Sunday, 21 September 2014


ಬೆಟ್ಟದಂಚಲ್ಲಿ ಹುಟ್ಟಿ
ಧುಮ್ಮಿಕ್ಕಿ ಹರಿವ ನದಿಯ ನೀರ
ಪುಟ್ಟ ಹನಿಯಲ್ಲೂ
ಅಲ್ಲೆಲ್ಲೋ ಇರುವ

ಶರಧಿಯ ಅಪ್ಪುವ ಹೆಬ್ಬಯಕೆ
ನೋಡೋ ಗೆಳೆಯ !!!

Wednesday, 17 September 2014


















ನಾ ರಾಧೆಯಾಗಬೇಕೆಂದರೆ
ನೀ ಕೃಷ್ಣನಾಗಬೇಕು
ಆದರೆ
ಒಮ್ಮೆ ನನಗಾಗಿ
ರಾಮನಂತ ಕೃಷ್ಣನಾಗಬಾರದೆ ಎಂದೆ
ನನ್ನ ಸೆರಗ ಅವನ
ಮುರಳಿಯ ಒಡಲಿಗೆ ಬಳಸಿ
ಮಾತು ತಪ್ಪಲಾರೆ ಎಂದು ವಚನವಿತ್ತಿದ್ದಾನೆ .....
ನಾ ರಾಧೆಯಾಗಿ ಕಾಯುತ್ತಿದ್ದೇನೆ .......:))))
ನಾ ರಾಧೆಯಾಗಬೇಕೆಂದರೆ ನೀ ಕೃಷ್ಣನಾಗಬೇಕು ಆದರೆ ಒಮ್ಮೆ ನನಗಾಗಿ ರಾಮನಂತ ಕೃಷ್ಣನಾಗಬಾರದೆ :))))))))

Monday, 15 September 2014

 ದೇವಾ !!!!

ನನ್ನ ನಾಲಿಗೆಯ ಅವನ ಮೊಗದ ಕಲೆಯ ಅಣಕಿಸಲು
ಬಳಸಬಿಡಬೇಡ ದೇವಾ
ನನ್ನ ಮೊಗದಲ್ಲೂ ಕಲೆಗಳಿವೆ ,,,,,
ಅವನ ಬಳಿಯೂ ನಾಲಿಗೆ ಇದೆ ಎಂಬುದ
ಮರೆಸಬೇಡ ದೇವಾ !!
ಒಮ್ಮೆ ಬಾ  ಸೂರ್ಯ!!!

ಹೇ ಸೂರ್ಯ !
ಕತ್ತಲಿನ ನೋವಿನರಿವು ನಿನಗೆಲ್ಲಿದೆ ....
ಒಂದು ಸಂಜೆ
ನನ್ನ ಮನೆಯಗಂಗಳದಲ್ಲಿ ಉಳಿದುಕೋ
ನನ್ನೂರಿನ ಬೀದಿಗಳಲ್ಲಿ
ತಮದ  ನೋವಿನರಿವು ಮಾಡಿಸುವೆ ........ !!!

Thursday, 11 September 2014

ಹೀಗೊಂದು ಕಥೆ .....

ಅಂದೆಂದೋ ಅವಳು ಅಳುವಾಗ 
ಚಿಕ್ಕಮ್ಮ ಕನ್ನಡಿ ಕೊಟ್ಟು ಹೇಳಿದ್ದಳು 
'ನೋಡು , ಎಂತ ಚೆಂದದ ಮುಖ ಅತ್ತರೆ ಹೇಗೆ ಕಾಣುತ್ತೆ ನೋಡು" 
'ಹೌದಲ್ಲವಾ, ಅತ್ತರೆ ನಾ ಚೆಂದ ಕಾಣೋದಿಲ್ಲ ನಾ ಇನ್ನು ಮುಂದೆ ಅಳೋದೇ ಇಲ್ಲ ಚಿಕ್ಕಮ್ಮ .... ' 
ಮುಂದೆಂದೂ ಅವಳು ಅಳಲೇ ಇಲ್ಲ... ಅತ್ತರೆ ಮೊಗದ ಚೆಂದ ಕುಂದುವುದೆಂದು ಅಳಲೇ ಇಲ್ಲ ... 
ಇಂದೂ ಅವಳು ಅತ್ತಿದ್ದ ಯಾರು ಕಂಡಿಲ್ಲ , 
ಕನ್ನಡಿಗೂ ಕಾಣದಂತೆ ಅಳುವುದ ಪರಿಪಾಠ ಮಾಡಿಕೊಂಡವಳಲ್ಲವೇ ಅಳುವ ಕಡಲೊಳು ನಗೆಯ ದೋಣಿ ನಡೆಸುತ್ತಿದ್ದಾಳೆ ........ !!!!
ಅದೇನು ಪ್ರೀತಿಯೋ ವರುಣ ಅವಳಿಗೆ ನಿನ್ನ ಮೇಲೆ....??
ದಿನಗಟ್ಟಲೆ ನೀ ಬಾರದೆ ಹೋದರೂ...
ಉರ್ಮಿಳೆಯಂತೆ ಸೊಂಟಕ್ಕೆ ಕೈ ಆನಿಸಿ ಕಾದು..
ನೀ ಬಂದ ಒಡನೆ
ನಗುವ ಹರಡಿ,ಕಳೆ ತುಂಬಿ
ನವ ಮದುಮಗಳಾಗಿ ಬಿಡುತ್ತಾಳೆ.....
ಉದಾರ ಪ್ರೇಮಕ್ಕೆ ಉದಾಹರಣೆಯಾಗುತ್ತಾಳೆ...
ವಸುಮತಿ.......
ಕೊಡಬಾರದೇ ನನಗೆ ನಿನ್ನ ಮತಿ..

