Thursday 20 August 2015

'ಎಲ್ಲಾ ಸರಿ ಆದ್ರೆ ನಾಗರಪಂಚಮಿ ದಿನ ಅಣ್ಣತಮ್ಮ೦ದಿರಿಗೆ , ತೌರಿಗೆ ಒಳಿತಾಗಲಿ ಅಂತ್ಲೇ ಪೂಜೆ ಮಾಡೋದು ಯಾಕೆ' ಅಂದೆ..
ಅತ್ತೆ ಒಂದ್ ಕಥೆ ಹೇಳಿದ್ರು :
ಹಿಂದೆ ಒಬ್ಬ ರೈತ ಅವನ ಹೆಂಡತಿ ಮೂರು ಮಕ್ಕಳ ಜೊತೆ ಒಂದ್ ಹಳ್ಳಿಯಲ್ಲಿ ವಾಸವಾಗಿದ್ದ. ಒಂದ್ ದಿನ ಅವನು ಹೊಲ ಉಳ್ತಾ ಇರೋವಾಗ ಅವನಿಗೆ ತಿಳಿಯದೆ ಅವನ ನೇಗಿಲಿಗೆ ಪುಟ್ಟ ಮೂರು ನಾಗರಹಾವಿನ ಮರಿಗಳು ಸಿಲುಕಿ ಸತ್ ಹೋದ್ವು. ಮರಿಗಳ ಅಮ್ಮ ನೊಂದುಬಿಟ್ಲು , ಅವನ ಮೇಲೆ ಹಗೆ ತೊಟ್ಟಳು . ರಾತ್ರಿ ಎಲ್ಲಾ ಮಲಗಿದ್ದಾಗ ರೈತ, ಅವನ ಹೆಂಡತಿ, ಹಾಗು ಇಬ್ಬರು ಗಂಡು ಮಕ್ಕಳ ಕಚ್ಚಿಬಿಡ್ತು . ಹೆಣ್ಣು ಮಗಳ ಕಚ್ಚ ಹೊರಟಾಗ ಆ ಹುಡುಗಿ ಎಚ್ಚರಗೊಂಡು ಕೈ ಮುಗಿದು ಅರಿಯದೆ ಆದ ತಪ್ಪ ಮನ್ನಿಸುವಂತೆ ಕೇಳಿದ್ಲು . ಒಂದಷ್ಟು ಊಟವಿತ್ತಳು . ಹಾವು ಸಮಾಧಾನ ಹೊಂದಿ 'ನಿನಗೇನೂ ಬೇಕೋ ಕೇಳು 'ಅಂತು . ಹುಡುಗಿ "ನನ್ನ ಅಪ್ಪ ಅಮ್ಮ, ಅಣ್ಣಂದಿರ ಉಳಿಸು . ಅರಿಯದೆ ಆಗೋ ತಪ್ಪುಗಳ ಕ್ಷಮಿಸು . ಇಂದಿನ ದಿನ ನಿನ್ನ ಪೂಜೆ ಮಾಡೋರಿಗೆ ಅಭಯ ನೀಡು. " ಅಂದ್ಲು .. ಹಾವು 'ಹಾಗೆ ಆಗಲಿ" ಅಂತ ಹೊರಟಿ ಹೋಯ್ತು ..
"ಅದಕ್ಕೆ ಮಗ, ಅಣ್ಣತಮ್ಮ೦ದಿರ ಒಳಿತಿಗೆ ತೌರಿನ ಒಳಿತಿಗೆ ಈವತ್ತು ಕೇಳಿಕೊಂಡರೆ ಒಳ್ಳೆಯದಾಗುತ್ತದೆ ...ಹಾಗೆ ನೊಗ ಕೂಡ ಕಟ್ಟೋದಿಲ್ಲ ಆವತ್ತು "ಅಂದ್ರು ಅತ್ತೆ ..
ಕಥೆ ಸುಳ್ಳೋ ನಿಜವೋ ಗೊತ್ತಿಲ್ಲ .ಪಂಚಮಿಯಂದೆ ಅಲ್ಲದೆ ಯಾವಾಗ್ಲೂ ಕೇಳೋದು ಎಲ್ಲಾರಿಗೂ ಒಳಿತಾಗಲಿ ಎಂದೇ ....ಎಲ್ಲಾ ಚೆಂದ ಇದ್ರೆ ನೋಡೋಕೂ ಚೆಂದ ಅಲ್ವೇ
ಹಂಚಿಕೊಳ್ಳಬೇಕು ಅನಿಸ್ತು ....:)))))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...