Thursday, 2 April 2015

ಹೀಗೊಂದು ಕಥೆ ......
ಒಂದು ಪುಟ್ಟ ಸಂಸಾರ. ಅಪ್ಪ ಅಮ್ಮ, ಇಬ್ಬರು ಹೆಣ್ಣು ಮಕ್ಕಳು .... ಚೆಂದದ ಸಂಸಾರ .....ಇಬ್ಬರು ಮಕ್ಕಳೂ ಮದುವೆಯ ವಯಸ್ಸಿಗೆ ಬಂದಾಗ ಇಬ್ಬರಿಗೂ ಮಾಡುವೆ ಮಾಡಿಕೊಟ್ಟರು.. ಒಬ್ಬ ಹೆಣ್ಣು ಮಗಳನ್ನ ಮಡಿಕೆ ಮಾಡುವವನಿಗೆ , ಮತ್ತೊಬ್ಬಳನ್ನ ಒಬ್ಬ ತೋಟಗಾರಿಕೆ ಮಾಡುವವನಿಗೆ ಮದುವೆ ಮಾಡಿ ಕೊಟ್ಟರು ... ಒಂದಷ್ಟು ದಿನಗಳ ನಂತರ ಅಪ್ಪನಿಗೆ ತನ್ನ ಮಕ್ಕಳ ಸಂಸಾರದ ಸೊಬಗ ನೋಡೋ ಆಸೆ ಆಯಿತು .. ಸರಿ ಮಕ್ಕಳ ಮನೆಗೆ ಹೊರಟ . ಮೊದಲು ಮಡಿಕೆ ಮಾಡುವ ಅಳಿಯನ ಮನೆಗೆ ಹೋದ ಮಗಳು ಅಪ್ಪನಿಗೆ ಸಂಭ್ರಮದಿಂದ ಊಟ ಬಡಿಸಿ ನಗು ನಗುತ್ತ ನೋಡಿಕೊಂಡಳು .. ಅಪ್ಪ ಕೇಳಿದ "ಹೇಗಿದ್ದೀಯ ಮಗು?" ಮಗಳು ಹೇಳಿದ್ಲು 'ಚೆನ್ನಾಗಿದ್ದೀವಿ ಅಪ್ಪ, ನಿಮ್ಮ ಆಶೀರ್ವಾದ . ಮಳೆ ಬರದೆ ಹೋದ್ರೆ ಸಾಕು.. ಮಡಿಕೆ ಹಾಳಾಗದೆ ಇರಲು .. ಮಳೆ ಆಗದಂತೆ ದೇವರಲ್ಲಿ ಕೇಳಿಕೊಳ್ಳಿ ಅಪ್ಪ!!! " ಅಂದ್ಲು. ಅಪ್ಪ ಮಗಳಿಗೆ ಹರಸಿ ಮತ್ತೊಬ್ಬ ಮಗಳ ಮನೆಗೆ ಹೊರಟ
ಆ ಮಗಳೂ ಅಪ್ಪ ಬಂದ ಸಂಭಮಕ್ಕೆ ಚೆಂದ ಆಡಿಗೆ ಮಾಡಿ ಬಡಿಸಿದಳು . ನಗುನಗುತ್ತ ಪಕ್ಕ ಕುಳಿತು ಮಾತಾಡಿದಳು ... ಅಪ್ಪ ಕೇಳಿದ "ಹೇಗಿದ್ದೀಯ ಮಗು?" ಮಗಳು ಹೇಳಿದ್ಲು 'ಚೆನ್ನಾಗಿದ್ದೀವಿ ಅಪ್ಪ, ನಿಮ್ಮ ಆಶೀರ್ವಾದ . ಒಳ್ಳೆ ಮಳೆ ಬಂದ್ರೆ ಸಾಕು.. ಹಾಕಿದ ಗಿಡಗಳು ಚಿಗುರಿ ಒಳ್ಳೆ ಬೆಲೆಗೆ ವ್ಯಾಪಾರ ಆಗಲು .. ಒಳ್ಳೆ ಮಳೆ ಆಗಲಿ ಅಂತ ದೇವರಲ್ಲಿ ಕೇಳಿಕೊಳ್ಳಿ ಅಪ್ಪ !!!" ಅಂದ್ಲು........ !!!!
ಒಬ್ಬರಿಗೆ ಹಿತ ಅನಿಸುವ ಒಂದು ವಸ್ತು , ವ್ಯಕ್ತಿ, ಮಾತು, ಕೃತಿ, etc, etc......... ಮತ್ತೊಬ್ಬರಿಗೆ ಬೇದ ಅನಿಸುತ್ತದೆ ಅಲ್ವೇ .... ಅವರವರ ಉಪಯುಕ್ತತೆಗೆ ಅನುಗುಣವಾಗಿ :)))

1 comment:

  1. ಇದೊಂದು ತರಹ ಆಂಗ್ಲರು rain rain go away ಮತ್ತು ನಮ್ಮ ಬಾರೋ ಬಾರೋ ಮಳೆರಾಯ! ತರಹದ ಕಥನ.
    ಅವರವರ ಭಾವಕ್ಕೆ... ಅವರವರ ಬಯಕೆಗಳ ಬುತ್ತಿ!

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...