Friday, 11 March 2011

ಮೌನದ ಮಾತು

 ಮೌನವೇ ಹೆಚ್ಚು ಪ್ರಿಯವಾಗುತ್ತಿದೆ ನನಗೆ...
ಮಾತು ಬೇಡ ಎನಿಸುತ್ತಿದೆ.....
ಅನರ್ಥವಾಗದ  ಮೌನ...
ಬರಿದಾಗದ ಭಾವ .....
ತಿಳಿಯಾದ  ಮನಸು .....
ಬತ್ತಲಾರದ ಸ್ನೇಹ ...
ಬತ್ತದ ಪ್ರೀತಿ ಒರತೆ....
ಅಳಿಯಲಾರದ ಭರವಸೆ ....
ಅಳಿಸಲಾಗದ ನನ್ನ ನಿನ್ನ ಬಂಧುತ್ವ..
ಹೇಳದೆಯು.. ನೋಡದೆಯೂ...ಹಾಗೆ ಇರುವಾಗ......
ಮಾತುಗಳು ಬೇಕೇ???.......

Monday, 7 March 2011

ಸಾಂಗತ್ಯ

ನನ್ನ ನಿನ್ನ ಸಂಬಂಧವೇ ಹೀಗೆ......ಗೆಳೆಯ
ಬೇಕು ಎಂದರೂ ಸನಿಹ ಇರಲಾಗದೆ.......ಬೇಡ ಎಂದರೂ ಸಾಂಗತ್ಯ ಬಿಡಲಾಗದೆ .....ಅಗತ್ಯ ಅನಗತ್ಯಗಳ ವ್ಯತಾಸವೇ ತಿಳಿಯದ ಹಾಗೆ......ನನ್ನದಲ್ಲದ್ದು ನನ್ನದಾದ ಹಾಗೆ ......ನನ್ನ ನಿನ್ನ ನಡುವೆ ಎಲ್ಲ ಇದ್ದರೂ ಏನೂ ಇಲ್ಲದ ಹಾಗೆ........
ಏನು ಇಲ್ಲದಿದ್ದರೂ ಎಲ್ಲ ಇದ್ದ ಹಾಗೆ.....
ಪ್ರೀತಿ ಇದ್ದೂ ಪರವಾನೆಗೆ ಇಲ್ಲದ ಹಾಗೆ..........
ಬಂದಗಳಿಲ್ಲದ ಸಂಬಂಧ...........
ಆದರೂ ಪ್ರೀತಿಯಲ್ಲಿ ಬಂಧಿಗಳು ನಾವು

ಕಣ್ಣಿಗೇ ಕಾಣದ ಹಾಗೇ....

ಸಾವಿನಾಚೆಯ ಬದುಕು


ನಿನಗಾಗಿ ಕಾಯುವ ನನ್ನ ಹೆಗಲ ಮೇಲೆ ..
ಮತ್ತೊಂದು ಹಗಲು ಇನ್ನೊಂದು ಇರುಳು
ಕಳೆದು ಹೋಗಿದೆ ಗೆಳೆಯ
ವರುಷಗಳೇ ಉರುಳಿದರು ಈ ಕಾಯುವಿಕೆ ಬದಲಾಗದು
ನೀನು ಬರಲಾರೆಯೆಂದು ನನಗೆ ತಿಳಿದಿದ್ದರೂ......
ನಾನು ಕಾಯುತ್ತಿರುವೆ ಎಂದು ನಿನಗೆ ಅರಿವಿದ್ದರೂ...
ನಮಗಿಬ್ಬರಿಗೂ ಗೊತ್ತು....
ಅದು ಕಾಯುವಿಕೆಯಲ್ಲ..
ವಿರಹವಲ್ಲ...ಮೋಹವಲ್ಲ.....
ಅದು ಪ್ರೀತಿ ಪ್ರೇಮಕ್ಕು ಮೀರಿದ
ಸುಂದರ ಅನುಬಂಧ ಎಂದು
ಅದಕ್ಕೆ ಬಂಧವಿಲ್ಲ...ಮುಪ್ಪಿಲ್ಲ......
ಆದರೂ ನಾನು ಕಾಯುವೆ ಗೆಳೆಯ
ಸಾವಿನಾಚೆಯ ಬದುಕಿನ ಮಿಲನಕ್ಕಾಗಿ..ಮೌನವಾಗಿ........

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...