳು 'ನನ್ನಿಂದ ಈ ನಗು ಮಾಸದಂತೆ ನೋಡಿಕೊಳ್ತೀನಿ' ಎಂದ 
'ಬೇರೆಯವರಿಂದ ಮಾಸಿದರೆ' ಅಂದ್ಳು 
'ಮತ್ತೆ ನಗು ತರಿಸ್ತೀನಿ' ಅಂದ . 
ಅಷ್ಟು ಸಾಕು ವಾಸ್ತವ ಬದುಕಿಗೆ.....!!!

6. 'ಒಹ್ ಅದಾ!!! ಆ ನೋವೆ ಮರೆತು ಹೋಯ್ತು ಕಣೆ ಈ ನೋವಲ್ಲಿ ' ಅಂದ್ಲು... 
ಕಣ್ಣಂಚಲ್ಲಿ ಹನಿ ನೀರು ......... 
ನೋವು ಅಂತ್ಯವಾದ ಖುಷಿಗಾ ಅಥವಾ ಹೊಸ ನೋವಿನ ಉದಯಕ್ಕಾ .!?
ಅವಳು ಅವಳೇ !!!

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...