ಅವನು ಬಿರುಸಿನ ಕಡಲ ಕಿನಾರೆ...
ಅವನ ಪ್ರೇಮ ಕನ್ನಿಕೆ ನಾನು...
ಅದೋ ಅಲ್ಲಿರುವ ಅನಂತ ದಿಗಂತದಾಚೆ ನನ್ನ ಉಗಮ....
ಅವನ ಚಿನ್ನದ ಮರಳ ಮಡಿಲಲ್ಲಿ ನನ್ನ ಅವನ ಸಂಗಮ...
ನನ್ನ ಏರು ಉನ್ಮಾದಕ್ಕೆ ಅವನ ಸಂಯಮವೇ ಉತ್ತರ....ನನ್ನ ತುಡುಗುತನಕ್ಕೆ ಅವನ ಘಾಂಬೀರ್ಯದ ಮಂತ್ರ..
ಅವನಿಗಾಗಿ ಕಡಲಾಳದಿಂದ ನಾನು ಹೊತ್ತು ತರುವೆ ಮುತ್ತು..
ಅವನಿಗಾಗಿ ಕಡಲಾಳದಿಂದ ನಾನು ಹೊತ್ತು ತರುವೆ ಮುತ್ತು..
.ಅದಕ್ಕೂ ಅವನ ಮೌನ ನಗುವಿನ ಗತ್ತು...
ಕತ್ತಲು ಧರೆಯ ಅಪ್ಪಿದಾಗ....ಅವನು ನಿದ್ರೆಗೆ ಜಾರಿದಾಗ....
ನಾನು ಹಾಡುತ್ತೇನೆ ಅವನಿಗಾಗಿ......
ಹಾಡಾಗಿ ಬಿಡುತ್ತೇನೆ ಅವನಿಗಾಗಿ....
ನನ್ನ ಹಾಡು ಎಂದು ಮುಗಿಯದ ಹಾಡು....
ನಾನು ಅವನ ಪ್ರೇಮಿ....
ಅವನಿಗಾಗಿ ಹಾಡುತ್ತೇನೆ...
ಅವನು ಮೌನವಾಗೇ ನನಗಾಗಿ ಮಿಡಿಯುತ್ತಾನೆ...
No comments:
Post a Comment