Friday, 8 April 2011

ಹೀಗೊಬ್ಬಳು ಗೆಳತಿ...ನಾನಲ್ಲದ ನಾನು!!!!!












ಮುದ್ದು ಮುಖದ ಅರಳಿದ ನಗುವಿನ ಸೊಬಗಿ ನನ್ನ ಗೆಳತಿ..
ನಗುವಿನ ಚಿಲುಮೆ......ಒಲುಮೆಯ ಜಲಪಾತ.
ಅಬ್ಬಬ್ಬ ...ಎಂದು ಮತ್ಸರ ಪಡುವಷ್ಟು ಪ್ರೀತಿಯ ಹರಿಸುವ ಮಹಾನದಿ...
ಆದರೆ .....
ಆ ಸುಂದರ ಕಣ್ಣುಗಳ ಹಿಂದೆ ನೋವು ಅಡಗಿದೆ...
ಆ ನಗುವಿನ ಹಿಂದೆ ಏಕಾಂಗಿ ಹೃದಯದ ಹಾಡಿದೆ..
ಆ ಪ್ರೀತಿಯ ಒರತೆಯ ಹಿಂದೆ ಭರಿಸಲಾರದಷ್ಟು ಪ್ರೀತಿಯ ಕೊರತೆ ಇದೆ....
ಅಂದಿನ ಮಾಸದ ಘಾಯದ ಗುರುತಿದೆ...

ಎಲ್ಲರ ನಡುವೆ ಇದ್ದಾಗ ..
ಅಳಿಸಲಾರದ ನಗೆಯ ಚೆಲುವೆ ,
ಯಾರು ಇಲ್ಲದಿರುವಾಗ.....
ಕಣ್ಣಿರ ಕಡಲಾಗುತ್ತಾಳೆ......
ಮೌನದ ಮಡುವಾಗುತ್ತಾಳೆ....

ಆದರೂ....
ಆ ನೋವಿಗೆ ಕಾರಣ ಯಾರೇ ಆದರೂ..ಏನೇ ಆದರು....
ಕ್ಷಮಿಸೆಂದು ಕೇಳದಿದ್ದರೂ ಕ್ಷಮಿಸುತ್ತ...
ಮತ್ತೆ ನಗುತ್ತಲೇ ಮುನ್ನಡೆಯುತ್ತಿದ್ದಾಳೆ...
ಹೆಜ್ಜೆ ಹೆಜ್ಜೆಗೂ ನಗೆಯ ಮುತ್ತು ಸುರಿಸುತ್ತ...
ಬೆಳಕಿನ ಕಿರಣದ ಜಾಡು ಹಿಡಿದು...
ಇಂದಲ್ಲ ನಾಳೆ....ನಾಳೆಯಲ್ಲದಿದ್ದರೆ ಮತ್ತೊಂದು ದಿನ...
ಎಂಬ ಆಸೆಯ ಮೂಟೆಯ ಹೊತ್ತು...
ತನ್ನ ನಂಬಿದವರಿಗಾಗೀ..ಧೃಡವಾಗಿ....ನಗೆಯ ಚಿಲುಮೆಯಾಗಿ...

ಅರ್ಪಣೆ: ಅಂತಹ ಗೆಳತಿಯರಿಗಾಗೀ
 

Thursday, 7 April 2011






ನನಗೆ ರಾಧೆಯಾಗುವ ಅಸೆ ಕೃಷ್ಣ..
ಸತ್ಯಭಾಮೆಯ ಪಟ್ಟ ಬೇಡ.......
ರುಕ್ಮಿಣಿಯ ಸ್ಥಾನ ಬೇಡ..........
ನಿನ್ನ ನೋವಿಗೆ ಪಾದೋದಕ ಕೊಡದ.....
ಪಟ್ಟ ಸ್ಥಾನ ಯಾವುದು ಬೇಡ.........
ನಿನ್ನ ಗೆಲುವಿಗೆ ನನ್ನ ನಗೆ ಬೆರಸಿ....
ನಿನ್ನ ಸೋಲಿನಲ್ಲಿ ನನ್ನ ಸಾಂತ್ವಾನ ಸೇರಿಸಿ....
ನಿನ್ನ ಹೆಜ್ಜೆಗೆ ನನ್ನ ಹೆಜ್ಜೆ ಕೂಡಿಸಿ.......
ಇದ್ದರೂ ಇಲ್ಲದಂತೆ.......ಇಲ್ಲದಿದ್ದರೂ ಇದ್ದಂತೆ.....
ನಿನ್ನ ಮನದೊಳಗೆ ....ನಿನ್ನ ಎದೆಯೊಳಗೆ ........ನಿನ್ನೊಳಗೆ.........
ನನಗೆ ರಾಧೆಯಾಗುವ ಆಸೆ ಕೃಷ್ಣ..........




