Saturday, 6 June 2015

ಮೆಲ್ಲಗಿಳಿದು ಇಳೆಯ ಚುಂಬಿಸಿ ಸದ್ದಿಲ್ಲದೇ ಹೊರಟ ವರುಣ
ಹೇಳಲಾರೆ ಮಿಲನದ ಗುಟ್ಟು ಎಂಬಂತೆ ನಿಂತಳು ಇಳೆ
ಆದರೆ ....
ಆ ಗರಿಕೆಯ ತುದಿಯ ಹನಿ ...
ಆ ಹಸಿರೆಲೆಯ ರಂಗು....
ಆ ಪುಟ್ಟ ಗುಲಾಬಿಯ ಉಸಿರು....
ಅವನಾಗಮನವ ಉಸುರಿ ಬಿಟ್ಟಿತು ............

ಅವ ಬಂದು ಹೋದ ಕುರುಹುಗಳ ಅಳಿಸಿಬಿಟ್ಟೆ ಎಂದಳು
ಆದರೆ...
ಕಣ್ಣ ತುದಿಯ ಮಿಂಚು....
ತುಟಿಯಂಚಿನ ಹುಸಿನಗು.........
ಮೊಗದ ನರುಗೆಂಪು.....
ನಸುಕಂಪಿಸುವ ಬೆರಳು ....
ಮುದುರಿದ ಸೆರಗಿನ ಅಂಚು ಅವಳ ಗುಟ್ಟನ್ನ ರಟ್ಟಾಗಿಸಿತು...  :))))))

Monday, 1 June 2015

ಹಿರಿಯರೊಬ್ಬರು ಕೇಳಿದ್ರು 'ಅದ್ಯಾಕೆ ನೀ ಯಾವುದಕ್ಕೂ ಧೈರ್ಯ ಮಾಡೋದಿಲ್ಲ , ನಿನ್ನ ಅಭಿಪ್ರಾಯ ಹೇಳೋ(ರೋ)ದಿಲ್ಲ .... ಮಾತಾಡೋದಕ್ಕೆ ಆಗ್ಲಿ ಮುಂದೆ ಬರೋದಿಲ್ಲ ???'
ಮಾತಾಡೋಕೆ , ನನಗೆ ಅನಿಸಿದ್ದು ಮಾಡೋದಕ್ಕೆ ನನಗೆ ಧೈರ್ಯ ಬೇಡ ಭಂಡತನ ಸಾಕು ... ನನಗೆ ನನ್ನ ಅಭಿಪ್ರಾಯ ಹೇಳಿ ಯಾರನ್ನೋ ಬದಲಿಸ್ತೀನಿ, ಬದಲಿಸಬೇಕು ಅನ್ನೋ ಹಠ ಇಲ್ಲ ... ಹಾಗಂತ ನನ್ನ ಅಭಿಪ್ರಾಯವನ್ನು ಯಾರಿಗಾಗಿಯೂ ಬದಲಿಸೋದಿಲ್ಲ ... ಯಾರಿಗಾದರು ಹರ್ಟ್ ಆಗುವಂತೆ ಮಾತನಾಡಿದರೆ ಮೊದಲು ನೋವಾಗುವುದು ನನಗೇನೆ ... ಅದಕ್ಕೆ ಯಾಕೆ ಹೇಳಿ ನೋಯಿಸೋದು ..... Many say, u remain in a safer zone ...But I stay in a comfort zone gee........ ನನಗೆ ಖುಷಿ ಕೊಡದ ಇತರರಿಗೆ ನೋವಾಗುವ ಮಾತು ಯಾಕೆ ಅನ್ನೋದು ನನ್ನ ಅಭಿಪ್ರಾಯ ಅಷ್ಟೇ ........ ಆದರೆ ನನಗೆ ತಿಳಿದವರ ಹಾದಿ ತಪ್ಪು ಅನಿಸಿದಾಗ ಅವರು ನನ್ನ ಮಾತಿಗೆ "ಬೆಲೆ" ಕೊಡುವವರು ಅನಿಸಿದಾಗ ಅವರಿಗೇ ಹೇಳಿಬಿಡೋದು ಚೆಂದ ಅಷ್ಟೇ ... ಮುಂದಿನದು ಅವರಿಗೆ ಸೇರಿದ್ದು ಅಲ್ವೇ ......ಅನೇಕರು ಹೇಳುವಂತೆ 'Safer zone ...But for me......my comfortable Zone..... .ಮಾತು ಮನಸ್ಸಿನ ಮೃತ್ಯು ಆಗೋದು ಎಷ್ಟ್ ಹೊತ್ತು ...... ಅದಕ್ಕೆ ಮಾತು ಕಡಿಮೆ ಆದಷ್ಟೂ ಹಿತ .. ಅಲ್ವೇ .........

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...