Photo: ಅದೇನು ಪ್ರೀತಿಯೋ ವರುಣ ಅವಳಿಗೆ ನಿನ್ನ ಮೇಲೆ....??
ದಿನಗಟ್ಟಲೆ ನೀ ಬಾರದೆ ಹೋದರೂ...
ಉರ್ಮಿಳೆಯಂತೆ ಸೊಂಟಕ್ಕೆ ಕೈ ಆನಿಸಿ ಕಾದು..
ನೀ ಬಂದ ಒಡನೆ 
ನಗುವ ಹರಡಿ,ಕಳೆ ತುಂಬಿ 
ನವ ಮದುಮಗಳಾಗಿ ಬಿಡುತ್ತಾಳೆ.....
ಉದಾರ ಪ್ರೇಮಕ್ಕೆ ಉದಾಹರಣೆಯಾಗುತ್ತಾಳೆ...
ವಸುಮತಿ.......
ಕೊಡಬಾರದೇ ನನಗೆ ನಿನ್ನ ಮತಿ..:)))))))
Smiless for a pleasant day.......:)))))))))
ಹೀಗೊಂದು ಮಾತು ..:))

ಒಂದು ಸಣ್ಣ ವಿಷ್ಯ . ಓದಿದ ಮೇಲೆ ಇದೂ ಒಂದು ವಿಷ್ಯನಾ ಅನ್ನಬೇಡಿ .....
ನಾವೆಲ್ಲಾ ಚಿಕ್ಕವರಿದ್ದಾಗ ಅಮ್ಮ ಅಜ್ಜಿ, ಚಿಕ್ಕಮ್ಮ ಎಲ್ಲಾ ಪಾತ್ರೆ ತೊಳೆಯೋದಿಕ್ಕೆ ಒಲೆಯಿಂದ ಬೂದಿ ತೆಗೆದು ತೆಂಗಿನ ನಾರಿನಿಂದ (ಜುಂಗು) ತೊಳೆದರೆ ಅದೆಷ್ಟು ಚೆಂದ ಕ್ಲೀನ್ ಆಗ್ತಾ ಇತ್ತು ಅಂತ ... ಆಮೇಲೆ ಕ್ಲೀನಿಂಗ್ ಪೌಡರ್ ಬಂತು , ಸೋಪ್ ಬಂತು, .. ಸ್ಕ್ರಬ್ಬರ್ (scrubber) ಬಂತು... ಡಿಶ್ ವಾಷರ್ ಕೂಡ ಬಂತು .... ಹೆಂಗೋ ಪಾತ್ರೆ ತೊಳೆದರೆ ಆಯಿತು ಅಷ್ಟೇ ...electronics fast ಯುಗ ಅಲ್ವೇ ... 
ನೆನ್ನೆ ಲಾಯಲ್ ವರ್ಲ್ಡ್ ಗೆ ಹೋಗಿದ್ದೆ ಸಾಮಾನು ತರೋಕೆ ಸ್ಕ್ರಬ್ಬರ್(scrubber) ತಗೊಳ್ವಾಗ 'ಒಂದ್ ಹೊಸ ಪ್ರಾಡಕ್ಟ್ ತೆಂಗಿನ ನಾರಿನ scrubber)ಸಿಂಥೆಟಿಕ್ ಅಲ್ಲ ಮೇಡಂ , ನೋಡಿ ಎಷ್ಟ್ ಚೆಂದ ಇದೆ 'ಅಂತು ಆ ಹುಡುಗಿ .. ನೋಡಿದೆ ಏನ್ ಚೆಂದ ಪ್ಯಾಕಿಂಗ್ ಗೊತ್ತ, ತೆಂಗಿನ ನಾರನ್ನ ಎಷ್ಟು ಚೆಂದ ಕ್ಲೀನ್ ಮಾಡಿ, ಶೇಪ್ ಮಾಡಿ ಪ್ಯಾಕ್ ಮಾಡಿ ಇಟ್ಟಿದ್ದಾರೆ ಅಂತ ... ಜಾಸ್ತಿ ಏನಿಲ್ಲ ಬರಿ 25 ರೂಪಾಯಿ ಅಷ್ಟೇ .... ಗಂಡನ ಮುಖ ನೋಡಿದೆ 'ಅದಕ್ಕಿಂತ ಚೆನ್ನಾಗಿ ನಾನೇ ಕ್ಲೀನ್ ಆಗಿ ಮಾಡಿಕೊಡ್ತೀನಿ ಬಾ , ಅದೇ 25 ರೂಪಾಯಿಗೆ ನಿನ್ನ ಮಗಳಿಗೆ 'corn(!!!)' ತಗೊಂಡು ಹೋಗೋಣ " ಅಂದ ......ಬರ್ತಾ ದಾರಿಯಲ್ಲಿ ಹೇಳ್ದ 'ನಿನ್ನ ಮೊಮ್ಮಕ್ಕಳ ಕಾಲಕ್ಕೆ ಪಾತ್ರೆ ತೊಳೆಯೋದೆಲ್ಲ ಇರೋದೇ ಇಲ್ಲ, ಏನಿದ್ರು use and throw"............
ಬದುಕಲು ಎಷ್ಟು ದಾರಿ ಅಲ್ವೇ ...... ಹಾಗೆ 'ಕಾಲ ' ಎಷ್ಟು ಬದಲಾಯ್ತು ಅಲ್ವೇ ...... !!!!!

Tuesday, 2 September 2014

ಅಣ್ಣ ತಂಗಿ.....

