Saturday 4 April 2015

ಒಂದು ಪುಟ್ಟ ಸಂಸಾರ ಗಂಡ, ಹೆಂಡತಿ, ಮತ್ತು ಇಬ್ಬರು ಮಕ್ಕಳು , ಚೆಂದದ ಬದುಕು. ಆದ್ರೆ ಮಕ್ಕಳಿಬ್ಬರೂ ತುಂಬಾನೇ ತುಂಟರು. ಅಕ್ಕಪಕ್ಕದವಿಗೆಲ್ಲ ಇವರಿಂದ ತಲೆ ನೋವು . ದಿನಕ್ಕೊಂದು ತರಲೆ, ಅಪ್ಪ ಅಮ್ಮ ಇಬ್ಬರಿಗೂ ಇದೊಂದು ಕೊರಗಿತ್ತು. ಒಮ್ಮೆ ಅವರ ಊರಿಗೆ ಒಬ್ಬ ಸಾಧು ಬಂದ್ರು . ನೆರೆಹೊರೆಯ ಮಂದಿ ಹೇಳಿದ್ರು 'ಮಕ್ಕಳನ್ನ ಆ ಸಾಧುಗಳ ಬಳಿ ಕರ್ಕೊಂಡ್ ಹೋಗಿ, ಅವರ ತುಂಟತನಕ್ಕೆ ಏನಾದ್ರೂ ಪರಿಹಾರ ಸೂಚಿಸಬಹುದು , ಆದ್ರೆ ಇಬ್ಬರನ್ನು ಒಟ್ಟಿಗೆ ಕರ್ಕೊಂಡ್ ಹೋಗಬೇಡಿ . ಆ ಸಾಧುಗಳಿಗೂ ತೊಂದರೆ ಕೊಡುವ ಮಕ್ಕಳೇ ನಿಮ್ಮವು "ಎಂದ್ರು . ಸರಿ ಅಪ್ಪ ಅಮ್ಮ ಚಿಕ್ಕ ಮಗನನ್ನ ಕರ್ಕೊಂಡು ಸಾಧುಗಳ ಬಳಿ ಹೋದ್ರು , ಹೀಗ್ ಹೀಗೆ ಅಂತ ಹೇಳಿದ್ರು . ನಕ್ಕ ಸಾಧುಗಳು ಅಪ್ಪ ಅಮ್ಮನಿಗೆ ನೀವು ಹೊರಗೆ ಕುಳಿತಿರಿ ಅಂತ ಹೇಳಿದ್ರು . ಅವರು ಹೊರಗೆ ಹೋದ ಮೇಲೆ ಆ ಹುಡುಗನ ಹತ್ತಿರ ಕೇಳಿದ್ರು 'ನಿನಗೆ ಶಿವ ಅಂತ ಗೊತ್ತ ಗೊತ್ತ ಮರಿ"... ಆ ಹುಡುಗ ಸುಮ್ಮನೆ ಸಾಧುಗಳನ್ನೇ ನೋಡಿದ ಮಾತಾಡಲಿಲ್ಲ . ಅವರು ಮತ್ತೆ ಅದೇ ಪ್ರಶ್ನೆ ಕೇಳಿದ್ರು , ಅವನು ಉತ್ತರಿಸಲಿಲ್ಲ .. ಸುಮಾರು ನಾಲ್ಕು ಐದು ಬಾರಿ ಕೇಳಿದ ಸಾಧುಗಳು ಕೋಪದಿಂದ ಮತ್ತೆ ಕೇಳುವಷ್ಟರಲ್ಲಿ ಆ ಹುಡುಗ ಎದ್ದು ಓಡಿದ .. ಸಾಧು ಹೊರಗೆ ಬರೋ ಅಷ್ಟರಲ್ಲಿ ಹುಡುಗಓಡಿ ಆಗಿತ್ತು . ಓಡಿ ಬಂಡ ಹುಡುಗ ಮನೆಯಲ್ಲಿ ಮಂಚದ ಕೆಳಗೆ ಅವಿತು ಕುಳಿತ. ಅಲ್ಲೇ ಇದ್ದ ಅವನ ಅಣ್ಣ "ಯಾಕೋ ಪುಟ್ಟ ಏನ್ ಆಯಿತು?" ಅಂದ ಹುಡುಗ ಹೇಳಿದ 'ಹೇ ಅಣ್ಣ ನೀನು ಬಾ ಬೇಗ ಬಚ್ಚಿಟ್ಕೋ . ಆ ಶಿವ ಎಲ್ಲೋ ಕಳೆದು ಹೋಗಿದ್ದಾನಂತೆ . ಎಲ್ಲರಿಗೂ ನಮ್ಮ ಮೇಲೆ ಅನುಮಾನ ಆ ಸಾಧು ಕೂಡ ನನ್ನನ್ನೇ ಕೇಳಿದ್ರು .......... '!!!!!!!
ಮಕ್ಕಳ ಮನಸ್ಸು ......... ಆಹ್:)))

2 comments:

  1. ಸರಿಯಾದ ತುಂಟದ್ವಯರು, ಥೇಟ್ ಬಾಲ್ಯದಲ್ಲಿ ನನ್ನಂತೆಯೇ!

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...