Tuesday 4 August 2015



ಕೆಲವೊಮ್ಮೆ ಹೀಗೆ ಆಗುತ್ತದೆ .ಮನೆಯ ಹಿರಿಯರು ಯಾರ ಜೊತೆನೋ ಏನೋ ಮನಸ್ತಾಪ ಮಾಡಿಕೊಂಡು ಅದರಿಂದ ಮನೆಯ ಇತರರೂ ಕೂಡ ಆ 'ಯಾರೋ" ಜೊತೆ ಮಾತುಕತೆ ನಿಲ್ಲಿಸಬೇಕು ಅನ್ನೋ ಪರಿಸ್ಥಿತಿ ತಂದುಬಿಡುತ್ತಾರೆ. ಮತ್ತ್ಯಾವಾಗಲೋ ಅವರೆಲ್ಲ ಸರಿ ಹೋದಾಗ ಮತ್ತೆ ಮಾತನಾಡುವಾಗ ಕಿರಿಯರು ಅನಿಸಿಕೊಂಡೋರಿಗೆ ಮಾತಾಡಿಸೋಕೆ ಮುಜುಗರ ಅನಿಸಿಬಿಡುತ್ತದೆ . ಮನಸಲ್ಲಿ ಒಂದ್ ತರ ಅಪರಾಧಿ ಪ್ರಜ್ಞೆ . ಯಾಕೆ ಅಂದ್ರೆ 'ಆ ಯಾರೋ ' ಇವರನ್ನ ನೋಯಿಸಿರೊದಿಲ್ಲ. ಆದ್ರೆ ಆಮೇಲೆ ಮಾತಾಡಿಸಿದಾಗ ಕೆಲವರು ಸುಮ್ಮನೆ ಏನೂ ತೋರಿಸದೆ ಮಾತಾಡಿಬಿಡ್ತಾರೆ , ಮತ್ತೆ ಕೆಲವರು 'ಇಷ್ಟ ದಿನ ಎಲ್ಲಿತ್ತು 'ಅನ್ನೋ ತರ ಮಾತಾಡ್ತಾರೆ . ಕೆಲವರು ಒಂದು ತುಂಬು ಕುಟುಂಬದಲ್ಲಿ ಇದೆಲ್ಲ ಸಾಮಾನ್ಯ ಅನ್ನೋ ತರ ಕೆಲವರು ಸುಮ್ಮನಾಗಿಬಿಡ್ತಾರೆ ...ಗೆಳೆತನದಲ್ಲೂ ಕೆಲವೊಮ್ಮೆ ಯಾರದೋ ಇಬ್ಬರ ಮನಸ್ತಾಪಕ್ಕೆ ಸಂಬಂಧವೇ ಇರದ ನಮ್ಮ ಬಂಧುತ್ವ ಕಳೆದುಕೊಂಡ್ಬಿಡ್ತಾರೆ!!..ಈ ರೀತಿಯ ಅನಗತ್ಯ ವಿಷಯಗಳಿಗೆ ನಾನೂ ಬಹಳಷ್ಟು ಸಾರಿ ಹಿಂಸೆಪಟ್ಟಿದ್ದೀನಿ.
ಅದಕ್ಕೆ ಈಗ ಮಕ್ಕಳಿಗೆ ಹೇಳಿದ್ದೀನಿ . ದೊಡ್ಡೋರು ಯಾರ ಜೊತೆ ಹೇಗೆ ಇರಲಿ , ನೀವು ತಲೆ ಕೆಡಿಸ್ಕೊಳ್ಳೋದು ಬೇಡ . ಅವರು ಒಂದ್ ಹೊತ್ತ್ ಇದ್ದಂಗೆ ಮತ್ತೊಂದ್ ಹೊತ್ತಲ್ಲಿ ಇರೊದಿಲ್ಲ. ನಿಮ್ಮ ಪಾಡಿಗೆ ನೀವು ಎಲ್ಲರ ಜೊತೆ ಮಾತಾಡಿ , ಚೆನ್ನಾಗಿರಿ. keep in touch ಅಷ್ಟೇ . ಯಾಕೆ ಅಂದ್ರೆ " 'ಇಷ್ಟ ದಿನ ಎಲ್ಲಿತ್ತು ' ಅನ್ನೋ ಮಾತಿಂದ ಮನಸ್ಸಿಗೆ ನೋವಾಗೋದು ಬೇಡ ಅಂತ. ಸಣ್ಣ ಸಣ್ಣ ಮಾತುಗಳೇ ತುಂಬಾ ನೋವು ತರೋದು .
ಆದ್ರೂ, ನಮ್ಮ ಭಾವನೆಗಳನ್ನ ಇನ್ನೊಬ್ಬರ ಮೇಲೆ ಹೇರೋದು ಎಷ್ಟ್ ಸರಿ?!
ನೆನ್ನೆ ಅಮ್ಮ ಹುಟ್ಟಿದ ದಿನ , ಅಮ್ಮ ಚಿಕ್ಕಮ್ಮ ಜಗಳ ಆಡಿದ್ದಾಗ ನಾ ಚಿಕ್ಕಮ್ಮ ಹತ್ತಿರ ಮಾತಾಡಿರಲಿಲ್ಲ. ಈಗ ಅವರಿಬ್ಬರೂ ಸರಿ ಇದ್ದಾರೆ ನನಗೆ ಮಾತಾಡಿಸೋಕೆ ಮುಜುಗರ . ಚಿಕ್ಕಮ್ಮ ಈಗ ಅಮ್ಮನ ಮನೆಯಲ್ಲಿ ಇದ್ದಾರೆ ಅಂತ ನಾ ಹೋಗಿಲ್ಲ. ಅತ್ತೆ ಮನೆಗೆ ಹೋಗಿ ಬರೋ ಅಷ್ಟರಲ್ಲಿ ಮಕ್ಕಳು ಅವರ ಅಜ್ಜಿಗೆ ಕೇಕ್ ತಗೊಂಡ್ ಹೋಗಿ ವಿಷೆಸ್ ಹೇಳಿ ಬಂದಿದ್ರು . ಅಮ್ಮ ಫೋನ್ ಮಾಡಿ ಖುಷಿಪಟ್ಟರು .. ಮನಸ್ಸು ಮತ್ತದೇ ನೀಲಿ ಬಾನು ... :))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...