ಈ ಮದುವೆ ಅನ್ನೋದು ಬಂಧುತ್ವಗಳ ಬೆಸೆಯೋ ಸಾಧನ , ಅದೇನು ಸಂಭ್ರಮ, ಸಡಗರ, ಕಲರವ, ನಗು, ಅಲ್ಲೆಲ್ಲೋ ಒಂದೆರಡು 'ಸಣ್ಣ ' ಮಾತುಗಳು, ಇನ್ನೆಲ್ಲೋ ಒಂದು ಜಗಳ, ಹೆಣ್ಣುಮಕ್ಕಳ ಬಿಂಕ, ಹಿರಿಯರ ಗದರುವಿಕೆ, ಹುಡುಗರ ಕೀಟಲೆ, ಇತ್ಯಾದಿ .... ಮದುವೆಗೆ ಮೊದಲು ನಗು ಕಲರವಗಳಿಂದ ತುಂಬಿದ್ದ ಮದುವೆ ಮನೆ ಹೆಣ್ಣು ಒಪ್ಪಿಸಿಕೊಟ್ಟ ಒಡನೆ ಸ್ತಬ್ದವಾಗಿ ಬಿಡುತ್ತದೆ . 
ಅಣ್ಣನ ಮಗಳ ಮದುವೆ. ಸಡಗರ ಮುಗೀತು. ಮಗಳ ಒಪ್ಪಿಸಿಕೊಟ್ಟಾಗ ಸಿಂಹದಂತೆ ಘರ್ಜಿಸೋ ಅಣ್ಣ ಕೂಡ ಅತ್ತು ಬಿಟ್ಟ. ಒಟ್ಟಿಗೆ ಬೆಳೆದ ತಮ್ಮ ಅಕ್ಕನ ಕೈ ಹಿಡಿದು ಅತ್ತ,. ಇದ್ದುದರಲ್ಲಿ ಅಮ್ಮ ಸ್ವಲ್ಪ stable ಆಗಿ ಇದ್ಲು. ಮಗಳು ಹೊರಟೆ ಬಿಟ್ಲು . ಉಳಿದವರೆಲ್ಲ ಮನೆಗೆ ಹಿಂತಿರುಗಿದ್ದೂ ಆಯಿತು .
ನಮ್ಮ ಮೈಸೂರು, ಮಂಡ್ಯ, ಹಾಸನ ಕಡೆ ಮದುವೆ ಮುಗಿದ ಮೇಲೆ ಗಂಡಿನ ಮನೆಯವರು ಹೆಣ್ಣಿನ ಕಡೆಯವರಿಗೆ 'ಬೀಗರ ಔತಣ' ಮಾಡ್ತಾರೆ. ಆಮೇಲೆ ಮದುಮಗಳನ್ನ ಮದುಮಗನನ್ನ ಮತ್ತೆ ಹುಡುಗಿಯ ಮನೆಗೆ ಕಳುಹಿಸಿ ಅಲ್ಲಿ ಮುಂದಿನ 'ಶಾಸ್ತ್ರ' ಮಾಡಿ ಗಂಡನ ಮನೆಗೆ ಕಳುಹಿಸಿಕೊಡ್ತಾರೆ .
ಹಾಗೆ ಇವಳ ಮದುವೆ ಆದ ಎರಡು ದಿನಕ್ಕೆ ಬೀಗರ ಔತಣ ಇತ್ತು . ಹುಡುಗಿಯ ಮನೆಯವರು ಎಲ್ಲ ವ್ಯವಸ್ಥೆ ಮಾಡಿದ್ದರು. ಒಂದ್ 1 ಗಂಟೆಯ ಹೊತ್ತಿಗೆ ಮದುಮಗಳು ಗಂಡನ ಜೊತೆ ಬಂದ್ಲು . ಕಾರಿಂದ ಇಳಿದಳು . ಮದುಮಗ ಹೇಳ್ತಾ ಇದ್ದ 'ಇಲ್ಲಿಂದ ಹೋಗಿದ್ದೆ ಹೋಗಿದ್ದು, ಊಟ ಕೂಡ ಮಾಡಿಲ್ಲ ಇವ್ಳು, ಯಾಕೋ ಸೇರೋಲ್ಲ ಅಂದ್ಲು ' ಅಂತೆಲ್ಲ ಮಾತಾಡ್ತಾ ಇದ್ದ ...ಅಷ್ಟರಲ್ಲಿ ಹುಡುಗಿ ಪತ್ತೇನೆ ಇಲ್ಲಾ!! ಎಲ್ಲಿ ಹೋದ್ಲಪ್ಪ ಅಂತ ನೋಡಿದ್ರೆ ಅಲ್ಲೆಲ್ಲೋ ಒಂದು ಮೂಲೆಯಲ್ಲಿ ಹುಡುಗಿ ತಮ್ಮನ ಜೊತೆ ಚೆಂದ ಮಾತಾಡ್ತಾ ಜಗದ ಪರಿವೇನೆ ಇಲ್ಲದೆ ಐಸ್ ಕ್ರೀಂ ತಿನ್ತ ಕೂತಿದ್ದಾಳೆ !!!ತಮ್ಮ ಅಕ್ಕನ ಬಳೆಗಳ ಜೊತೆ ಆಡ್ತಾ ಅದೇನೋ ಹೇಳ್ತಾ ಇದ್ದಾನೆ, ಮತ್ತೆ ಬಿಟ್ರೆ ಹೊರಟು ಬಿಡ್ತಾಳೆನೋ ಅನ್ನೋ ಹಾಗೆ !!... ಅಲ್ಲಿಯವೆಗೂ ಅಳದೆ ಇದ್ದ ಅಳು ಆಗಲೇ ಬಂದಿದ್ದು ನೋಡಿ ಅಮ್ಮನ ಕಣ್ಣಲ್ಲಿ .... ಒಂದೇ ರಕ್ತ ಹಂಚಿಕೊಂಡು, ಒಟ್ಟಿಗೆ ಬೆಳೆದು, ಒಟ್ಟಿಗೆ ಆಡಿ , ಒಟ್ಟಿಗೆ ಅತ್ತು, ಒಟ್ಟಿಗೆ ನಕ್ಕು, ಜಗಳ ಆಡಿ, ಬಿಟ್ಟೆ ಇರಲು ಗೊತ್ತಿಲ್ಲದ ಈ ಅಣ್ಣ ತಂಗಿ, ಅಕ್ಕತಂಗಿ ಅಕ್ಕತಮ್ಮ ಅನ್ನೋ ಬಂಧುತ್ವಗಳು, ಮದುವೆ ಆದ ಒಡನೆ ಇನ್ನೆಲ್ಲೋ ಹೋಗಿ ಬದುಕಬೇಕಾಗಿ ಬರುವ ಹೆಣ್ಣು ಮಗಳು, ಹೆಣ್ಣು ಮಗಳ ಕಳುಹಿಸಿ ಬದುಕಿಗೆ ಹೊಂದಿಕೊಳ್ಳಲೇ ಬೇಕಾದ ತಂದೆ ತಾಯಿ, ಅಣ್ಣತಮ್ಮ,ಅಕ್ಕತಂಗಿಯರು.... ಮದುವೆ ಬಂಧುತ್ವ ಬೆಳೆಸುವ ಸಾಧನವೇ ಆದರೆ .......!!...... ಯಾಕೋ ಮನಸೆಲ್ಲ ಒದ್ದೆ ಒದ್ದೆ .............

