ರಾತ್ರಿ ೮ ಘಂಟೆ ಹತ್ತಿರ ಆಗಿತ್ತು. ಮಂಜು ಟಿವಿ ನೋಡ್ತಾ ಇದ್ರು ಅವರ ಪಕ್ಕ ಎಂದಿನಂತೆ ನಾನೂ ಪೇಪರ್ ಓದ್ತಾ ಕೂತ್ತಿದ್ದೆ . ಕಾರ್ತಿ ಅವನ ಕಾಲೇಜ್ ಇಂದ industrial ವಿಸಿಟ್ ಅಂತ ಮೈಸೂರಿನ ಒಂದು ಕಾರ್ಖಾನೆಗೆ ಹೋಗಿದ್ದವನು ಬಂದ. ಬಂದು ಅವರಪ್ಪನ ಹೆಗಲಿಗೆ ತಲೆ ಒರಗಿಸಿ ಕೂತ. ಯಾಕೋ ಆಯಾಸದಿಂದ ಇರೋ ಹಾಗೆ ಕಾಣ್ತಾ ಇದ್ದ. 'ಯಾಕ್ ಮಗ ಸುಸ್ತಾಯ್ತ ' ಅಂತ ಮಂಜು ಮಗನ ತಲೆ ಸವರ್ತಾ ಕೇಳಿದ್ರು . 'ಏನಿಲ್ಲಪ್ಪ' ಅಂದ. ಒಂದೆರದು ನಿಮಿಷ ಸುಮ್ಮನಿದ್ದು ಮತ್ತೆ ದಿನದ ಪ್ರವರ ಶುರು ಮಾಡಿದ . 'ಮಾ, ಎಷ್ಟ್ ದೊಡ್ಡ ಫ್ಯಾಕ್ಟರಿ ಗೊತ್ತಾಮ ಅದು. ಒಳಗೆ ಹೋದ್ವ , ಅಲ್ಲಿನ ಟೆಕ್ ಗಳು ನೀವು ಇನ್ನು ಚಿಕ್ಕವರು ಮುಂದಿನ ವರ್ಷ ಬರ್ಬೇಕಿತ್ತು ಅಂತ ಶುರು ಮಾಡಿದ್ರು . ಎಲ್ಲಾ ಮಷೀನ್ಗಳ ಬಗೆ ಹೇಳ್ತಾ ಹೋದ್ರು . ಕೆಲವು ಕಡೆ (ಡಿವಿಷನ್) ಒಳಗೂ ಬಿಡಲಿಲ್ಲ . ಏನ್ ಗೊತ್ತ ಮಾ, ನಮಗೆ ಹೇಳಿಕೊಟ್ಟ ಯಾರೂ ಇಂಜಿನಿಯರ್ಗಳಲ್ಲ . ಎಲ್ಲಾ ಡಿಪ್ಲೋಮಾ ಮತ್ತು ITI ಅವರೇ' 'ಇಂಗ್ಲಿಷ್ ಅಲ್ಲಿ ಹೇಳಿದ್ರಾ ಮಗ' ' ಏ ಮಾ, ಅವರಿಗೆ ಗೊತ್ತಿದ್ದ ಇಂಗ್ಲಿಷ್ ಅಲ್ಲೇ ಹೇಳಿದ್ರು , ಆದ್ರೂ ಅಪ್ಪ , ಅವರಿಗೆ ಇರೋ ಅಷ್ಟು ಪ್ರಾಕ್ಟಿಕಲ್ ಜ್ಞಾನ ನಮಗೆ ಇಲ್ವೆ ಇಲ್ಲ ಬಿಡು . ಎಲ್ಲಾ ನನ್ನ ವಯಸ್ಸಿಗಿಂತ ಜಾಸ್ತಿ ವರ್ಷ ಸರ್ವಿಸ್ ಆಗಿರೋರು , ಅದೆಷ್ಟ್ knowledge ಇದೆ ಅಂತೀಯ ಸಬ್ಜೆಕ್ಟ್ ಅಲ್ಲಿ ಏನಾದ್ರೂ ಪ್ರಶ್ನೆ ಇದ್ರೆ ಕೇಳಿ ಅಂದ್ರು , ನಾವೂ ಏನೇನೋ ಕೇಳಿದ್ವಿ ' ಅಂತೆಲ್ಲ ಹೇಳ್ತಾ ಹೋದ. ನಾವೂ ಕೇಳ್ತಾನೆ ಹೋದ್ವಿ