ಜೀವಜಲ

ಅಂಗಳದಿ ಸುರಿದ ಬೆಳದಿಂಗಳು ........
ತಿಂಗಳನ ಬೆಳಕಿನಲ್ಲಿ ತುಂತುರು ಹನಿಗಳು .....
ಮನದ ತುಂಬಾ ಪ್ರೀತಿಯ ಶರಧಿ ಉಕ್ಕಿಸುತ್ತದೆ ಗೆಳೆಯ.......
ಇವನಾರು............ಇದೇಕೆ ಈ ಪ್ರೀತಿ ....
ಮೊದಲ ನೋಟದ ಪ್ರೀತಿಯನ್ನಲು.....ನಿನ್ನ ರೂಪ ಕಣ್ಣ ತುಂಬಾ ತುಂಬಿಕೊಂದಿಲ್ಲ ....
ಮೋಹವೆನ್ನಲು ..ನಿನ್ನ ಬೆರಳ ತುದಿಯ ಸ್ಪರ್ಶ ಸುಖದ ಅರಿವಿಲ್ಲ....
ಬಂಧುತ್ವವವೇ........ಬಂಧನವೇ ಇಲ್ಲ......
ಜನುಮಗಳ ಅನುಬಂಧವೆನಲು .....ಜನ್ಮದ ತಿಳಿವಿಲ್ಲ......
ಮತ್ತೇಕೀ ವ್ಯಾಮೋಹ...ಮತ್ತೇಕೀ ಸೆಳೆತ.........
ವೇಣು ವಾದನಕ್ಕೆ ಸೋತ ರಾಧೆಯಂತೆ........
ಸಾಗರ ಸೇರುವ ಹಂಬಲಿಕೆಯ ನದಿಯಂತೆ....
ಉತ್ತರವಿಲ್ಲದ ಪ್ರಶ್ನೆಗೆ ಚಂದಿರ ಉತ್ತರಿಸಿದ......
ನಿನ್ನ ಅಂಗಳದಿ ಸುರಿದ ಬೆಳದಿಂಗಳು .....ಅಲ್ಲೂ ಇದೆ.....
ಭೋರ್ಗರೆವ ಮಳೆ ಅಲ್ಲೂ ಇದೆ.....
ಮನದ ತುಂಬಾ ಒಲವಿನ ಅಲೆಗಳು...ಅಲ್ಲೂ ಇದೆ..
ಮತ್ತೆಕಿರಬಾರದು ವ್ಯಾಮೋಹ..ಮತ್ತೆಕಿರಬಾರದು ಸೆಳೆತ....
ಹೌದಲ್ಲವೇ ಗೆಳೆಯ...............
ಭುವಿಗೆ ಸೋಕಿಯು ಸೊಕದಂತಿರುವ ಬಾನಿನಂತೆ ...
ನೀನು ಅಲ್ಲಿ ನಾನು ಇಲ್ಲಿ........ಚಂದಿರನ ರಾಯಭಾರದಲ್ಲಿ.....
ಸ್ಪರ್ಶವಿಲ್ಲದೆ, ನೋಟವಿಲ್ಲದೆ, ಒಲವಿನ ದೋಣಿಯಲ್ಲಿ.
ಇದ್ದರು ಇಲ್ಲದಂತೆ....ಇಲ್ಲದಿದ್ದರೂ ಇದ್ದಂತೆ...ಬದುಕಿನ ಪಯಣದಲ್ಲಿ
ಬದುಕಿಗೆ ಬೆಳಕಾಗಿ...ಜೀವಜಲವಾಗಿ.........

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...