ನನ್ನ ಮಕ್ಕಳು

ನನ್ನ ಮಕ್ಕಳು ಹೀಗೆ ಬೆಳೆದರು ..:))))

"ನಾನು ಸೆಲೆಕ್ಟ್ ಆಗ್ತೀನಿ ಅಲ್ವೇನೋ "
'ಸೆಲೆಕ್ಟ್ ಆಗ್ತೀಯ ಬಿಡೆ ನೀನಲ್ಲದೆ ಇನ್ಯಾರು ಸೆಲೆಕ್ಟ್ ಆಗ್ತಾರೆ ''
ಭಯ ಕಣೋ ಕಾರ್ತಿ.. ಕಾರ್ತಿ, ಈ ಕಾಯಿನ್ ಟಾಸ್ ಮಾಡೋ ಹೆಡ್ ಬಂದ್ರೆ ಸೆಲೆಕ್ಟ್ ಆಗ್ತೀನಿ, ಟೈಲ್ ಬಂದ್ರೆ ಸೆಲೆಕ್ಟ್ ಆಗೋಲ್ಲ ''
ಹೋಗೇ , ನಾನ್ ಇದೆಲ್ಲ ನಂಬೋಲ್ಲ'
'plzz ಕಣೋ .. 
'ಸರಿ'
ಇವನು ಟಾಸ್ ಮಾಡಿದ ' 'ಕೃತಿ ಅಲ್ ನೋಡೇ' ಅಂದ 
ಅವಳು ಆ ಕಡೆ ತಿರುಗಿ ಮತ್ತೆ ಈ ಕಡೆ ನೋಡೋ ಅಷ್ಟರಲ್ಲಿ ಕಾಯಿನ್ ಟಾಸ್ ಆಗಿ ಅವನ ಕೈ ಸೇರಿತ್ತು .... ಹೆಡ್ ಮೇಲೆ ಇತ್ತು 
ಅವಳಿಗೆ ಏನೋ ಖುಷಿ, 'ಅಮ್ಮ ನಾನ್ ಸೆಲೆಕ್ಟ್ ಆಗ್ತೀನಿ ' ಅಂದ್ಲು
ಅವಳು ಆ ಕಡೆ ಹೋದ ಮೇಲೆ ಮಗನನ್ನ ಕೇಳಿದೆ,'ನಾನ್ ನೋಡ್ದೆ ನೀನು ಕಾಯಿನ್ ತಿರುಗಿಸಿದ್ದು '
'ಅಯ್ಯೋ, ಅಮ್ಮ ಅವಳು ಸೆಲೆಕ್ಟ್ ಆಗ್ತಾಳೆ , ಈಗ ಟೈಲ್ ಬಂದ್ರೆ ಅವಳು ಇಡೀ ರಾತ್ರಿ ನಿದ್ತೆ ಮಾಡೋಲ್ಲ, ನಾಳೆ ಸಂಜೆ selection announce ಆಗೋವರೆಗೂ ಸುಮ್ಮನೆ tension ಆಗ್ತಾಳೆ , ಈಗ ನೋಡು ಹೆಂಗ್ ಖುಷಿ ಆಗ್ ಇದ್ದಾಳೆ ' 'ಅಂದ
ಒಂದು ಸಣ್ಣ ಮೋಸ ಕಣ್ಣಿಗೆ ......... ಮತ್ತೊಬ್ಬರಿಗೆ ಹಾನಿ ಮಾಡದ ಸುಳ್ಳು...... ಮತ್ತೊಬ್ಬರಿಗೆ ಖುಷಿ ಕೊಡುವ ಸುಳ್ಳು acceptablaaaaaaaa..???
Keeping aside the acceptables...am happy for their love for each other and will enjoy until available...........

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...