ಮದುವೆಯಾದ ಹೊಸದರಲ್ಲಿ ಹೊಸ ಮನೆ ಮಾಡಿ ಗಂಡನೊಡನೆ ಸಂಸಾರ ಹೂಡಿದಾಗ ಏನೋ ಸಂಭ್ರಮ , ಕಲಿತ ಅಡುಗೆಯೆಲ್ಲ ಮಾಡಿ ಬಡಿಸಿ ಹೊಗಳಿಸಿ ಕೊಳ್ಳೋ ಖುಶಿ. ಇರೋ ಇಬ್ಬರಿಗೆ ಎಷ್ಟು ಅನ್ನ ಮಾಡಬೇಕೆಂಬ 'ಚಿಕ್ಕಪುಟ್ಟ' ವಿಷಯಕ್ಕೆ ಗಮನ ನೀಡಲು ಮರೆವ ವಯಸ್ಸು ಹುಮ್ಮಸ್ಸು .... ಒಂದು ದಿನ ಅನ್ನ ಉಳಿತು ಹೊರ ಹಾಕಿದೆ .. ಮತ್ತೊಂದು ದಿನ ಕೂಡ ಹೀಗೆ, ... ಮರು ದಿನ ಕೂಡ ಹೀಗೆ .. ಅಂದು ರಾತ್ರಿ ಕೂಡ ಹಾಗೆ , ಅನ್ನ ಉಳಿದಿತ್ತು ಹೊರ ಹಾಕ ಹೊರಟೆ ... ಗಂಡ 'ಒಂದ್ ನಿಮಿಷ ಬಾ ಇಲ್ಲಿ'.. ಹೋದೆ , ಪಕ್ಕ ಕುಳಿತೆ ...ಕೈ ಹಿಡಿದ " ಸುನಿ, ಅನ್ನಕ್ಕೆ ಇಡೋವಾಗ ಅಕ್ಕಿ ಹಾಕ್ತೀಯ ಅಲ್ವ, ಹಾಕಿದ ಮೇಲೆ ನಿನ್ನ ಕೈ ಹಿಡಿಯಲ್ಲಿ ಒಂದ್ ಹಿಡಿ ಅಕ್ಕಿ ಮತ್ತೆ ಅಕ್ಕಿಯ ಡಬ್ಬಕ್ಕೆವಾಪಸ್ಸು ಹಾಕು , ನಾಲ್ಕು ದಿನ ಅಕ್ಕಿ ಹಿಂದಕ್ಕೆ ಹಾಕಿದ್ರೆ ಐದನೇ ದಿನಕ್ಕೆ ಅನ್ನ ಆಗುತ್ತೆ ...ದಿನಾ ಹೀಗೆ ಹೊರಗೆ ಹಾಕಿದ್ರೆ ಐದನೇ ದಿನಕ್ಕೆ ಅನ್ನ ಇರೋಲ್ಲ ಅಲ್ವೇನೋ, ಒಂದ್ ತುತ್ತು ಕಡಿಮೆ ತಿಂದ್ರೆ ವ್ಯತ್ಯಾಸ ಆಗೋಲ್ಲ , ಒಂದ್ ತುತ್ತು ಚೆಲ್ಲಿದ್ರೆ ತುಂಬಾ ವ್ಯತಾಸ ಆಗುತ್ತೆ" ಅಂದ .... ಅಂದು ಬದುಕು ಹಾಗೆ ಇತ್ತು , ಕಣ್ಣು ತುಂಬಿತ್ತು ಆದರೆ ಮನ ಪಾಠ ಕಲಿತಿತ್ತು .... ಇಂದೂ ಕೂಡ ಅನ್ನಕ್ಕೆ ಅಕ್ಕಿ ಇಡೋವಾಗ ಒಂದ್ ಹಿಡಿ ಅಕ್ಕಿ ಡಬ್ಬಕ್ಕೆ ಹಿಂದಕ್ಕೆ ಹಾಕ್ತೀನಿ , ಅನ್ನದ ಬೆಲೆ ಅರಿತಿದ್ದೀನಿ ... ಮಕ್ಕಳಿಗೂ ಅದೇ ಹೇಳ್ತೀನಿ ..ಇವತ್ತು ಪುಟ್ಟಿ ಅನ್ನಕ್ಕೆ ಇಡೋವಾಗ ಇದೆಲ್ಲ ನೆನಪಾಯ್ತು ........
Saturday, 4 April 2015
Subscribe to:
Post Comments (Atom)
ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...
-
ಎಷ್ಟೊಂದು ವರ್ಷಋತುಗಳು ಕಳೆದುಹೋಯ್ತು ವರುಷಗಳ ಸಾಂಗತ್ಯದಲ್ಲಿ ಗೆಳೆಯ ..... ಒಮ್ಮೊಮ್ಮೆ ಬಿರುಮಳೆಯೊಂದು ಇಳೆಯ ತಣಿಸಿದಂತೆ ಒಮ್ಮೆ ತುಂತುರುಹನಿಯಾಗಿ ಭುವಿಗಿ...
-
ಈ ಮದುವೆ ಅನ್ನೋದು ಬಂಧುತ್ವಗಳ ಬೆಸೆಯೋ ಸಾಧನ , ಅದೇನು ಸಂಭ್ರಮ, ಸಡಗರ, ಕಲರವ, ನಗು, ಅಲ್ಲೆಲ್ಲೋ ಒಂದೆರಡು 'ಸಣ್ಣ ' ಮಾತುಗಳು, ಇನ್ನೆಲ್ಲೋ ಒಂದು ಜಗಳ, ಹೆಣ್ಣ...
-
ಮದ್ವೆಯಾದ ಹೊಸದರಲ್ಲಿ ನಾವೂ ತುಂಬಾನೇ ಕಿತ್ತಾಡ್ಕೋಳ್ತಾ ಇದ್ವಿ . ಮೊದ್ಲೇ ಪ್ರೀತಿಸಿ ಆದ ಮದುವೆ.. ಎರಡೂ ಮನೆಗಳ ನಡುವೆ ಅಗಾಧ ಅಂತರ ಎಲ್ಲದರಲ್ಲೂ . ಸಣ್ಣ ಸಣ್ಣ ವಿಷಯಗಳಿ...
ಅನ್ನದ ಬೆಲೆ ಅರಿತವರೇ ನಿಜ ಶ್ರೇಷ್ಟರು ಧರೆಯಲಿ.
ReplyDelete