Sunday 24 July 2011

ಕೇಳ ಬಾರದಿತ್ತೆ ಈ ಪ್ರಶ್ನೆ...??

ಹದಿನಾಲ್ಕು ವರುಷ
ಅಯೋಧ್ಯೆಯ ಸೊಸೆಯಾಗಿ...
ಲಕ್ಷ್ಮಣನ ಸತಿಯಾಗಿ..
ಕಟಾಂಜನದ ಮೇಲೆ ಕೈ ಇಟ್ಟು..
ತವರುಮನೆಯ ಸುಖವ ನೆನೆದುಕೊಂಡೇ..
ಮದುವೆಯ ಮುದದ ನೆನಪಲ್ಲಿ ಮನವ ತಣಿದುಕೊಂಡೆ
ಗಿಳಿ ಗೊರವಂಕಗಳೊಡನೆ ಕನಸ ಹಂಚಿಕೊಂಡೆ...
ಆಗೊಮ್ಮೆ ಈಗೊಮ್ಮೆ ಈ ಮದುವೆಯ ವಜ್ರದುಂಗುರವ ತಿಂದು
ಇಹವ ತೊರೆಯಬೇಕೆಂದುಕೊಂಡೆ..
ಆದರೀ ಉಂಗುರದ ಒಡೆಯನ ಬಿಸುಪು, ನೆನಪೇ ನನ್ನ ಹಿಡಿದಿಟ್ಟಿತ್ತು...
ಹದಿನಾಲ್ಕು ವರ್ಷಗಳ ನಂತರ
ಕಟಾಂಜನದ ಮೇಲೆ ಕೈ ಇಟ್ಟು ಒರಗಿ
ನೋಡುತ್ತಿದ್ದೇನೆ ಲಕ್ಷ್ಮಣನನ್ನು
ಕೊಂಚ ಕೃಶ ಶರೀರ ,ಒಂದಿನಿತೂ ಕುಂದದ ಕಣ್ಣ ಹೊಳಪು
ಇವರೇ ಅಲ್ಲವೇ ನನ್ನ ಕೈ ಹಿಡಿದು ಆಯೋಧ್ಯೆಗೆ ಕರೆತಂದವರು....
ಮೈಯಲ್ಲಿ ಏನೋ ಬಿಗಿತ..
ಕೈಯಲ್ಲಿ ಕಂಪನ..
ಮನದಲ್ಲಿ ತವಕ...
ಗಂಡನನ್ನು ಕಾಯುತ್ತಿರುವ
ಈಗಷ್ಟೇ ಮದುವೆಯಾದ ಹೆಣ್ಣು ನಾನು
ಹದಿನಾಲ್ಕು ವರ್ಷ ಕಳೆದದ್ದು ದೇಹಕ್ಕೆ ಮಾತ್ರ...
ಆದರೆ....
ಲಕ್ಷ್ಮಣನಿಗೆ ರಾಮನ, ಮಹಾಸತಿ ಸೀತೆಯ
ಪ್ರೇಮ, ವಿರಹ, ಮಿಲನಗಳ
ಕಾಡಿನ ಕಥೆ, ವ್ಯಥೆಯದೆ ವಿಷಯ...
ವನವಾಸ ರಕ್ಕಸಯುದ್ಧ ಅವನನ್ನು ಪ್ರೌಡನನ್ನಗಿಸಿದೆ ..
ಅಣ್ಣ ಅತ್ತಿಗೆಯರ ಸೇವೆ, ದೇವರ ಧಾನ್ಯ, ವನವಾಸ ಅವನನ್ನು ನಿರ್ಲಿಪ್ತನನ್ನಾಗಿಸಿದೆ
ಇಂದಿಗಿಂತ ಆ ಕಾಯುತ್ತಿದ್ದ ಹದಿನಾಲ್ಕು ವರ್ಷವೇ ಹಿತ ಎನಿಸುತ್ತಿದೆ..
ಹಿಡಿದಿಡಲಾರದೆ ಕೇಳಿ ಬಿಟ್ಟೆ
"ಈ ಹದಿನಾಲ್ಕು ವರ್ಷ ನನ್ನ ನೆನಪೇ ಆಗಲಿಲ್ಲವೇ ಲಕ್ಷ್ಮಣ "
ಸ್ತಂಭಿಬುತನಾದ ಲಕ್ಷ್ಮಣ .....
ಕಣ್ಣoಚಲ್ಲಿ ನೀರತುಂಬಿ ನಾ ಕೇಳಿದ ಪರಿಗೆ...
ಅವನ ಕಣ್ಣಲ್ಲಿ ಚದಪದಿಕೆಯೇ ...ಇಲ್ಲ ತಪ್ಪಿತಸ್ಥ ಭಾವವೇ...
ಅಯೋಧ್ಯೆಯ ಸೊಸೆಯಾಗಿ...
ಲಕ್ಷ್ಮಣನ ಮಡದಿಯಾಗಿ...
ಸೀತೆಯ ತಂಗಿಯಾಗಿ...
ನಾ ಕೇಳಿದ್ದು ತಪ್ಪೇನೋ ..
ಆದರೆ...ಊರ್ಮಿಳೆಯಾಗಿ, ಹೆಣ್ಣಾಗಿ,ವಿರಹಿಯಾಗಿ
ನಾ ಕೇಳಿದ್ದು ತಪ್ಪೇ......?????

1 comment:

  1. ನಿಜ, ಸೀತೆಗಿನ್ತಲೂ ಊರ್ಮಿಳೆಯ ನೋವೇ ನನಗೆ ಕಾಡಿದೆ.ಲಕ್ಷ್ಮಣ ಮರೆತ ದೇವರ ಸಾನಿಧ್ಯದಲಿ ಎಲ್ಲವನ್ನೂ .ರಾಮ ಸೀತೆಯನ್ನು ಕಳೆದುಕೊಂಡು ಹಲುಬುವಾಗ ನನಗೆ ಕೋಪ ಬಂದಿತ್ತು .ಇದುವರೆಗೂ ನನ್ನ ತಮ್ಮನು ಮಡದಿಯನ್ನಗಲಿ ಬಂದು ನಮ್ಮ ಸೇವೆ ಮಾಡಿದ್ದ ಅನ್ನೋದ ಮರೆತನೆ ರಾಮ?ಎಂದು . ರಾಮಾಯಣ ಕಥೆನ? ಪಾಪ ಉರ್ಮಿಳಾ ..

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...