'ಅಪ್ಪ , ನಾನೂ ಇಂಜಿನಿಯರಿಂಗ್ ಬದ್ಲು ಡಿಪ್ಲೋಮೊ ಮಾಡಬೇಕಿತ್ತೇನೋ ಕಣಪ್ಪ , ತಪ್ ಮಾಡಿಬಿಟ್ಟೆ' ಅಂದ. ವರುಷಗಳಿಂದ ಬಲು ಆಸೆ ಪಟ್ಟು ಅವನೇ ಸೇರಿದ ಕೋರ್ಸ್!!! ಈಗ ಹೀಗಂದ್ರೆ ಅಂತ ಯಾಕೋ ಒಂದ್ ತರ ಆಯ್ತು 'ಯಾಕ್ ಮಗ' 'ಮಾ ಆ ಫ್ಯಾಕ್ಟರಿ ಅಲ್ಲಿ ಒಂದ್ ಮಾತು ಹೇಳಿದ್ರು ಕಣಮ್ಮ placement ಬಗ್ಗೆ ಕೇಳಿದಕ್ಕೆ , ಇಂಜಿನಿಯರ್ಗಳನ್ನ ತಗೊಳೋ ಬದ್ಲು ಡಿಪ್ಲೋಮಾ ಅಥವಾ ITI ಅವರನ್ನ ತಗೊಂಡ್ರೆ ೫ ಸಾವಿರದಲ್ಲಿ ಅದೇ ಕೆಲ್ಸ ಆಗೋಗುತ್ತೆ. ನಾವು ಡೈಲಿ ವೇಜ್ ಆಗಿ ತಗೊಂಡರು ನಡಿತದೆ , ಅದೇ ಇಂಜಿನಿಯರ್ಗಳಾದರೆ ಜಾಸ್ತಿ ಕೊಡಬೇಕು... (ಮತ್ತೊಂದೆರಡು ಸೆನ್ಸಿಟಿವ್ ವಿಷ್ಯ ) ನಿಮ್ಗಳಿಗೆ ಪ್ರಾಕ್ಟಿಕಲ್ ಆಗಿ ಏನೂ ಗೊತ್ತಿರೋದಿಲ್ಲ, ಜೊತೆಗೆ ಅವರುಗಳಾದ್ರೆ ಏನ್ ಹೇಳಿದ್ರೂ ಮಾಡ್ತಾರೆ. ನೀವ್ಗಳು ನಾ ಇಂಜಿನಿಯರ್ ಅದನ್ನ ಮಾಡ್ಲ ಅಂತೀರಾ , ಇತ್ಯಾದಿ ಇತ್ಯಾದಿ' ಹೇಳ್ತಾ ಹೋದ .ಅವನು ಹೇಳಿದ್ದನ್ನೆಲ್ಲ ಕೇಳಿದ ಮೇಲೆ ಮಂಜು ' ಮಗ, ನೀ ತಗೊಂಡಿರೋದು ನಿನ್ನ ಪ್ರೀತಿಯ ವಿಷ್ಯ. ಅದನ್ನೇ ತುಂಬಾ ಚೆನ್ನಾಗಿ ಕಲಿ, ಮನಸಿಟ್ಟು ಕಲಿ. ಆಮೇಲೆ ಮುಂದೆ ಓದೋದೋ ಕೆಲ್ಸಕ್ಕೆ ಸೇರೊದೊ ನೋಡಿದರೆ ಆಯ್ತು, ಸುಮ್ಸುಮ್ನೆ ಈಗಲೇ ಬೇಡದ್ದು ತಲೆಗೆ ತಗೋಬೇಡ, ....etc, etc ' ಅಂದ್ರು. ಅದೆಷ್ಟ್ ತಲೆಗೆ ಹೋಯ್ತೋ ಗೊತ್ತಿಲ್ಲ . 'ಅಲ್ಲ ಕಣಪ್ಪ , ನೋಡು ಈವತ್ತು ನನ್ನ ಹಾಗೆ ನನ್ನ classmates ಕೂಡ ಯೋಚಿಸಿರ್ತಾರೆ ಅಲ್ವ , ಅದೆಷ್ಟ್ competition ಅಲ್ವ' ಅಂದ.
ಅವನು ಊಟ ಮಾಡಿ ಹೋದ ಮೇಲೆ ಮಂಜು ಕಣ್ಣು ತುಂಬಿಕೊಂಡರು 'ಇನ್ನು ಈಗ ಹುಟ್ಟಿದ ಅನ್ನೋ ಹಾಗೆ ಸುನಿ ಇವ್ನು .. ಅದೆಷ್ಟಲ್ಲಾ ಇದೆ ಅಲ್ವ ಈ ಪುಟ್ಟ ತಲೆಯಲ್ಲಿ.. ಅಪ್ಪ ಅಮ್ಮ ಕಲಿಸದೆ ಇರೋದನ್ನ ಪ್ರಪಂಚ(ಬದುಕು) ಕಲಿಸ್ತಾ ಹೋಗುತ್ತೆ ' ಅಂದ್ರು ..
ಮನಸ್ಸು ಒಂದ್ ತರ ಮೂಡದ ಮರೆಯಲ್ಲಿ ಇಣುಕೋ ಸೂರ್ಯನ ಮೇಲೆ ಭರವಸೆ ಇಡು ಅನ್ನೋ ಹಾಗೆ ..........